ದೇಶದಿಂದ ಕರೆ ಬಂದರೆ ಸೇವೆಗೆ ಸಿದ್ದ: ಮಾಜಿ ಸೈನಿಕ ಘೋಡಕೆ

ಲೋಕದರ್ಶನ ವರದಿ

ಗದಗ 02:   ದೇಶದಲ್ಲಿ ಫೆ. 14ರಂದು ನಡೆದ ಪುಲ್ವಾಮಾ ಭಯೋತ್ಪಾಧಕ  ದಾಳಿಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಾಗೂ ರಕ್ಷಣಾ ಇಲಾಖೆ ಪ್ರತಿದಾಳಿ ನಡೆಸಿ 300ಕ್ಕೂ ಹೆಚ್ಚು ಉಗ್ರರನ್ನು ಹಾಗೂ ಅವರ  ಅಡಗುದಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿ  ತಕ್ಕ ಉತ್ತರ ನೀಡಿದ್ದರಿಂದ  ನಾವುಗಳು ನಿಟ್ಟುಸಿರು ಬಿಡುವಂತೆ ಮಾಡಿದೆ. ಅಲ್ಲದೇ,  ಸದ್ಯ ಭಾರತದ ಗಡಿಯುದ್ದಕ್ಕೂ ಪರಸ್ಥಿತಿ ತುಂಬಾ ಸೂಕ್ಷ್ಮವಾಗಿದ್ದು ಯುದ್ದ ಘೋಷಣೆಯಾಗುವ ಸಾದ್ಯತೆ ಹೆಚ್ಚಾಗಿರುವದರಿಂದ ನಾನು ಕೂಡಾ ಭಾರತ ಮಾತೆಯ ಸೇವೆಯನ್ನು 33 ವರ್ಷ ಸಲ್ಲಿಸಿ ನಿವೃತ್ತಿ ಹೊಂದಿದ್ದು ಆದರೆ, ನನಗೆ ಭಾರತ ಮಾತೆಯ ಸೇವೆ  ಹಾಗೂ ಋಣ ತೀರಿಸುವ  ಆಸೆ ಇನ್ನೂ ಇಂಗಿಲ್ಲ  ಹಾಗಾಗಿ ನನಗೆ ಸೇನೆಯಿಂದ ಈಗಲೇ ಚಿಕ್ಕ ಕರೆ ಬಂದರೆ ತಡಮಾಡದೇ ಭಾರತ ಮಾತೆಯ ಮಡಿಲಿಗೆ ನನ್ನ ಪ್ರಾಣವನ್ನು ಅಪರ್ಿಸಲು ನಾನು ದಿನದ 24 ಗಂಟೆ ಆಣಿಯಾಗಿ ಗಡಿಗೆ ತೆರಳಲು ಸಿದ್ದನಿದ್ದೆನೆ  ಎಂದು ಮಾಜಿ ಸೈನಿಕ ಸಹದೇವಪ್ಪ ಘೋಡಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.