ದೇವಿಯನ್ನು ನಿರ್ಮಲ ಭಕ್ತಿಯಿಂದ ಪೂಜಿಸಿದರೆ ತಾಯಿ ಸಕಲವನ್ನೂ ಕರುಣಿಸುತ್ತಾಳೆ : ಮೃತ್ಯುಂಜಯ ಶ್ರೀ

ದೇವಿಯನ್ನು ನಿರ್ಮಲ ಭಕ್ತಿಯಿಂದ ಪೂಜಿಸಿದರೆ ತಾಯಿ ಸಕಲವನ್ನೂ ಕರುಣಿಸುತ್ತಾಳೆ : ಮೃತ್ಯುಂಜಯ ಶ್ರೀ If the Goddess is worshipped with pure devotion, the Mother bestows mercy on all: Mrityunjaya Sri

ದೇವಿಯನ್ನು ನಿರ್ಮಲ ಭಕ್ತಿಯಿಂದ ಪೂಜಿಸಿದರೆ ತಾಯಿ ಸಕಲವನ್ನೂ ಕರುಣಿಸುತ್ತಾಳೆ : ಮೃತ್ಯುಂಜಯ ಶ್ರೀ 

ಮಹಾಲಿಂಗಪುರ, 24 : ಈ ನವರಾತ್ರಿಯ ಒಂಬತ್ತು ರಾತ್ರಿಗಳ ಕಾಲ ದೇವಿಯ ಒಂಬತ್ತು ವಿಭಿನ್ನ ರೂಪಗಳನ್ನು ಯಾರೂ ನಿರ್ಮಲ ಭಕ್ತಿಯಿಂದ ಪೂಜಿಸುತ್ತಾರೋ ಅವರಿಗೆ ಅವರಿಗೆ ಸಕಲ ಭಾಗ್ಯಗಳನ್ನು ಕೊಟ್ಟು ಕಾಪಾಡುತ್ತಾಳೆ ಎಂದು ಮೈಂದರಗಿಯ ಮ, ನಿ, ಪ, ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು. 

ನಗರದ ಶಕ್ತಿದೇವತೆ ಬನಶಂಕರಿ ದೇವಸ್ಥಾನದ ಸಾಂಸ್ಕೃತಿಕ ಭವನದಲ್ಲಿ ಶ್ರೀ ಬನಶಂಕರಿ ದೇವಸ್ಥಾನ ಆಡಳಿತ ಮಂಡಳಿ ದೇವಾಂಗ ಹಟಗಾರ ಯುವಕ ಸಂಘ (ರಿ), ಸಾಂಸ್ಕೃತಿಕ ಉತ್ಸವ ಸಂಘ (ರಿ ) ಮಹಾಲಿಂಗಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟ ಇವರ ಸಹಯೋಗದಲ್ಲಿ ನಡೆಯುತ್ತಿರುವ ಶ್ರೀ ದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವದ ಮೊದಲನೆಯ ದಿನದ ಆಶೀರ್ವಚನ ನೀಡಿ ಚಿದಾನಂದ ಅವಧೂತರು ಬರೆದ 18 ಅಧ್ಯಾಯಗಳ ದೇವಿ ಪುರಾಣ ಗ್ರಂಥಕ್ಕೆ ಪೂಜೆ ಸಲಿಸುವ ಮೂಲಕ 35 ನೇ ವರ್ಷದ ಪುರಾಣಕ್ಕೆ ಚಾಲನೆ ನೀಡಿ ದೇವಿ ಅನೇಕ ಅವತಾರಗಳನ್ನು ತಾಳಿ ಚಂಡಿ, ಚಾಮುಂಡಿ, ಕಾಳಿ, ಕಾತ್ಯಾಯನಿ, ಅಂಬಾ, ದುರ್ಗಾ, ಈಶ್ವರಿ,ಮುಂತಾದ ಹಲವು ಹೆಸರುಗಳಿಂದ ಕರೆಯಲಾಗಿದೆ. ದೇವತೆಗಳ ರಕ್ಷಣೆಗಾಗಿ ಆವಿರ್ಭವಿಸುವ ದೇವಿ ಶಿಷ್ಟರಿಗೆಲ್ಲ ಕಂಟಕನಾಗಿದ್ದ ಮಹಿಷಾಸುರನನ್ನು ಸಂಹಾರಿಸುತ್ತಾಳೆ ಎಂದರು. ಇವರಿಗೆ  ಹಾರ್ಮೋನಿಯಂ ವಾದನವನ್ನು ಶ್ರೀಕಾಂತ್ ನಾಯಿಕ ಮತ್ತು ತಬಲಾ ವಾದನ ಹಣಮಂತ ಅಂಕದ ನುಡಿಸುವ ಮೂಲಕ ಸಂಗೀತ ಸೇವೆ ನೀಡಿದರು. 

ನಂತರ ಮಾತನಾಡಿದ ಸಿದ್ದಾರೂಢ ಬೃಹ್ಮ ವಿದ್ಯಾಶ್ರಮದ ಸಹಜಾನಂದರು ಯಾರು ಭಕ್ತಿ ಮತ್ತು ಶೃದ್ದೆಯಿಂದ ತಾಯಿ ದುರ್ಗಾ ಮಾತೆಯನ್ನು ಪೂಜಿಸುತ್ತಾರೋ ಅವರಿಗೆ ಎಂದು ಕೆಡುಕಾಗುವುದಿಲ್ಲ. ನಂಬಿದವರನ್ನು ಆ ತಾಯಿ ಎಂದು ಕೈಬಿಡುವುದಿಲ್ಲ ಎಂದರು.   

ಪ್ರವಚನದ ನಂತರ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು, ಈ ಸಂಧರ್ಭದಲ್ಲಿ ಪ್ರಸಾದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 

     ಮುಖಂಡರಾದ ವಿರೂಪಾಕ್ಷಯ್ಯ ಪಂಚಕಟ್ಟಿಮಠ, ಗುರುಪಾದ ಚಟ್ಟಿಮಠ, ಮಲ್ಲಿಕಾರ್ಜುನ ಮಣ್ಣಯ್ಯನವರಮಠ, ಸಾಗರ ಮಠದ, ಮಹಾಂತೇಶ ಮಣ್ಣಯ್ಯನವರಮಠ, ಪ್ರಭು ಮಠದ, ಸಿದಗಿರೇಪ್ಪ ಕಾಗಿ, ಪ್ರಭು ಬೆಳಗಲಿ, ಶಂಕರ ಅಂಬಿ, ಬಿ ಡಿ ಸೊರಗಾವಿ, ಮಲ್ಲಪ್ಪ ಭಾವಿಕಟ್ಟಿ ,ಲಕ್ಕಪ್ಪ ಚಮಕೇರಿ, ವೆಂಕಣ್ಣ ಸಂಶಿ, ರವಿಗೌಡ ಪಾಟೀಲ್, ಕೃಷ್ಣಗೌಡ ಪಾಟೀಲ, ರಾಜು ಚಮಕೇರಿ, ರಾಜೇಶ ಭಾವಿಕಟ್ಟಿ, ಶ್ರೀಶೈಲ್ ಕಿರಗಟಗಿ, ಬಿ ವಿ ಕೆರೂರ, ಶ್ರೀಶೈಲ ರೊಡ್ಡಣ್ಣವರ ,ನಾರಾಯಣ ಕಿರಗಿ, ಗುರುಪಾದ ಅಂಬಿ, ಶಿವಾನಂದ ಕಿತ್ತೂರ, ಸಂಜಯ್ ಜಮಖಂಡಿ, ಸತೀಶ ಸೊರಗಾವಿ, ಈಶ್ವರ ವಂದಾಲ, ಶ್ರೀಶೈಲ್ ನುಚ್ಚಿ, ಚನ್ನಪ್ಪ ಪಟ್ಟಣಶೆಟ್ಟಿ, ಮಹಾಲಿಂಗಪ್ಪ ಜಕ್ಕಣ್ಣವರ, ಸತ್ಯಪ್ಪ ಹುದ್ದಾರ, ಮಹೇಶ ಇಟಕನ್ನವರ, ಮಹಾಲಿಂಗಪ್ಪ ಬಾಡಗಿ,ಸಿದ್ದಪ್ಪ ಕಿಶೋರಿ, ವಿಠ್ಠಲ್ ಸಂಶಿ, ಕಲ್ಲಪ್ಪ ಚಿಂಚಲಿ, ಈರಣ್ಣ ಹಲಗತ್ತಿ, ಎಂ ಆರ್ ತೇರದಾಳ, ಸೇರಿ ಹಲವರು ಇದ್ದರು.ಕಾರ್ಯಕ್ರಮ ಬಿ ಸಿ ಪೂಜಾರಿ ನಿರೂಪಿಸಿದರು, ಜಿ ಎಸ್ ಗೊಂಬಿ ವಂದಿಸಿದರು.