ಬಡ್ತಿ ಮೀಸಲಾತಿ ಶೀಘ್ರ ಜಾರಿಗೊಳಿಸದಿದ್ದರೆ ಹೋರಾಟ: ಬೀರಪ್ಪ

ಲೋಕದರ್ಶನ ವರದಿ

ಕೊಪ್ಪಳ 03: ಸುಪ್ರೀಂಕೋರ್ಟನ ಆದೇಶದಂತೆ ವಿಕಲಚೇತನರಿಗೆ ಅವರ   ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇಕಡಾ 3ರಷ್ಟು ಬಡ್ತಿ ಮೀಸಲಾತಿ ಆದೇಶವನ್ನು ರಾಜ್ಯ ಸರಕಾರವು ಶೀಘ್ರವೇ ಜಾರಿಗೊಳಿಸದಿದ್ದರೆ ಸಂಘದ ವತಿಯಿಂದ ಬೃಹತ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.

         ಅವರು ನಗರದ ಸದರ್ಾರಷಾವಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಕಲಚೇತನ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ ವಿಕಲಚೇತನ ಸಕರ್ಾರಿ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇಕಡಾ 3 ರಷ್ಟು ಬಡ್ತಿ ಮೀಸಲಾತಿ ಆದೇಶ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ ದೇಶದ ಎಲ್ಲಾ ರಾಜ್ಯಗಳಿಗೆ ಆದೇಶ ಮಾಡಿ ಮೂರು ವರ್ಷ ಕಳೆದರು ಕೂಡಾ ಯಾವುದೇ ಆದೇಶ ಜಾರಿಯಾಗಿಲ್ಲ.ಈಗಾಗಲೇ ಎಲ್ಲಾ ಇಲಾಖೆಯಲ್ಲಿ ಬಡ್ತಿ ನೀಡುವ ಪ್ರಕ್ರೀಯೆಯು ನಡೆಯುವುದರಿಂದ ವಿಕಲಚೇತನ ನೌಕರರು ಈ ಒಂದು ಸೌಲಭ್ಯದಿಂದ ವಂಚಿತರಾಗುತ್ತಿದ್ದು,ರಾಜ್ಯ ಸಕರ್ಾರವು ಶೀಘ್ರವೇ ಬಡ್ತಿ ಮೀಸಲಾತಿ ಆದೇಶವನ್ನು ಜಾರಿಗೊಳಿಸಬೇಕು ಇಲ್ಲದಿದ್ದರೆ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಬೆಂಗಳೂರು  ನಗರದ ಸ್ವತಂತ್ರ ಉದ್ಯಾನವನದಲ್ಲಿ ಬೃಹತ ಹೋರಾಟವನ್ನು ನಡೆಸಬೇಕಾಗುತ್ತದೆ ಜೊತೆಗೆ ರಿಯಾಯತಿ ದರದಲ್ಲಿ ನೀಡಲಾಗುವ ವಿಕಲಚೇತನರ ಬಸ್ಸ್ ಪಾಸಿನ ಸೌಲಭ್ಯವನ್ನು ಸಕರ್ಾರಿ ವಿಕಲಚೇತನ ನೌಕರರಿಗೆ ಜಾರಿಗೊಳಿಸಬೇಕು. ಶಿಕ್ಷಕರ ವಗರ್ಾವಣೆಯಲ್ಲಿ ವಿಕಲಚೇತನ ಶಿಕ್ಷಕರಿಗೆ ಒಂದು ಕಡೆಯಲ್ಲಿ ಮೂರು ವರ್ಷ ಕಾರ್ಯನಿರ್ವಹಿಸಬೇಕು ಎಂಬ ನಿಯಮದಿಂದ  ವಿನಾಯತಿ ನೀಡಬೇಕು. ಅನೇಕ ವಿಕಲಚೇತನರ ಮೇಲೆ ವಿನಾ ಕಾರಣ ಮೇಲಾಧಿಕಾರಿಗಳು ಕಿರುಕುಳ ನೀಡುವ ಪ್ರಸಂಗಗಳು ಕಂಡು ಬರುತ್ತಿದ್ದು ಅಂತಹ ಅಧಿಕಾರಿಗಳ ವಿರುದ್ದ ಸಂಘದ ವತಿಯಿಂದ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಅಂದಪ್ಪ ಬೋಳರೆಡ್ಡಿ ಮಾತನಾಡಿ, ವಿಕಲಚೇತನರ ಬಗ್ಗೆ ಅನುಕಂಪವನ್ನು ವ್ಯಕ್ತಪಡಿಸುವ ಬದಲು ಅವರಿಗೆ ಹೆಚ್ಚು ಹೆಚ್ಚು ಅವಕಾಶವನ್ನು ಒದಗಿಸಿಕೊಡಬೇಕು. ಅಂದಾಗ ಮಾತ್ರ ಅವರಲ್ಲಿ ಇರುವ ಪ್ರತಿಭೆಯು ಹೊರಬರಲು ಸಾಧ್ಯವಾಗುತ್ತದೆ. ಅವಕಾಶವನ್ನು ಒದಗಿಸಿ ಕೊಡುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ಶಾಲೆಯ ಮುಖ್ಯೋಪಾಧ್ಯಾಯರಾದ ಭರಮಪ್ಪ ಕಟ್ಟಿಮನಿ ಮಾತನಾಡಿ,   ರಾಜ್ಯ ಮತ್ತಯ ಕೇಂದ್ರ ಸರಕಾರಗಳು ವಿಕಲಚೇತನರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.ಅಂತಹ ಅನೇಕ ಯೋಜನೆಗಳ ಯಾವ ಇವೇ ಎಂಬುದು ಇನ್ನೂ ವಿಕಲಚೇತನರ ಬಳಿ ಮಾಹಿತಿ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ.ಸರಕಾರವು ಯೋಜನೆಗಳನ್ನು ಜಾರಿಗೆ ಮಾಡಿ,ಆ ಯೋಜನೆಗೆ ಒಳಪಡುವವರಿಗೆ ತಪುವಂತೆ ಅದರ ಬಗ್ಗೆ ಜಾಗೃತಿ ಮೂಡಿಸುವಂತ ಕಾರ್ಯವಾಗಬೇಕು ಅಂದಾಗ ಮಾತ್ರ ಯೋಜನೆ ಮತ್ತು ಸೌಲಭ್ಯಗಳು ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತವೆ. ವಿಕಲಚೇತನರು ಅನೇಕ ಕ್ಷೇತ್ರದಲ್ಲಿ ವಿಶಿಷ್ಟ ರೀತಿಯ ಸಾಧನೆಯನ್ನು ಮಾಡುತ್ತಿದ್ದು,  ಅಂತಹ ವಿಶಿಷ್ಟ ಸಾಧನೆಯನ್ನು ಗುರುತಿಸಿ ಗೌರವಿಸುವಂತ ಕೆಲಸ ಪ್ರತಿಯೊಬ್ಬರಿಂದಾಗಬೇಕು ಎಂದು ಹೇಳಿದರು.

  ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯ ಖಜಾಂಚಿ ಮಂಜುನಾಥ ಹಿಂಡಿಹುಳ್ಳಿ, ತಾಲೂಕ ಅಧ್ಯಕ್ಷರಾದ ಅಂದಪ್ಪ ಇದ್ಲಿ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಮಂಜುನಾಥ ಬುಲ್ಟಿ, ಸಮೀಮಭಾನು, ಶಾರದಾಬಾಯಿ ಮುಂತಾದವರು ಹಾಜರಿದ್ದರು. ಶಿಕ್ಷಕಿ ಗಂಗು ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಶಿಕ್ಷಕಿ ಅಬೀಬ್ಹುನ್ನಿಸ್ಸಾ ಸ್ವಾಗತಿಸಿ, ಶ್ರೀದೇವಿ ವಂದಿಸಿದರು.