ಗುಪ್ತವಾಗಿಟ್ಟರೆ ಸಮಸ್ಯೆ ದೊಡ್ಡದಾಗುತ್ತದೆ : ಕಿರಣ ಸತ್ತಿಗೇರಿ

If it is kept hidden, the problem will become bigger: the ray will die

 ಗುಪ್ತವಾಗಿಟ್ಟರೆ ಸಮಸ್ಯೆ ದೊಡ್ಡದಾಗುತ್ತದೆ : ಕಿರಣ ಸತ್ತಿಗೇರಿ 

ಮಹಾಲಿಂಗಪುರ 18: ಯಾವುದೇ ಸಮಸ್ಯೆಯನ್ನು ಗುಪ್ತವಾಗಿಟ್ಟರೆ ಅದು ದೊಡ್ಡದಾಗುತ್ತದೆ ಆದ್ದರಿಂದ ಆರಂಭದಲ್ಲೇ ಹೆತ್ತವರು ಅಥವಾ ಶಿಕ್ಷಕರೊಂದಿಗೆ ಹಂಚಿಕೊಳ್ಳಿ ಅಥವಾ ತಮಗೆ ದೂರು ನೀಡಿ ಎಂದು ಪಿಎಸ್‌ಐ ಕಿರಣ ಸತ್ತಿಗೇರಿ ಹೇಳಿದರು. 

ಅಪರಾಧ ತಡೆ ಮಾಸಾಚರಣೆ-2024 ಪ್ರಯುಕ್ತ ಸ್ಥಳೀಯ ಪೋಲೀಸ್ ಠಾಣೆಯ ವತಿಯಿಂದ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಅರಿವು ನೀಡಿ ಮಾತನಾಡಿದ ಅವರು, ಕೆಟ್ಟದಾಗಿ ಸನ್ನೆ ಮಾಡಿದ ಬಗ್ಗೆ ದೂರು ನೀಡಿದರೆ ತಕ್ಷಣವೇ ಆರೋಪಿಯನ್ನು ಬಂಧಿಸುವ ಅವಕಾಶವಿದ್ದು, ನಾನ್‌ಬೇಲಬಲ್ ವಾರಂಟ್ ಆಗುತ್ತದೆ ಆದ್ದರಿಂದ ತಕ್ಷಣವೇ ದೂರು ನೀಡಿ, ಇಲ್ಲದಿದ್ದರೆ ನಿಮಗೆ ಸಮ್ಮತಿ ಇದೆ ಎಂದು ಗಂಭೀರ ಹಂತ ತಲುಪುತ್ತದೆ. ಗುಡ್‌ಟಚ್, ಬ್ಯಾಡ್‌ಟಚ್ ಬಗ್ಗೆ ವಿದ್ಯಾರ್ಥಿನಿಯರಿಗೆ ತಿಳಿಸಿದ ಅವರು, ಯಾರಾದರೂ ಬ್ಯಾಡ್‌ಟಚ್ ಮಾಡಿದರೆ ತಕ್ಷಣವೇ ಹೆತ್ತವರಿಗೆ, ಶಿಕ್ಷಕರಿಗೆ ತಿಳಿಸಿ,ತೊಂದರೆಯ ತುರ್ತು ಸಂದರ್ಭದಲ್ಲಿ ಸಹಾಯವಾಣಿ 112 ಅಥವಾ 1098 ಕ್ಕೆ ಕರೆ ಮಾಡಿದರೆ ತಕ್ಷಣವೇ ಸಹಾಯ ಮಾಡುವ ಭರವಸೆ ನೀಡಿ ಮಾದಕ ವಸ್ತು, ಸೈಬರ್ ಕ್ರೈಮ್ ಮುಂತಾದವುಗಳಿಂದ ದೂರವಿರಲು ತಿಳಿಸಿದರು. 

ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಮಾತನಾಡಿ, ಸಾಮಾಜಿಕ ಭದ್ರತೆ, ನಿರ್ಭೀತ ವಾತಾವರಣಕ್ಕೆ ಪೋಲೀಸರ ಕೊಡುಗೆ ಅಪಾರ, ಮಕ್ಕಳಲ್ಲಿ ಅತೀ ಸೂಕ್ಷ್ಮ ವಿಷಯಗಳ ಬಗ್ಗೆ ಅರಿವು ಮೂಡಿಸಿ ಅವರು ದಾರಿ ತಪ್ಪದಂತೆ ಮಾರ್ಗದರ್ಶನ ಮಾಡಿದ ಇಲಾಖೆಗೆ ಋಣಿ ಎಂದರು. 

ಮುಖ್ಯೋಪಾಧ್ಯಾಯ ನಾರನಗೌಡ ಉತ್ತಂಗಿ ಮಾತನಾಡಿ, ಹಗಲಿರುಳೆನ್ನದೇ ಜನರ ಭದ್ರತೆಗಾಗಿ ಶ್ರಮಿಸುವ ಪೋಲೀಸರು ಗಡಿಯೊಳಗಿರುವ ಸೈನಿಕರು, ಅವರೇ ನಿಜವಾದ ಹೀರೋಗಳು ಎಂದರು.ಸಂಸ್ಥೆಯ ನಿರ್ದೇಶಕ ರಮೇಶ ಮುಳವಾಡ, ಎಎಸ್‌ಐ ಜೆ.ಜಿ.ಪಾಟೀಲ, ಹೆಡ್‌ಕಾನ್ಸೆ-್ಟಬಲ್ ವೈ.ವೈ.ಗಚ್ಚನ್ನವರ ಮತ್ತು ಮಕ್ಕಳಿದ್ದರು.ಸಾಕ್ಷಿ ಗೊಂದಿ ಸಂಗಡಿಗರು ಪ್ರಾರ್ಥಿಸಿ, ಲಕ್ಷ್ಮೀ ಅಮಾತಿ, ಅನುಶ್ರೀ ಹುದ್ದಾರ ನಿರೂಪಿಸಿದರು.