ಗದಗ: ವಿಶ್ವದಾದ್ಯಂತ ದಿ. 16ರಂದು ಸಪ್ಟಂಬರ್ ಪ್ರತಿವರ್ಷ ವಿಶ್ವ ಓಝೋನ್ ದಿನಾಚರಣೆಯನ್ನು ಆಚರಿಸಲಾಗುತ್ತದೆ, ನಿಸರ್ಗವು ಓಝೋನ್ ಪದರವನ್ನು ನಮಗೆ ನೀಡಿರುವ ಒಂದು ಕೊಡುಗೆ, ಓಝೋನ್ ದಿನಾಚರಣೆಯ ಮಹತ್ವ ತಿಳಿಸುತ್ತಾ ಓಝೋನ್ ಪದರ ನಾಶವಾದರೆ ಮನುಷ್ಯನ ನಾಶ ಖಂಡಿತ ಏಕೆಂದರೆ ಓಝೋನ್ ಪದರದಿಂದ ಮಾತ್ರ ಮನುಷ್ಯನಿಗೆ ಸೂರ್ಯನ ಶುದ್ದ ಕಿರಣ ಸಿಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮನುಷ್ಯ ಈಗಲಾದರೂ ಎಚ್ಚೆತ್ತು ಪರಿಸರ ನಾಶವನ್ನು ನಿಲ್ಲಿಸಿ ಗಿಡಮರಗಳನ್ನು ಬೆಳೆಸಲು ಪ್ರಯತ್ನಿಸಬೇಕು ಸಾಧ್ಯವಾದಷ್ಟು ಮಾನವ ಪ್ರಕೃತಿಯಲ್ಲಿ ಹಸ್ತಕ್ಷೇಪವನ್ನು ಕಡಿಮೆ ಮಾಡಬೇಕು ಮಿತ ಬಳಕೆ ಮತ್ತು ಮರುಬಳಕೆಗೆ ಆದ್ಯತೆ ಕೊಡಬೇಕು ಎಂದು ಬಿ ರುದ್ರೇಶ್, ತಿಳಿಸಿದರು.
ಜಿಲ್ಲಾಡಳಿತ, ಪ್ರಾದೇಶಿಕ ಕಛೇರಿ, ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗದಗ ಹಾಗೂ ಬಸವೇಶ್ವರ ಪ್ರೌಢ ಶಾಲೆ, ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ "ವಿಶ್ವ ಓಝೋನ್ ದಿನಾಚರಣೆ-2018ರ ಕಾರ್ಯಕ್ರಮನ್ನು ದಿ. 22ರಂದು ಮುಂಜಾನೆ-11-00 ಗಂಟೆಗೆ ಬಸವೇಶ್ವರ ಪ್ರೌಢ ಶಾಲೆ, ಗದಗದಲ್ಲಿ ಏರ್ಪಡಿಸಲಾಗಿತ್ತು. ಪರಿಸರ ಅಧಿಕಾರಿಗಳು, ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಗದಗ ಇವರು ಮೊದಲಿಗೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮಂಡಳಿಯ ಪ್ರಾದೇಶಿಕ ಕಛೇರಿಯ ಕಾರ್ಯಚಟುವಟಿಕೆ ಕುರಿತು ವಿದ್ಯಾಥರ್ಿಗಳಿಗೆ ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಕೆ. ಬಿ ಕೊರಡ್ಡಿ ವಿಜ್ಞಾನ ಶಿಕ್ಷಕರು ಇವರು ಮಾತನಾಡುತ್ತಾ ಹೆಚ್ಚು ಅರಣ್ಯಗಳಿದ್ದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗಿ ಕಾರ್ಬನ್ ಡಯಾಕ್ಸ್ಯಡ್ ಹೀರಿಕೊಂಡು ವಾಯು ಮಾಲಿನ್ಯ ಕಡಿಮೆಯಾಗಿ ಶುದ್ದ ಗಾಳಿಯ ಪ್ರಮಾಣ ಹೆಚ್ಚಾಗುತ್ತದೆ.
ಮನುಷ್ಯನ ಸುತ್ತಮುತ್ತಲಿನ ಪರಿಸರ ಹಸಿರಿನಿಂದ ಕಂಗೊಳಿಸಿದರೆ ಹಾಗೂ ಪ್ರಾಣಿ ಪಕ್ಷಿಗಳ ಇರುವಿಕೆಯಿಂದ ಜೀವನ ಸುಂದರವಾಗಿರುತ್ತದೆ, ಓಝೋನ್ ಪದರ ಸ್ಥರಗೋಲದಲ್ಲಿ ಇರುತ್ತದೆ, ಸೂರ್ಯನಿಂದ 7 ವಿಧದ ಕಿರಣಗಳು ಬೀಳುತ್ತವೆ, ಓಝೋನ್ ಪದರದಲ್ಲಿ ರಮದ್ರಗಳು ಉಂಟಾಗಿದ್ದರಿಂದ ಸೂರ್ಯನ ಕಿರಣಗಳು ನೇರವಾಗಿ ಮನುಷ್ಯನ ಮೇಲೆ ಬೀಳುವುದರಿಂದ ಮನುಷ್ಯನಿಗೆ ಚರ್ಮ ಕ್ಯಾನ್ಸರ ಬರುವ ಸಾಧ್ಯತೆ ಇರುವುದರಿಮದ ನಾವೆಲ್ಲರೂ ಓಝೋನ್ ಪದರ ರಕ್ಷಣೆ ಮಾಡಲು ಶ್ರಮಿಸೋಣ, ಪರಿಸರ ನಮ್ಮದು ಎಂದು ಅರಿತು ನಮ್ಮ ಮನೆಯ ವಸ್ತುಗಳನ್ನು ಹೇಗೆ ರಕ್ಷಿಸಿಕೊಳ್ಳುತ್ತೇವೆ ಹಾಗೆ ಈ ಪರಿಸರವನ್ನು ರಕ್ಷಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ ಕೆ. ಎಸ್. ಪಲ್ಲೇದ, ಯೋಗಾ ಶಿಕ್ಷಕರು ಇವರು ವಿಧ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರತಿಯೊಬ್ಬ ವಿಧ್ಯಾಥರ್ಿ ಒಂದು ಗಿಡವನ್ನು ನೆಟ್ಟು ಅದನ್ನು ಬೆಳೆಸಬೇಕು ಎಂದು ವಿದ್ಯರ್ಾಥರ್ಿಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಎಸ್ ಬಿ ಗೌಡರ ಪ್ರಧಾನ ಗುರುಗಳು, ಬಸವೇಶ್ವರ ಪ್ರೌಢ ಶಾಲೆ, ಗದಗ ಇವರು ಓಝೋನ್ ಪದರ ರಕ್ಷಣೆ ನಮ್ಮೆಲ್ಲರ ಹೊಣೆ, ಒಂದು ವೇಳೆ ಪರಿಸರ ನಾಶ ಹೀಗೇ ಮುಂದುವರಿದರೆ ಮುಂದಿನ ಜನಾಂಗಕ್ಕೆ ಗಿಡಗಳನ್ನು ಚಿತ್ರದ ಮೂಲಕ ತೋರಿಸಬೇಕಾಗುತ್ತದೆ. ಎಂದು ವಿಷಾದ ವ್ಯಕ್ತಪಡಿಸಿದರು.
ಲಕ್ಷ್ಮೀ ವನಸಿ ಆಂಗ್ಲ ಮಾದ್ಯಮ ವಿಜ್ಞಾನ ಶಿಕ್ಞಕರು ಇವರು ವೇದಿಕೆ ಮೇಲೆ ಉಪಸ್ತಿತರಿದ್ದರು ಸಿ. ಎಸ್ ಮಾನ್ವಿ ಸ್ವಾಗತ ಭಾಷಣ ಮಾಡಿದರು, ಎ. ಬಿ. ಬೇವಿನಕಟ್ಟಿ ಇವರು ಕಾರ್ಯಕ್ರಮ ನಿರೂಪಿಸಿದರು. ಬಸವೇಶ್ವರ ಪ್ರೌಢ ಶಾಲೆ ವಿಧ್ಯಾಥರ್ಿನಿಯರು ಪ್ರಾರ್ಥನೆ ಗೀತೆ ಹಾಡಿದರು.