ಧರ್ಮ ತ್ಯಜಿಸಿದರೆ ಮನುಕುಲದ ಬದುಕಿಗೆ ಅಪಾಯ: ಶ್ರೀಗಳು

ಉಗರಗೋಳ (ಸವದತ್ತಿ) 06 :  ಸಮಾಜದ ಎಲ್ಲ ಧರ್ಮದವರು ತಾವು ಸ್ವೀಕರಿಸಿದ ಧರ್ಮದ ಮೂಲ ಆಚಾರ-ವಿಚಾರಗಳನ್ನು ಪರಿಪಾಲಿಸಬೇಕಾಗುತ್ತದೆ. ಆತ್ಮಸಾಕ್ಷಿಯಾಗಿ ಸ್ವೀಕರಿಸಿದ ಧರ್ಮವನ್ನು ಎಂದಿಗೂ ತಿರಸ್ಕರಿಸಬಾರದು. ಧರ್ಮ ಮಾರ್ಗ ತ್ಯಜಿಸಿದರೆ ಮನುಕುಲದ ಬದುಕಿನಲ್ಲಿ ಅಪಾಯ ತಪ್ಪಿದ್ದಲ್ಲ ಎಂದು ರಾಮದುರ್ಗ ತಾಲೂಕು ಢವಳೇಶ್ವರಮಠದ ಶ್ರೀರೇಣುಕ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಎಚ್ಚರಿಸಿದರು.

ಅವರು ಗ್ರಾಮದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳವರ ಮಠದ ವಾಷರ್ಿಕ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ, ಆಧ್ಯಾತ್ಮಿಕ ಚಿಂತನ ಸಮಾವೇಶ ಹಾಗೂ ಗುರುವಂದನದ ಸಂಯುಕ್ತ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ಧರ್ಮ ಪಾಲಿಸುವ ಹೊಣೆಗಾರಿಕೆ ಎಲ್ಲರಿಗೂ ಅನ್ವಯಿಸುತ್ತದೆ. ಧರ್ಮ ಸಿದ್ಧಾಂತಗಳನ್ನು ಅರಿಯದೇ ತಮ್ಮದೇ ಆದ ಪ್ರತಿಪಾದನೆಗೆ ಇಳಿದರೆ ಎಲ್ಲೆಡೆ ದ್ವಂದ್ವಗಳು ಕಾಡುತ್ತವೆ. ಅಹಂಕಾರ, ದ್ವೇಷ ಮತ್ತು ಸ್ವಾರ್ಥವಿದ್ದಲ್ಲಿ ಧರ್ಮವಿರುವುದಿಲ್ಲ. ಈಗ ವೈಚಾರಿಕತೆಯ ಬದಲಾವಣೆಯ ಕಾಲಘಟ್ಟದಲ್ಲಿ ನಾವಿರುವದರಿಂದ ಧರ್ಮದ ವಿಚಾರವಾಗಿ ಎಚ್ಚರಿಕೆ ಅತೀ ಅಗತ್ಯ ಎಂದರು.  

ಗ್ರಾಮದ ರಾಮಾರೂಢಮಠದ ಶ್ರೀಬ್ರಹ್ಮಾರೂಢ ಸಾಮೀಜಿ ಮಾತನಾಡಿ, ಆತ್ಮನಿರೀಕ್ಷಣೆ ಇಲ್ಲದೇ ಮಾನವನು ಮಹಾತ್ಮನಾಗಲಾರ. ನಿತ್ಯವೂ ಪ್ರತಿಯೊಬ್ಬರೂ ಆತ್ಮನಿರೀಕ್ಷಣೆಗೆ ತೆರೆದುಕೊಳ್ಳಬೇಕು ಎಂದರು. 

ಸ್ಥಳೀಯ ಶಾಸಕ ಆನಂದ ಮಾಮನಿ ಮಾತನಾಡಿ, ಉಗರಗೋಳದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಂಸ್ಕೃತ ವೇದಪಾಠ ಶಾಲೆ ಆರಂಭಗೊಂಡಿದ್ದು, ಇಲ್ಲಿ ಉಚಿತವಾಗಿ ಅನೇಕ ಬಡ ಜಂಗಮ ಮಕ್ಕಳು ವಿದ್ಯಾರ್ಜನೆಗೈಯುತ್ತಿರುವುದು ತಮಗೆ ಸಮಾಧಾನ ತಂದಿದೆ. ಇದೆಲ್ಲವೂ ಕೆ.ಎ.ಎಸ್. ಅಧಿಕಾರಿಗಳಾಗಿ ನಿವೃತ್ತಿ ಹೊಂದಿರುವ ಎಂ.ಆರ್. ಹಿರೇಮಠ ಅವರ ಪರಿಶ್ರಮದ ಫಲವಾಗಿದೆ ಎಂದರು.  

ಲಕ್ಷ ದೀಪೋತ್ಸವ : ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವವನ್ನು ಹೂಲಿ ಸಾಂಬಯ್ಯನವರಮಠದ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಗರಗೋಳ ನಿವರ್ಾಣೇಶ್ವರಮಠದ ಮಹಾಂತ ಸ್ವಾಮೀಜಿ, ಸವದತ್ತಿ ಕಲ್ಮಠದ ಶಿವಲಿಂಗ ಸ್ವಾಮೀಜಿ, ಬೈಲಹೊಂಗಲ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಮುನವಳ್ಳಿ ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ, ಅವರಾದಿ ಮತ್ತು ಸುರೇಬಾನ ಫಲಹಾರೇಶ್ವರಮಠದ ಶಿವಮೂತರ್ಿ ಸ್ವಾಮೀಜಿ, ತಾರಿಹಾಳ ಅಡವಿಸಿದ್ಧೇಶ್ವರ ವಿರಕ್ತಮಠದ ಅಡವಯ್ಯ ದೇವರು, ಶಾಸಕರು ಹಾಗೂ ಗಣ್ಯರು ಜಂಟಿಯಾಗಿ ಉದ್ಘಾಟಿಸಿದರು. ನಿವೃತ್ತ ಕೆ.ಎ.ಎಸ್. ಅಧಿಕಾರಿ ಮಹೇಶ್ ಹಿರೇಮಠ ಸದಾಶಯ ಸಂದೇಶ ನೀಡಿದರು.

ಸವದತ್ತಿ ಶ್ರೀಯಲ್ಲಮ್ಮದೇವಿ ದೇವಾಲಯದ ಕಾರ್ಯನಿವರ್ಾಹಕ ಅಧಿಕಾರಿ ರವಿ ಕೋಟಾರಗಸ್ತಿ, ವಿಶೇಷ ತಹಶೀಲದಾರ ಎಂ. ಎಸ್. ಮಠದ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿದರ್ೆಶಕ ಎಫ್.ಯು. ಪೂಜಾರ, ಶ್ರೀಯಲ್ಲಮ್ಮದೇವಿ ದೇವಾಲಯದ ಟ್ರಸ್ಟ ಅಧ್ಯಕ್ಷ ಆರ್.ಎಸ್. ತಿಪರಾಶಿ, ಹಿರಿಯ ವಕೀಲ ಆರ್.ಬಿ. ಶಂಕರಗೌಡರ, ಸಹಕಾರಿ ಮುಖಂಡ ಬಿ.ಪಿ. ಪಾಟೀಲ, ಪ್ರೌಢ ಶಾಲಾ ಮುಖ್ಯಾಧ್ಯಾಪಕಿ ಆರ್.ಪಿ. ಪವಾರ, ಡಾ. ವ್ಹಿ. ವೈ. ಪಾಟೀಲ, ಜೆ.ಎಸ್. ನರಗುಂದ, ಐ.ಪಿ. ಪಾಟೀಲ ಅತಿಥಿಗಳಾಗಿ ಪಾಲ್ಗೊಂಡಿದ್ದರು. 

ಗುರುರಕ್ಷೆ ಗೌರವ : ಹಿರಿಯ ವರ್ತಕ ಸುಭಾಸ ಹನಸಿ, ಎಂ.ಜಿ. ತೊರಗಲ್ಲಮಠ, ಜಗನ್ನಾಥಗೌಡ ಗಂದಿಗವಾಡ, ಗಂಗಾಧರಯ್ಯ ಶಾಸ್ತ್ರಿಗಳು ಹಿರೇಮಠ, ವೈ.ಆರ್. ಚೆನ್ನಪ್ಪಗೌಡರ, ಚಂದ್ರಯ್ಯಸ್ವಾಮಿ ವಿರಕ್ತಮಠ ಮುನವಳ್ಳಿ, ವಿಜಯ ನರಗುಂದ, ಶಶಿಧರ ಅಂಗಡಿ, ಆನಂದಸ್ವಾಮಿ ಹಿರೇಮಠ ಮೊರಬ, ಡಿ.ಎಸ್. ಕೊಪ್ಪದ, ಎಂ.ಐ. ಪೂಜಾರ, ವಿರೂಪಾಕ್ಷ ಹನಸಿ, ವ್ಹಿ.ವ್ಹಿ. ಪದಕಿಮಠ, ಬಸವರಾಜ ಸಕ್ಕಪ್ಪನವರ, ವ್ಹಿ.ಆರ್. ಹಿರೇಮಠ, ಮುದಕಪ್ಪ ಹೂಲಿ, ಶಿವಕುಮಾರಶಾಸ್ತ್ರಿ ಹಿರೇಮಠ, ಮಹಾದೇವಪ್ಪ ಸಿದ್ದಾಪೂರ,  ಕಲ್ಲಪ್ಪ ಬೋರಣ್ಣವರ, ಸಿ.ಜಿ.ವಿಭೂತಿಮಠ, ಶಿವಾನಂದ ಹೊನ್ನಬಿಂದಗಿ, ಸುನೀಲ ಬೆಳವಡಿ, ಆರ್.ಜಿ.ಕುಲಕಣರ್ಿ, ಶ್ರೀಕಾಂತ ಶಿಂತ್ರಿ, ಫಕ್ಕೀರಪ್ಪ ಗೋರಾಬಾಳ, ಸಂಗಪ್ಪ  ಚೂಳಕಿ, ಗಿರೀಶ ಸಕ್ಕಪ್ಪನವರ,  ಗುರುಸಿದ್ಧಯ್ಯ ಹಿರೇಮಠ ಹಂಚಿನಾಳ, ಬಿ.ಎನ್. ಕುಂಬಾರ, ರಮೇಶ ಸಂಬರಗಿ, ಬಸವರಾಜ ಬಾಕರ್ಿ, ಎನ್. ಎಸ್. ಪಾಟೀಲ, ಗೌಡಪ್ಪ ವಕ್ಕುಂದ, ಎಂ.ಎಫ್. ಪವಾಡಿ, ಪಿ.ಎಸ್. ಪಾಟೀಲ, ಈಶ್ವರ ಹಡಪದ, ಬಿ.ಐ. ಹಿರೇಮಠ, ಬಿ.ಎನ್. ಹೊಸೂರ, ಗುರುಮೂತರ್ಿ ಯರಗಂಬಳಿಮಠ ಅವರಿಗೆ ಗುರುರಕ್ಷೆಯ ಗೌರವ ಪ್ರದಾನ ಮಾಡಲಾಯಿತು.

ಸಂಗೀತ ಸೇವೆ : ಖ್ಯಾತ ಹಿಂದೂಸ್ತಾನಿ ಗಾಯಕರುಗಳಾದ ಡಾ. ಅಶೋಕ ಹುಗ್ಗಣ್ಣನವರ ಹಾಗೂ ಅಜರ್ುನ ವಠಾರ ಅವರು ಪ್ರಸ್ತುತ ಪಡಿಸಿದ ಭಕ್ತಿ ಸಂಗೀತ ಹಾಡುಗಾರಿಕೆಗೆ ಅಲ್ಲಮಪ್ರಭು ಕಡಕೋಳ ತಬಲಾ ಸಾಥ ನೀಡಿದರು. ಗಂಗಾಧರ ಹಿರೇಮಠ ಸ್ವಾಗತಿಸಿದರು. ವೀರಯ್ಯ ಹಿರೇಮಠ ನಿರೂಪಿಸಿದರು. ಮುತ್ತಯ್ಯ ತೊರಗಲ್ಲಮಠ ವಂದಿಸಿದರು. 

ಪ್ರಾತಃಕಾಲದಲ್ಲಿ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳವರ ಕತರ್ೃ ಗದ್ದುಗೆಗೆ ಏಕಾದಶ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಪುಷ್ಪಾಲಂಕಾರ ಮಹಾಪೂಜೆ ಶ್ರೀಮಠದ ಎಲ್ಲ ವೈದಿಕ ಬಳಗದಿಂದ ನಡೆಯಿತು. ನಂತರ ವಿಜೃಂಭಣೆಯಿಂದ ಜರುಗಿದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳವರ ಭಾವಚಿತ್ರದ ಪಲ್ಲಕ್ಕಿ ಉತ್ಸವವು ಮಹಿಳೆಯರ ನೂರೊಂದು ಕುಂಭಗಳೊಂದಿಗೆ ಹಾಗೂ ಹಲವಾರು ಜನಪದ ವಾದ್ಯ-ಮೇಳಗಳೊಂದಿಗೆ ಉಗರಗೋಳ ಗ್ರಾಮದ ಎಲ್ಲ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ದಾಸೋಹ ಸೇವೆಯಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.