ಮಕ್ಕಳಲ್ಲಿ ಭಯ ನಿರ್ಮಾಣ ಮಾಡಿದರೆ ಅವರು ಸಾಧಿಸಲು ಅಸಮರ್ಥರಾಗುತ್ತಾರೆ: ಡಾ. ಲಿಂಗರಾಜ

If children develop fear, they will be unable to achieve: Dr. Lingaraja

ಮಕ್ಕಳಲ್ಲಿ ಭಯ ನಿರ್ಮಾಣ ಮಾಡಿದರೆ ಅವರು ಸಾಧಿಸಲು ಅಸಮರ್ಥರಾಗುತ್ತಾರೆ: ಡಾ. ಲಿಂಗರಾಜ 

ಧಾರವಾಡ 03: ಮಕ್ಕಳಲ್ಲಿ ಭಯ ನಿರ್ಮಾಣ ಮಾಡಿದರೆ ಮುಂದೆ ಅವರು ಏನನ್ನು ಸಾಧಿಸದ ಅಸಮರ್ಥರಾಗುತ್ತಾರೆ. ಇಂದು ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡದೇ ಹೋಗುತ್ತಿರುವುದು ಖೇದಕರ ಸಂಗತಿ ಎಂದು ಡಾ. ಲಿಂಗರಾಜ ರಾಮಾಪೂರ ನುಡಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು, ಪ್ರೊ. ರಾಮಚಂದ್ರ ವ್ಹಿ. ಪಾಟೀಲ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ  ಕಾರ್ಯಕ್ರಮದಲ್ಲಿ ‘ಶಿಕ್ಷಣದಲ್ಲಿ ರಂಗಕಲೆ ಪಾತ್ರ’ ವಿಷಯ ಕುರಿತು ಮಾತನಾಡುತ್ತಿದ್ದರು. ಅವರ ಕಲ್ಪನೆ ರಂಗ ಕಲೆ ಮಕ್ಕಳ ಕಲಿಕೆಗೆ ದಾರೀದೀಪವಾಗುವುದು ನಾಟಕದ ಮೂಲಕ ಪಾಠ ಮಾಡಿದ ಶಿಕ್ಷಕರು ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ನಾಟಕ ಪ್ರದರ್ಶನಕ್ಕಿಂತ ಮೊದಲು ತಾಲೀಮು ಮಾಡುವಾಗ ಹಲವಾರು ಮೌಲಿಕ ಗುಣಗಳನ್ನು ಕಲಿಯುತ್ತಾರೆ. ಶಿಕ್ಷಕರಿಗೆ ರಂಗಕಲೆ ಇರಬೇಕು . ಆದರೆ ಅದು ಆಗದೆ ಶುಷ್ಕ ಕಲಿಕೆ ನಡೆಯುತ್ತಿದೆ.  ಶಿಕ್ಷಣದ ಮಾಧ್ಯಮವಾಗಿ ರಂಗಕಲೆ ಪ್ರಭಾವಿಯಾಗಿ ಕಾರ್ಯಮಾಡುತ್ತದೆ. ರಂಗಭೂಮಿಯ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದಲು ಸಾಧ್ಯವಿದೆ. ಇಂಥ ಕಲೆಯನ್ನು ಮಕ್ಕಳ ಮೂಲಕ ಉಳಿಸಿ ಬೆಳೆಸಬೇಕಾಗಿದೆ ನಾಟಕ ಪ್ರದರ್ಶನ ಮಾಡುವ ಕಲೆ ಗೊತ್ತಿದ್ದವರು ಒಳ್ಳೆಯ ನಾಟಕವನ್ನು ರಚಿಸಬಲ್ಲವರಾಗುತ್ತಾರೆ. ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ ಶೈಕ್ಷಣಿಕ ಚಿಂತಕ ಎಂ. ಎಂ. ಚಿಕ್ಕಮಠ ಮಾತನಾಡುತ್ತಾ, ರಾಮಚಂದ್ರ ಪಾಟೀಲರಿಗೆ ಶೈಕ್ಷಣಿಕ ಚಿಂತನೆಯೊಂದಿಗೆ ಹಾಸ್ಯ ಪ್ರಿಯರಾಗಿದ್ದರು. ಆಕಾಶವಾಣಿಯ ಅಧಿಕೃತ ಕವಿಯಾಗಿ ಉತ್ಕೃಷ್ಟ ಕವಿತೆಗಳನ್ನು ನೀಡಿದವರು. ನಾಟಕದ ಮೂಲಕ ಒಂದೆರಡು ತಾಸಿನಲ್ಲಿ ನೀಡುವ ಸಂದೇಶ ತುಂಬಾ ಪ್ರಭಾವವನ್ನು ಮಾಡುವ ಶಕ್ತಿ ಹೊಂದಿದೆ. ಎಲ್ಲ ಲಲಿತಕಲೆಗಳು ಸೇರಿದ ಕಲೆ ರಂಗಭೂಮಿಯಾಗಿದೆ. ಇಂದು ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಳಿಸುವುದೊಂದೇ ಕಾರ್ಯ ಎನ್ನುವಂತಾಗಿ, ಲಲಿತಕಲೆಗಳು ಗೌನವಾಗಿದ್ದಾವೆ. ಲಲಿತಕಲೆಗಳಿಗೆ ಪ್ರೋತ್ಸಾಹ ನೀಡಿದ ಶಿಕ್ಷಕರನ್ನು ಎಂದು ಮರೆಯಲಾರರು. ರಾಮಚಂದ್ರ ಪಾಟೀಲರು ಮಕ್ಕಳು ಲಲಿತಕಲೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದರು. ಅವರು ಕವಿಯಾಗಿ, ನಾಟಕಕಾರರಾಗಿ, ಒಳ್ಳೆಯ ಆಡಳಿತಗಾರರಾಗಿ, ಪುಸ್ತಕ ಪ್ರಕಾಶಕರಾಗಿ ಬಹುಮುಖದಲ್ಲಿ ಕಾರ್ಯ ಮಾಡಿದವರು. ಇವರಿಗೆ ಚೆನ್ನಾಗಿ ಗೊತ್ತಿತ್ತು ರಂಗಭೂಮಿ ಮೂಲಕ ಶಿಕ್ಷಣ ನೀಡುವುದು ಪರಿಣಾಮಕಾರಿಯಾಗಿರುವುದನ್ನು ಮನಗಂಡು ಹಲವು ಮಕ್ಕಳ ನಾಟಕ ರೂಪಗಳನ್ನು ನೀಡಿದರು. ಕಲೆಯಿಂದ ಎನೆಲ್ಲಾ ಸಾಧನೆ ಮಾಡಲು ಸಾಧ್ಯ ಯಾರು ಲಲಿತಕಲೆಯಲ್ಲಿ ತೊಡಗಿಸಿಕೊಳ್ಳುತ್ತಾರೋ ನಿರಂತರ ಪ್ರಯತ್ನಶೀಲರಾಗುತ್ತಾರೆ ರಂಗಕಲೆಯ ಮೂಲಕ ಎಲ್ಲ ಭಾಷೆಯನ್ನು ಕಲಿಸಬಹುದು. ಇದು ಕಲಿಕೆ ಮೂಲಕ ಸಾಧ್ಯವಾಗದದ್ದನ್ನು ರಂಗಭೂಮಿಯಿಂದ ಸಾಧ್ಯವಾಗುವುದು. ಕೋಶಾಧ್ಯಕ್ಷ ಸತೀಶ ತುರಮರಿ ಸ್ವಾಗತಿಸಿದರು, ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು, ದತ್ತಿ ದಾನಿಗಳ ಪರವಾಗಿ ಶಿಕ್ಷಕಿ ಶಾರದಾ ನಾಗರಾಜ ಕೆರಕಲಮಟ್ಟಿ  ವೇದಿಕೆ ಮೇಲೆ ಇದ್ದರು ಶಂಕರ ಕುಂಬಿ ನಿರೂಪಿಸಿದರು, ಕೆ. ಎಚ್‌. ನಾಯಕ ವಂದಿಸಿದರು. ಪ್ರಮಿಳಾ ಜಕ್ಕಣ್ಣವರ ಪ್ರಾರ್ಥನಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ರಾಮಚಂದ್ರ ಪಾಟೀಲರ ಪುತ್ರಿ ಭಾರತಿ ಸಂಜೀವ ಸೋಮರಡ್ಡಿ ಹಾಗೂ ರಾಮಚಂದ್ರ ಪಾಟೀಲರ ಸಹೋದರ ಭೀಮಪ್ಪ ವಿ. ಎಸ್, ಶ್ರೀಶೈಲ ರಾಚಣ್ಣನವರ, ಆರ್‌. ಬಿ. ತಿಮ್ಮಾಪೂರ, ಮರಿಗೌಡರ, ಮಹಾಂತೇಶ ನರೆಗಲ್ಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.