ಲೋಕದರ್ಶನ ವರದಿ
ಮಹಾಲಿಂಗಪುರ 29: ತೇರದಾಳ ಮತಕ್ಷೆತ್ರದ ಹದ್ದಿನಲ್ಲಿ ಬರುವಂತಹ ರೈತರ ಜಮಿನುಗಳಲ್ಲಿಯ ಅಕ್ರಮ ಪಂಪ ಸೆಟ್ಟುಗಳ ಸಕ್ರಮ ಮಾಡಲು ಸಕರ್ಾರ ಕೇವಲ 50.00 ರೂಗಳನ್ನು ನಿಗದಿಪಡಿಸಿದೆ, ಆಧಾರ ಕಾರ್ಡ, ಜಮೀನ ಉತಾರ್, ಪರೀಕ್ಷಾ ಪತ್ರ, ಆಥವಾ 'ಎ' ಫಾಮರ್್ ವನ್ನು ರಭಕವಿ ಹೆಸ್ಕಾಮ್ ಉಪವಿಭಾಗದ ಕಚೇರಿಯಲ್ಲಿ ನೋಂದಣಿ ಮಾಡಿಸಿಕ್ಕೊಂಡರೆ ಸಾಕು ಸಕ್ರಮಗೊಳ್ಳಲಿದೆ. ಎಂದು ಕ್ಷೇತ್ರದ ಶಾಸಕ ಸಿದ್ದು ಕ.ಸವದಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರ ಕಡೇಯಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಒಂದು ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದರು.
ಇದೆ ಸಂದರ್ಭದಲ್ಲಿ ಹಿಪ್ಪರಗಿಯ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಮಧ್ಯವತರ್ಿಗಳು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ ಅಂಥವರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಜಿ.ಪಂ ಸದಸ್ಯ ಪುಂಡ್ಲಿಕ್ ಪಾಲಭಾವಿ ರೈತರಲ್ಲಿ ಮನವಿ ಮಾಡಿದರು.