ಹಿಂದೆ ಗುರುವಿದ್ದು ಮುಂದೆ ಗುರಿಯಿದ್ದರೆ ಜಗತ್ತೆ ಗೆಲ್ಲಬಹುದು : ಫಯಾಜ ಕಲಾದಗಿ

If there is a Guru in the past and a goal in the future, the world can be won: Fayaza Kaladagi

ಹಿಂದೆ ಗುರುವಿದ್ದು ಮುಂದೆ ಗುರಿಯಿದ್ದರೆ ಜಗತ್ತೆ ಗೆಲ್ಲಬಹುದು : ಫಯಾಜ ಕಲಾದಗಿ 

ವಿಜಯಪುರ 16 : ಹಿಂದೆ ಗುರುವಿದ್ದು ಮುಂದೆ ಗುರಿಯಿದ್ದರೆ ಜಗತ್ತೆ ಗೆಲ್ಲಬಹುದು ಎಂದು ಫಯಾಜ ಕಲಾದಗಿ ಹೇಳಿದರು.ಅವರು ನಗರದ ಡಾ.ಬಿ.ಆರ್‌.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯಪುರ ಅಥ್ಲೇಟಿಕ್ಸ್‌ ಸ್ಪೋರ್ಟ್ಸ್‌ ಕ್ಲಬ್ ವತಿಯಿಂದ ಆಯೋಜಿಸಲಾದ ಜಿಲ್ಲಾಮಟ್ಟದ 14 ರಿಂದ 17 ವಯೋಮಿತಿಯ ಬಾಲಕ ಬಾಲಕಿಯರ ಅಥ್ಲೇಟಿಕ್ಸ್‌ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. 

ಕ್ರೀಡೆಯು ಮನುಷ್ಯನ ಆರೋಗ್ಯ ಸದೃಢಗೊಳಿಸುತ್ತದೆ. ಕ್ರೀಡಾಭಿಮಾನವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ವಿಜಯಪುರ ಜಿಲ್ಲೆಯು ಐತಿಹಾಸಿಕ ಸ್ಥಾನದಲ್ಲಿ ನಿಂತಿದೆ. ಇಲ್ಲಿ ಕ್ರೀಡೆ ಸಾಧಕರಿಗೆ ಕಡಿಮೆಯಿಲ್ಲ, ವಿಜಯಪುರ ಜಿಲ್ಲೆಯ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರಾಷ್ಟಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕ್ರೀಡಾಸಕ್ತರು ಕ್ರೀಡೆಯಲ್ಲಿ ತೊಡಗಿಕೊಂಡು ಅಮೋಘ ಸಾಧನೆಗೆ ಮುಂದಾಗಬೇಕು ಎಂದರು. 

ಈ ಸಂದರ್ಭದಲ್ಲಿ ನಿವೃತ್ತ ದೈಹಿಕ ನಿರ್ದೇಶಕರಾದ ಡಾ. ಅಶೋಕ ಕುಮಾರ ಜಾಧವ ಮಾತನಾಡಿ, ಕ್ರೀಕೆಟ್ ಜೊತೆಗೆ ಪ್ರತಿಯೊಂದು ಕ್ರೀಡೆಗಳಲ್ಲಿ ನಮ್ಮ ವಿಜಯಪುರ ಜಿಲ್ಲೆಯ ಸಾಧಕರು ಮಿಂಚಬೇಕು. ಕ್ರಿಕೇಟ್ ಕ್ರೀಡೆಯನ್ನು ಪ್ರತಿಯೊಬ್ಬರು ಆರಾಧಿಸುತ್ತಾರೆ. ಅದರಂತೆ ಪ್ರತಿಯೊಂದು ಕ್ರೀಡೆಗಳನ್ನು ಆರಾಧಿಸಿದರೆ ಕ್ರೀಡೆಯಲ್ಲಿ ಕ್ರೀಡಾಸಕ್ತರು ಯಶಸ್ವಿಗಳಿಸಲು ಸಾಧ್ಯ ಎಂದರು. ಕ್ರೀಡಾಸಕ್ತರು ಸಾಧನೆ ಮಾಡಲು ಪ್ರೇರೆಪಿಸಲು ಅವರಿಗೆ ಸಹಾಯ ಹಸ್ತ ಚಾಚಲು ನಾವು ಸದಾ ಸಿದ್ಧರಿದ್ದೇವೆ ಎಂದರು. 

ಈ ಸಂದರ್ಭದಲ್ಲಿ ಸ್ಪರ್ಧೆಯ ಓವರ್ ಆಲ್ ಚಾಂಪಿಯನ್ ಮೊದಲನೆ ಬಹುಮಾನ ವಿಜಯಪುರ ಅಥ್ಲೇಟಿಕ್ಸ್‌ ಸ್ಪೋರ್ಟ್ಸ್‌ ಕ್ಲಬ್ ಹಾಗೂ ದ್ವಿತೀಯ ಬಹುಮಾನ ಸಂತ ಜೋಶಫ್ ಶಾಲೆಯ ಕ್ರೀಡಾಪಟುಗಳು ಪಡೆದರು. 

ಈ ಸಂದರ್ಭದಲ್ಲಿ ಎಚ್‌.ಎಸ್‌.ಕಬಾಡೆ, ಗಣೇಶ ಭೋಸಲೆ, ಸಾಧಿಕ ಜಾನ್ವೇಕರ, ಶಫೀಕ ಜಾಗೀರದಾರ, ಸಂತೋಷ ರಾಠೋಡ, ಮಹಮ್ಮದ ಇರ್ಫಾನ ಹಿಟ್ನಳ್ಳಿ, ಗೋಪಾಲ ಲಮಾಣಿ, ಮುಸ್ತಾಕ ಹಾದಿಮನಿ, ಅಬ್ದುಲ ಮಾಣಿಕ, ಪ್ರೀತಿ ಕಾಳೆ ವೇದಿಕೆ ಮೇಲಿದ್ದರು.  

ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರುಗಳಾದ ಶ್ರೀಧರ ರಾಠೋಡ, ಅಮಿತ ತಳವಾರ, ಶ್ರವಣ ಚವ್ಹಾಣ,ಈರಯ್ಯ ಲಕ್ಕುಂಡಿ ಮಠ, ಬಸವರಾಜ ನಾಗೋಡ, ದಾನಯ್ಯ ಮಠಪತಿ, ಲಕ್ಷ್ಮೀ ಕಮತಗಿ, ಸೃಷ್ಟಿ ಹನುಮಗೊಂಡ, ಮಲ್ಲಿಕಾರ್ಜುನ ಪೂಜಾರಿ, ರಕ್ಷಿತಾ ಬಾವುಚಿ, ಸುನೀಲ ಗೊಳವೆ, ಮಹಾದೇವ ಗೊರವ, ಯಶವಂತ ತಗ್ಗಿನಮನಿ, ಸಂದೀಪ ರಾಠೋಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.