ನಾನು ಹೋಗಿ ನಾವು ಬಂದರೆ ಜಗತ್ತೆ ನಮ್ಮದಾಗುತ್ತದೆ : ಸಿ ಟಿ ರವಿ

If I go and we come, the world will be ours: CT Ravi

ನಾನು ಹೋಗಿ ನಾವು ಬಂದರೆ ಜಗತ್ತೆ ನಮ್ಮದಾಗುತ್ತದೆ : ಸಿ ಟಿ ರವಿ  

ಮಹಾಲಿಂಗಪುರ   9  : ಜಗತ್ತಿನಲ್ಲಿ ನಾನು ಎಂದು ಬದುಕಿದವರು ನಾಲ್ಕೇ ದಿನಕ್ಕೆ ಅಂತ್ಯ ಕಾಣುತ್ತಾರೆ. ಎಲ್ಲಿ ನಾನೇ ಎಂಬ ಅಹಂ ಬರುತ್ತದೆ. ಅಲ್ಲಿಂದಲೇ ವಿನಾಶ ಆರಂಭ ಆಗುತ್ತದೆ.ನಾವು ಎಂಬ ಭಾವ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಆಗಲೇ ಜಗತ್ತು ನಮ್ಮದಾಗುತ್ತದೆ. ಎಂದು ವಿಧಾನ ಪರಿಷತ್ ಸದಸ್ಯರಾದ ಬಿಜೆಪಿಯ ಹಿರಿಯ ನಾಯಕರಾದ ಸಿ ಟಿ ರವಿ ಹೇಳಿದರು. 

ಸ್ಥಳೀಯ  ಬಿಜೆಪಿ  ನಾಯಕರಾದ  ಮನೋಹರ್  ಶಿರೋಳ  ಬೆಳೆಯುವ  ಜೇಡೇಗಳ  ಒಡೆಯ ಜಗದ್ಗುರು  ಮಹಾಲಿಂಗೇಶ್ವರರ  ಜಟೋತ್ಸವ  ಪೂಜಾ ಕಾರ್ಯಕ್ರಮದಲ್ಲಿ  ಭಾಗವಹಿಸಿ. ಮಾತನಾಡಿ ನಾವು  ಹಿಂದೂಗಳು  ಎಲ್ಲರು  ಪರಸ್ಪರ ಪ್ರೀತಿ ವಿಶಾಶ್ವದಿಂದ ಸಹ ಬಾಳ್ವೆ ನಡೆಸಿದರೆ ಮಾತ್ರ ನಾವು ಜಗತ್ತಿಗೆ ಗುರುವಾಗಿ ಜಗತ್ತನ್ನೇ ಆಳಬಹುದು. ಒಂದೇ ವೇಳೆ ನಾನೇ ನನ್ನಿಂದಲೇ ಎಂಬ ಭಾವನೆ ನಮ್ಮಲ್ಲಿ ಮೂಡಿದರೆ. ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ. ಪಕ್ಷ ಅಂತ ಬಂದರೆ ಯಾರು ಪಕ್ಷಕ್ಕಿಂತ ದೊಡ್ಡವರಲ್ಲಿ ರಾಷ್ಟ್ರದ ವಿಷಯದಲ್ಲಿ ದೇಶವೇ ಮುಖ್ಯ ಹೊರತು ಪಕ್ಷ ಅಲ್ಲ ನಾವೆಲ್ಲರೂ ನಾವು ಅನ್ನುವ ಭಾವ ಬೆಳೆಸಿಕೊಂಡು. ಒಟ್ಟಾಗಿ ಇದ್ದರೆ ಮಾತ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ವಿಶ್ವ ಕುಟುಂಬಿ (ವಿಶ್ವ ನಾಯಕ )ಆಗಲು ಸಾಧ್ಯವಿದೆ. ದೆಹಲಿ ವಿಧಾನ ಸಭೆ ಗೆಲವು ಪಕ್ಷಕ್ಕೆ ರಾಷ್ಟ್ರ ಮಟ್ಟದಲ್ಲಿ ದೀಪ ಕೆಳಗೆ  ಕತ್ತಲೆ ಎನ್ನುವ  ನಾನ್ನುಡಿಗೆ  ಅನ್ವರ್ಥ ಅನ್ನುವ ಹಾಗೆ ಆಗಿತ್ತು. ಕಳೆದ 27 ವರ್ಷಗಳಿಂದ ದೆಹಲಿ ಬಿಜೆಪಿ  ಆಡಳಿತದಿಂದ ದೂರ ಇದ್ದು ಬೇರೆ ಬೇರೆ ಪಕ್ಷಗಳ ಆಡಳಿತಕ್ಕೆ ಒಳಪಟ್ಟಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ  ದೆಹಲಿಯ  ಜನತೆ  ನಮ್ಮ  ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಇದರಿಂದ ಪಕ್ಷಕ್ಕೆ ಮತ್ತಷ್ಟು  ಶಕ್ತಿ  ಬಂದಿದೆ. ಇದರಿಂದ ದೇಶದ ಮತ್ತು ದೆಹಲಿ ಅಭಿವೃದ್ಧಿ ಮಾಡಲು ಸಹಾಯವಾಗಲಿದೆ. ಜನರನ್ನು  ನಾವು  ಪ್ರೀತಿಸಿದರೆ ಜನ ನಮ್ಮನ್ನು ಪ್ರೀತಿಸುತ್ತಾರೆ ಅನ್ನುವುದಕ್ಕೆ ದೆಹಲಿ ನಮಗೆ ತೋರಿಸಿಕೊಟ್ಟಿದೆ. ಜನರ ಕಷ್ಟಗಳಿಗೆ ನಾವು ಹೆಗಲು ಕೊಟ್ಟರೆ ಅವರ ಮಧ್ಯ ನಾವು ಬೆಳೆಯಲಿ ಜನ ನಮ್ಮೊಂದಿಗೆ ಕೈ ಜೋಡಿಸುತ್ತಾರೆ. 

ರಾಜ್ಯದಲ್ಲಿ  ಪಕ್ಷ  ಸಂಘಟನೆ  ಬಹಳ  ಮುಖ್ಯವಾಗಿದೆ.  ರಾಜ್ಯಾಧ್ಯಕ್ಷರ  ಬದಲಾವಣೆ  ವರಿಷ್ಟರಿಗೆ  ಬಿಟ್ಟಿದ್ದು.  ನಾನು  ನಮಾನ್ಯ ಕಾರ್ಯಕರ್ತನಾಗಿ ಪಕ್ಷದ ನಿಷ್ಠಾವಂತ ಸೇವಕನಾಗಿ ದುಡಿಯುತ್ತಿದ್ದೇನೆ. ಉಳಿದೆಲ್ಲವೂ ಪಕ್ಷದ ವರಿಷ್ಟರು ತೀರ್ಮಾನಿಸುತ್ತಾರೆ.ಮುಂಬರುವ ದಿನಗಳಲ್ಲಿ ಇಡೀ ಜಗತ್ತಿಗೆ ಭಾರತ ವಿಶ್ವಕ್ಕೆ ಮಾದರಿ ರಾಷ್ಟ್ರವಾಗಿ ರೂಪಗೋಳ್ಳಲ್ಲಿದೆ. ಎಂದರು. 

ನಂತರ  ಮಹಾಲಿಂಗೇಶ್ವರ  ದೇವಸ್ಥಾನಕ್ಕೆ ತೆರಳಿ ಶ್ರೀಮಹಾಲಿಂಗೇಶ್ವರರ ಜಟೋತ್ಸವ ಮತ್ತು ರಥೋತ್ಸವದಲ್ಲಿ  ಭಾಗವಹಿಸಿ ಶ್ರೀಗಳಿಂದ ಆರ್ಶಿವಾದ ಪಡೆದರು.ಜಟೋತ್ಸವ ಸಂದರ್ಭದಲ್ಲಿ ಸಂಸದ ಪಿ.ಸಿ ಗದ್ದಿಗೌಡರ, ಶಾಸಕ ಸಿದ್ದು ಸವದಿ,ಜಮಖಂಡಿ ಮಾಜಿ  ಶಾಸಕರಾದ  ಶ್ರೀಕಾಂತ್ ಕುಲಕರ್ಣಿ,ಮುಖಂಡರಾದ, ಸುಭಾಸ ಪಾಟೀಲ,ಶಾಂತಗೌಡ ಪಾಟೀಲ,ಸತೀಶ ಹಜಾರೆ, ಶೇಖರ ಅಂಗಡಿ, ಶ್ರೀಮಂತ  ಹಳ್ಳಿ, ಆನಂದ ಕಂಪು,  ಸುರೇಶ ಅಕ್ಕಿವಾಡ,ಈರ​‍್ಪ ದಿನ್ನಿ ಮನಿ, ಮಹಾಂತೇಶ ಹಿಟ್ಟಿನಮಠ, ಶಿವಾನಂದ  ಅಂಗಡಿ, ಶಂಕರಗೌಡ ಪಾಟೀಲ,ಚನ್ನಪ್ಪ ಪಟ್ಟಣಶೆಟ್ಟಿ, ಸಿದ್ದುಗೌಡ ಪಾಟೀಲ, ಸಂಜು  ಬಾರಕೋಲ, ಶಿವಲಿಂಗ ಘಂಟಿ, ಭೀಮಶಿ ಗೌಂಡಿ,ಹನಮಂತ  ಜಮಾದಾರ, ಹನಮಂತ  ಬುರುಡ, ಶಿವಬಸು ಗೌಂಡಿ,ಪ್ರಶಾಂತ ಮುಕ್ಕೆನ್ನವರ, ಈರಣ್ಣ ಹಲಗತ್ತಿ,ವಿನೋದ ಉಳ್ಳಾಗಡ್ಡಿ, ವಿಷ್ಟುಗೌಡ ಪಾಟೀಲ, ಮಲ್ಲಪ್ಪ ಯರಡ್ಡಿ, ಮಹಾದೇವ ಶಿರೋಳ,ವಿರೇಶ ಶಿರೋಳ,ಉಮೇಶ ಜಾಡಗೌಡರ,ಸಿದ್ದು ಶಿರೋಳ, ಬಸು ಜಗದಾಳ, ಸಂತೋಷ  ಶಿರೋಳ,  ಬಸು ಮಡಿವಾಳ, ಸೇರಿದಂತೆ ಅನೇಕರು ಉಪಸ್ಥೀತರಿದ್ದರು.