ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ

ಲೋಕದರ್ಶನ ವರದಿ

ಬೆಳಗಾವಿ 02: ದಿ. 29ರಂದು ಶಾಸಕ ಅನಿಲ ಬೆನಕೆರವರು ಮಹಾನಗರ ಪಾಲಿಕೆಯ 14ನೇ ಹಣಕಾಸು ಯೋಜನೆಯಡಿಯಲ್ಲಿ ಕಣಬಗರ್ಿಯ ಮಠ ಗಲ್ಲಿಯಲ್ಲಿ ಸಿ.ಸಿ. ರಸ್ತೆ, ರಾಮತೀರ್ಥ ಗಲ್ಲಿಯಲ್ಲಿ ಸಿ.ಸಿ. ರಸ್ತೆ ನಿಮರ್ಾಣ ಹಾಗೂ ಶಿವಾಜಿ ವೃತ್ತದ ಹತ್ತಿರ ಪೇವರ್ಸ ಅಳವಡಿಕೆ, ಕಸಾಯಿ ಗಲ್ಲಿಯಲ್ಲಿ ಪೇವರ್ಸ ಅಳವಡಿಸುವುದು, ಸದಾಶಿವ ನಗರದ ಅಂಬೇಡ್ಕರ ಭವನದ ಹತ್ತಿರ ಪೇವರ್ಸ ಅಳವಡಿಕೆ ಹಾಗೂ ನೀರಿನ ಟ್ಯಾಂಕ್ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆಯನ್ನು ಸಲ್ಲಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಸಲ್ಲಿಸಿ ಮಾತನಾಡಿದ ಶಾಸಕರು ಎಲ್ಲ ಕಾಮಗಾರಿಗಳನ್ನು 14ನೇ ಹಣಕಾಸು ಯೋಜನೆಯಡಿ ಮತಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದ ಕೆಲಸಗಳನ್ನು ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ನಡೆಸಲಾಗುತ್ತಿದೆ. ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಲು ಹಾಗೂ ಗುತ್ತಿಗೆದಾರರಿಗೆ ಉತ್ತಮ ರೀತಿಯಲ್ಲಿ ಸಾರ್ವಜನಿಕರಿಗೆ ಅನಾನುಕೂಲವಾಗದ ರೀತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ನಿದರ್ೇಶನ ನೀಡಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿವರ್ಾಹಕ ಅಭಿಯಂತರ ಮಹೇಶ ನರಸನ್ನವರ, ಸಹಾಯಕ ಅಭಿಯಂತರ ಕುಮಾರಿ. ಆಸರ್ಿಯಾ ತರನುಮ್, ಕುಮಾರಿ. ಮಂಜೂಶ್ರೀ, ಶಾಸಕರ ಆಪ್ತ ಸಹಾಯಕ ವ್ಹಿ.ಎಮ್. ಪತ್ತಾರ, ಕಣಬಗರ್ಿ ಮಾಜಿ ನಗರ ಸೇವಕರಾದ ಬೈರಗೌಡ ಪಾಟೀಲ, ಗಂಡಗುದರಿ, ಮುರಗೇಂದ್ರಗೌಡ ಪಾಟೀಲ, ರಾಜು ಹಲಗೇಕರ, ವಿಪುಲ ಜಾಧವ, ವಿವೇಕ ಪಾಟೀಲ, ಸಾಗರ ಚೌಗುಲೆ, ಮನೋಹರ ಮುತಗೇಕರ ಹಾಗೂ ಇತರ ರಹವಾಸಿಗಳು ಉಪಸ್ಥಿತರಿದ್ದರು.