ಮೂಲಭೂತ ಸೌಲಭ್ಯಗಳು ಪ್ರಾಮಾಣಿಕವಾಗಿ ಒದಗಿದರೆ ಜನರು ಫಲಾಪೇಕ್ಷೆ ಬಯಸುವದಿಲ್ಲ: ಯಶವಂತರಾಯಗೌಡ

ಲೋಕದರ್ಶನ ವರದಿ

ಇಂಡಿ 31:ಸಾರ್ವಜನಿಕ ಕ್ಷೇತ್ರದಲ್ಲಿ ಜನರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಕೆಲಸ ರಾಜಕೀಯ ನಾಯಕರುಗಳು ಮಾಡಿದರೆ ಜನರು ಯಾವುದೆ ಫಲಾಪೇಕ್ಷೆ ಬಯಸುವದಿಲ್ಲ ಎಂದು ಶಾಸಕ ಮತ್ತು ನಗರ ನೀರು ಒಳಚರಂಡಿ ನಿಗಮ ಮಂಡಳಿಯ ಅಧ್ಯಕ್ಷ ಯಶವಂತರಾಯಗೌಡ ವ್ಹಿ ಪಾಟೀಲ ಹೇಳಿದರು.

ಪಟ್ಟಣದ ಸ್ಟೇಶನ ರಸ್ತೆಯಲ್ಲಿ ಇಂಡಿ ತಾಲೂಕಿನ ಶಿರಾಡೋಣ ಲಿಂಗಸೂರ ರಸ್ತೆ ರಾ.ಹೆ 41 ಕಿಮಿ 42 ರಿಂದ 5.50 $ 47.20 ರಿಂದ 47.80 ರವರೆಗೆ ರಸ್ತೆ ಸುಧಾರಣೆ ರಸ್ತೆ ಅಗಲೀಕರಣ ಹಾಗೂ ಗಟಾರ ಪೋಟ್ ಪಾತ್ ಸುಮಾರು 495.00 ಲಕ್ಷ ಮತ್ತು ಇಂಡಿ ತಾಲೂಕಿನ ಚವಡಿಹಾಳ-ಬಬಲಾದ. ಹಳಗುಣಕಿ ಮೂಲಕ ರಾ.ಹೆ-13ಕ್ಕೆ ಕೂಡು ರಸ್ತೆ 94.83 ಲಕ್ಷ ಮೊತ್ತ ಹಾಗೂ ಇಂಡಿ-ಹಂಜಗಿ, ನಿಂಬಾಳ, ರಸ್ತೆ ನಿಮರ್ಾಣ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಮನುಷ ಜೀವನದಲ್ಲಿ ಒಳ್ಳೆಯದನ್ನು ಮಾಡಬೇಕು. ರಾಜಕೀಯ ಇಂದು ಇರಬಹುದು ನಾಳೆ ಇರಲಿಕ್ಕಿಲ್ಲ ಬಂದ ಅವಕಾಶ ಸರಿಯಾಗಿ ಉಪಯೋಗಿಸಿಕೊಂಡು ಜನೋಪಕಾರಿ ಕೆಲಸ ಮಾಡಿದರೆ ಜನರು ಹೃದಯ ತುಂಬಿ ಹಾರೈಸುತ್ತಾರೆ. ತಾಲೂಕಿನ ಜನರು ಹೃದಯವಂತರು ಬಿರುಸು ಮಾತನಾಡಬಹುದು ಹೃದಯ ಕಲ್ಮಶ ಇಲ್ಲ.

ನನ್ನ ಕುಟುಂಬಕ್ಕೆ 30 ವರ್ಷ ರಾಜಕೀಯವಾಗಿ ಬೆಳೆಸಿರುವದರಿಂದ ನಾನು ಈ ಕ್ಷೇತ್ರದ ಖುಣ ತೀರಿಸಬೇಕಾಗಿರುವದು ನನ್ನ ಧರ್ಮ. ಈ ಹಿಂದೆ ಕನರ್ಾಟಕ ಕಾಂಗ್ರೇಸ್ ಸರಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ಸಾಕಷ್ಟು ಅನುಧಾನದ ಹೊಳೆ ಹರಿದು ಬಂದಿದೆ. ಒಂದು ಜಿಲ್ಲೆಗೆ ಬೇಕಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒಂದು ತಾಲೂಕಿಗೆ ತಂದಿರುವೆ. ಮುಂದೊಂದು ದಿನ ಜಿಲ್ಲೆಯಾಗುವ ಅವಕಾಶ ಬಂದರೆ ಸರಕಾರದ ಮಟ್ಟದಲ್ಲಿ ಇಂಡಿ ಮೋದಲ ಸ್ಥಾನದಲ್ಲಿರುವಂತೆ ಮಾಡಿರುವೆ. ನಾನೇ ಮಾಡಿರುವೆ ಎನ್ನುವದಕ್ಕಿಂತ ಕ್ಷೇತ್ರದ ಜನರು ನನಗೆ ನೀಡಿರುವ ಶಕ್ತಿಯೇ ಪ್ರಮುಖ ಕಾರಣ. ಪಟ್ಟಣದ ಅನೇಕ ರಸ್ತೆಗಳು ನಿಮರ್ಾಣವಾಗಿವೆ. ಇನ್ನು ಮಾಡಬೇಕಾದ ಅನೇಕ ಕೆಲಸಗಳು ಇವೆ ನನ್ನ 30 ವರ್ಷದ ರಾಜಕೀಯ ಅನುಭವ ಧಾರೆ ಏರೆದು ಸವರ್ಾಂಗೀಣ ಅಭಿವೃದ್ದಿ ಮಾಡಿರುವೆ. ನನ್ನ ಅಧಿಕಾರದ ಅವಧಿಯಲ್ಲಿ ಆದ ಕೆಲಸಗಳು ಸುವಣರ್ಾಕ್ಷರಗಳಿಂದ ಬರೆದಿಡುವಂತೆ ಮಾಡಿದ್ದೇನೆ ಇಂತ ಕಾಮಗಾರಿಗಳು ಹಿಂದೆಯೂ ಆಗಿಲ್ಲ ಮುಂದೆಯೂ ಆಗುವದಿಲ್ಲ ಎಂದರು.

ಪುರಸಭೆ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ತಾ.ಪಂ ಅಧ್ಯಕ್ಷ ಶೇಖರ ನಾಯಕ,  ಭೀಮಾಶಂಕರ ಮುರಗುಂಡಿ, ಗುತ್ತಿಗೆದಾರ ಎಲ್.ಡಿ ಮಡಗೊಂಡ, ಯಾಸೀನ 

ಅರಬ, ಗುತ್ತಿಗೆದಾರ ಸುರೇಶ ಶಿವೂರ, ಅಪ್ಪಾಸಾಹೇಬ ತಾಂಬೆ, ಸಿದ್ದಣ್ಣಾ ಜಾಮಗೊಂಡಿ, ಪ್ರಶಾಂತ ಕಾಳೆ, ಸದಾಶಿವ ಪ್ಯಾಟಿ, ಚಂದು ದೇವರ, ಧನಪಾಲ, ಮುತ್ತಪ್ಪ ಪೂತೆ, ಗುತ್ತಿಗೆದಾರ ಶಾಂತು ಶಿರಕನ್ನಳ್ಳಿ, ಜಾವೀದ ಮೋಮಿನ, ಮಹೇಶ ಹೊನ್ನಬಿಂದಗಿ, ಅವಿನಾಶ ಬಗಲಿ, ಹಣಮಂತ ಅರವತ್ತು, ಚಂದುಸಾಹುಕಾರ ಸೋನ್ನ, ಇಇ ಧಾನೇಶ ಗುಜರೆ, ಸದಾಶಿವ ಪ್ಯಾಟಿ,  ಮಹಿಬೂಬ ಸಂಜವಾಡ ಸೇರಿದಂತೆ ಅನೇಕ ಮುಖಂಡರು ಇದ್ದರು.