ವಾಲ್ಮೀಕಿ ಜನರಿಗೆ ಅಗತ್ಯ ಮೀಸಲು ಕೊಡದಿದ್ದರೆ ಉಗ್ರ ಹೋರಾಟ

ಲೋಕದರ್ಶನ ವರದಿ

ಕೊಪ್ಪಳ 18: ಕನರ್ಾಟಕ ರಾಜ್ಯದಲ್ಲಿ ಐದನೇ ಬಹುಸಂಖ್ಯಾತ ಸಮುದಾಯವಾಗಿರುವ ವಾಲ್ಮೀಕಿ ನಾಯಕ ಸಮುದಾಯ ರಾಜ್ಯದಲ್ಲಿ ಬರೋಬ್ಬರಿ ಅರ್ಧ ಕೋಟಿ ಜನಸಂಖ್ಯೆ ಇರುವ ಸಮುದಾಯಕ್ಕೆ ಕೂಡಲೇ 7.5 ಮೀಸಲು ನೀಡಬೇಕು ಇಲ್ಲವಾದಲ್ಲಿ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಟಿ. ರತ್ನಾಕರ ಹೇಳಿದರು.

ಅವರು ನಗರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಈ ಪ್ರತಿಕ್ರಿಯೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ವಾಲ್ಮೀಕಿ ಗುರುಪೀಠದ ಶ್ರೀಗಳ ಹೋರಾಟಕ್ಕೆ ಹತ್ತು ದಿನವಾದರೂ ಸರಕಾರದ ನಿರ್ಲಕ್ಷ್ಯ ಧೋರಣೆ ಸರಿಯಲ್ಲ, ಅನೇಕ ವಿವಿಧ ಸಮುದಾಯದ ಹಾಗೂ ಜಗದ್ಗುರುಗಳು ಸಹ ಬಂದು ಹೋರಾಟಕ್ಕೆ ಬೆಂಬಲಿಸಿದ್ದಾರೆ. ಅದಕ್ಕಾಗಿ ಜೂನ್ 9 ರಿಂದ 24 ರವರೆಗೆ ರಾಜನಹಳ್ಳಿಯಿಂದ ರಾಜಧಾನಿಯವರೆಗೆ ನಡೆಯುತ್ತಿರುವ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ, ಜೂನ್ 24ಕ್ಕೆ ರಾಜಧಾನಿಯಲ್ಲಿ ಲಕ್ಷಾಂತರ ಜನರು ಸೇರಿ ಮನವಿ ಸಲ್ಲಿಸಲಾಗುವದು, ಅದಕ್ಕೂ ಸ್ಪಂದನೆ ಸಿಗದಿದ್ದರೆ, ರಾಜ್ಯದಾದ್ಯಂತ ಬಂದ್ ಕರೆ ಕೊಡಲಾಗುವದು ಎಂದರು.

ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ನಕಲಿ ಮತ್ತು ಕೊಟ್ಟಿ ಜಾತಿ ಪ್ರಮಾಣ ಪತ್ರ ಪಡೆದು ಅನೇಕ ವರ್ಷಗಳಿಂದ ನೌಕರಿ ಮಾಡುತ್ತಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಿಲ್ಲ, ಅನೇಕರು ಅದನ್ನು ಸರಕಾರದ ಬಹುತೇಕ ಯೋಜನೆಗೆ ಬಳಸಿದ್ದಾರೆ. ಈಗ ರಾಜಕೀಯ ಶಕ್ತಿ ಪಡೆಯಲು ಅನಧಿಕೃತ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಮುಂದೆ ಪರಿಶಿಷ್ಟ ಪಂಗಡಕ್ಕೆ ಸೇರುವ ಸಮುದಾಯ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಹೆಚ್ಚಿಸಿಕೊಂಡು ಬರಬೇಕು, ಈಗಾಗಲೇ ಶೇ. 12 ರಷ್ಟು ಇರುವ ಜನಸಂಖ್ಯೆಗೆ ಕೇವಲ 3 ರಷ್ಟು ಮೀಸಲು ಇದೆ. ಇದಕ್ಕಿಂತ ಕಡಿಮೆ ಜನಸಂಖ್ಯೆಗೆ ಹೆಚ್ಚಿನ ಮೀಸಲು ನೀಡಿ ನಿಜವಾದ ಶೋಷಿತ ಸಮುದಾಯಕ್ಕೆ ಎಲ್ಲಾ ಸರಕಾರಗಳು ಮೋಸ ಮಾಡುತ್ತಿವೆ ಎಂದು ಗಂಭೀರ ಆರೋಪ ಮಾಡಿದರು. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ಸ್ಪಷ್ಟ ನಿಲುವನ್ನು ಸಮುದಾಯದ ಮುಂದೆ ಸ್ಪಷ್ಟ ಪಡಿಸಬೇಕು ಇಲ್ಲವಾದಲ್ಲಿ ಸಮುದಾಯ ಹೊಸ ಹಜ್ಜೆ ಇಡಲು ಇದು ಸಕಾಲ ಹಾಗೂ ಸನ್ನದ್ಧವಾಗಿದೆ ಎಂದು ಅವರು ವಿವರಿಸಿದರು.

ಅದೇ ರೀತಿ ಸಮುದಾಯದ ಮೇಲೆ ಎಲ್ಲಾ ರೀತಿಯ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದರೂ ಸರಕಾರ ಮತ್ತು ಸಮಾಜ ಕಲ್ಯಾಣ ಇಲಾಖೆ ಸ್ಪಂದಿಸುತ್ತಿಲ್ಲ. ಇದೂ ಸಮುದಾಯವನ್ನು ನಿರ್ಲಕ್ಷ್ಯ ಮಾಡುತ್ತಿರುವದಕ್ಕೆ ಸಾಕ್ಷಿಯಾಗಿದೆ ಎಂದರು. ಮುಖಂಡರು ಮಾತನಾಡಿ, ಜೂನ್ 19 ರಂದು ಮುಖ್ಯಮಂತ್ರಿಗಳು ಸಮುದಾಯದ ಶಾಸಕ, ಸಂಸದ ಮತ್ತು ಮುಖಂಡರನ್ನು ಮಾತುಕತೆಗೆ ಕರೆದಿದ್ದಾರೆ ಎನ್ನಲಾಗಿದೆ, ಅಲ್ಲಿ ಮಾತುಕತೆ ಫಲಪ್ರದವಾಗದಿದ್ದರೆ ಹೋರಾಟ ತೀವ್ರಗೊಳಿಸಲಾಗುವದು ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಧರ್ಮದಶರ್ಿ ರಾಮಣ್ಣ ಕಲ್ಲನವರ, ಜಿಲ್ಲಾ ಮಹಾಸಭಾ ಕಾರ್ಯದಶರ್ಿ ಶಿವಮೂತರ್ಿ ಗುತ್ತೂರ, ಜಿಲ್ಲಾ ಮಾಧ್ಯಮ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ವಾಲ್ಮೀಕಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಡೊಣ್ಣಿ, ಕೊಪ್ಪಳ ತಾಲೂಕ ಅಧ್ಯಕ್ಷ ಶರಣಪ್ಪ ನಾಯಕ್, ಕುಷ್ಟಗಿ ತಾಲೂಕ ಅಧ್ಯಕ್ಷ ಬಸವರಾಜ ನಾಯಕ್, ಯಲಬುಗರ್ಾ ತಾಲೂಕ ಅಧ್ಯಕ್ಷ ಹಂಚಾಳಪ್ಪ ತಳವಾರ, ದೇವೇಂದ್ರಪ್ಪ ಗುನ್ನಳ್ಳಿ, ನಾಗರಾಜ ಕಿಡದಾಳ ಇತರರು ಇದ್ದರು