15ರೊಳಗಾಗಿ ಸಿಎಂ ಕಬ್ಬಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ

ಲೋಕದರ್ಶನ ವರದಿ

ಮುಗಳಖೋಡ 13: ರೈತರು ಕಳೆದ ಹಲವಾರು ದಿನಗಳಿಂದ ಕಬ್ಬಿನ ಬಾಕಿ ಹಾಗು ಪ್ರಸಕ್ತ ಸಾಲಿನ ಕಬ್ಬು ದರ ನಿಗದಿಗೊಸ್ಕರ  ಹೋರಾಟ ಮಾಡುತ್ತಾ ಬಂದಿರುತ್ತಾರೆ. ಹೋದ ತಿಂಗಳಿನಲ್ಲಿ ಕನರ್ಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜನತಾ ದರ್ಶನಕ್ಕೆ ಬೆಳಗಾವಿಗೆ ಬಂದಾಗ ರೈತ ಮುಖಂಡರುಗಳು  ಮತ್ತು ಕಬ್ಬಿನ ಬೆಳೆಗಾರರು ಸೇರಿ ಈ ಒಂದು ಕಬ್ಬಿನ ಸಮಸ್ಯೆಗೆ ಪರಿಹಾರ ಕೊಡಿ ಎದು ಕೆಳಿದಾಗ ಮುಂದಿನ ವಾರದಲ್ಲಿ ಬೆಳಗಾವಿ ಮುತ್ತು ಬಾಗಲಕೋಟ ಜಿಲ್ಲೆಯ ಕಬ್ಬು ಬೆಳೆಗಾರರ ಮತ್ತು ಪ್ಯಾಕ್ಟರಿ ಮಾಲಿಕರ ಸಭೆ ಕರೆದು ಜಿಲ್ಲಾಧೀಕಾರಿಗಳ ಮುಖಾಂತರ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. 

ಆದರೆ  ಈಗ ಎರಡು ತಿಂಗಳು ಕಳೆದರೂ ಕೂಡಾ ಪತ್ತೆಯಿಲ್ಲ. ನಂತರ ನವೆಂಬರ್ 5 ರಂದು ಕಬ್ಬು ಬೆಳೆಗಾರರ ಹಿತರಕ್ಷಣಾ ವೇದಿಕೆಯ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮತ್ತು ಸರಕಾರಕ್ಕೆ 3 ದಿನಗಳ ಗಡವು ನಿಡಲಾಗಿತ್ತು. ಆದರೆ ಇಲ್ಲಿಯವರೆಗೆ ಸಾಕಷ್ಟು ಹೋರಾಟಗಳಾದರೂ ಸಹ ಜಿಲ್ಲಾಡಳಿತ ಈಕಡೆ ತಿರುಗಿ ಸಹ ನೋಡಿಲ್ಲ. ಜಿಲ್ಲಾಧಿಕಾರಿಗಳು ರೈತರ ಕಬ್ಬಿನ ಸಮಸ್ಯೆ ಬಗೆಹರಿಸಲಾಗದೆ ಪ್ಯಾಕ್ಟರಿ ಮಾಲಿಕರ ಕೈಗೊಂಬೆಯಾಗಿರುತ್ತಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ನವೆಂಬರ್ 15ರ ಒಳಗಾಗಿ ಮುಖ್ಯಮಂತ್ರಿಯವರನ್ನು ಮಧ್ಯಸ್ಥಿಕೆ ವಹಿಸಿ ಕಬ್ಬಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡದಿದ್ದಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿಗೆ ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಗಳ ಸಮಸ್ತ ಕಬ್ಬು ಬೆಳೆಗಾರರು ಮುತ್ತಿಗೆ ಹಾಕಲಾಗುವುದು. ರೈತರು ಸಹ ಕಬ್ಬಿನ ಬೆಲೆ ನಿಗಧಿಯಾಗುವವರೆಗೆ ಕಬ್ಬು ಕಟಾವ ನಿಲ್ಲಿಸಬೇಕು. ಇಲ್ಲವಾದಲ್ಲಿ ಈ ಸಮಸ್ಯೆಬಗೆ ಹರಿವುವುದಿಲ್ಲ. ಮುಂದೆ ಆಗುವ ಅನಾಹುತಕ್ಕೆ ಜಿಲ್ಲಾಧಿಕಾರಿಗಳು ಮತ್ತು ರಾಜ್ಯದ ಮುಖ್ಯಮಂತ್ರಿಗಳು ನೇರ ಹೊಣೆಗಾರರಾಗುತ್ತಾರೆ. ಆದ ಕಾರಣ ರೈತರಲ್ಲಿ ವಿನಂತಿಸಿಕೊಳ್ಳುವುದೆನೆಂದರೆ, ದಿ. 15ರಂದು ಕಬ್ಬು ಬೆಳೆಗಾರರ ಹಿತರಕ್ಷಣಾ ವೇದಿಕೆಯ ಮುಖಾಂತರ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಇರುತ್ತದೆ. ಈ ಮುತ್ತಿಗೆಯ ಕಾರ್ಯಕ್ರಮದಲ್ಲಿ ಕಬ್ಬು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿಕೊಳ್ಳುತ್ತವೆ ಎಂದು ಚಿನ್ನಪ್ಪ ಪೂಜೇರಿ ಹೇಳಿದರು. 

ಅವರು ಮಂಗಳವಾರ ದಿ 13ರಂದು ಮುಗಳಖೋಡ ಪಟ್ಟಣದ ಪಿಡಬ್ಲ್ಯೂಡಿ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಜಿಲ್ಲಾಧಿಕಾರಿಗಳ ಕಚೇರಿಯ ಮುತ್ತಿಗೆ ಕಾರ್ಯಕ್ರಮದಲ್ಲಿ ರಾಜ್ಯ ಎಲ್ಲಾ ಕಬ್ಬು ಬೆಳಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹೇಳಿದರು.

ಅಶೋಕ ಗಸ್ತಿ, ಜ್ಞಾನು ಅಳಗವಾಡಿ, ಬಾಬಾಗೌಡ ಪಾಟೀಲ, ಮಲ್ಲಪ್ಪ ಅಂಗಡಿ, ಶಿವಾನಂದ ಚೌಗಲಾ, ಶಂಕರೇಪ್ಪ ತೋಳಮಟ್ಟಿ, ತಮ್ಮಣ್ಣ ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.