ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಂಚಾಳ

ಕೊಪ್ಪಳ 30: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಲು ಬಾಲ ಭವನ ಸೊಸೈಟಿ ಬೆಂಗಳೂರು ರವರು ಚಿತ್ರಕಲೆ ಹಾಗೂ ದೇಶಭಕ್ತಿಗೀತೆಗಳ ಸ್ಪರ್ಧೆಗಳನ್ನು  ನಡೆಸಿ ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಈರಣ್ಣ ಪಂಚಾಳ ಹೇಳಿದರು.  

ಆಗಸ್ಟ. 27 ರಂದು  ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಪ್ರಸ್ತುತ ದಿನಗಳಲ್ಲಿಯೂ ಅಲ್ಲಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿರುವುದು ವಿಷಾದನೀಯ. ಹೆಣ್ಣು ಮಕ್ಕಳು ಜಾಗೃತಗೊಳ್ಳಬೇಕು. ಉತ್ತಮ ಶಿಕ್ಷಣದಿಂದ ಇಂತಹ ಸಾಮಾಜಿಕ ಪಿಡುಗುಗಳನ್ನು ನಿಮರ್ೂಲನೆ ಮಾಡಬಹುದು. ಬಾಲ್ಯ ವಿವಾಹ ಸೇರಿದಂತೆ ಮಕ್ಕಳ ಮೇಲಿನ ಯಾವುದೇ ರೀತಿಯ ದೌರ್ಜನ್ಯವನ್ನು ಕಂಡಾಗ ಮಕ್ಕಳ ಸಹಾಯ ವಾಣಿಯನ್ನು ಬಳಸಿಕೊಂಡು ಮಕ್ಕಳಿಗೆ ನೆರವಾಗಬೇಕು. ಶಿಕ್ಷಕರು ಮಕ್ಕಳ ವಯಸ್ಸಿನ  ದೃಢೀಕರಣ ನೀಡುವಾಗ ಜಾಗರೂಕತೆಯಿಂದ ನೀಡಬೇಕು. ಬಾಲ ಭವನ ನಡೆಸುವ ಇಂತಹ ಸ್ಪಧರ್ೆಗಳಲ್ಲಿ ಎಲ್ಲ ಮಕ್ಕಳೂ ಪಾಲ್ಗೊಳ್ಳುವಂತಾಗಬೇಕು. ಮಕ್ಕಳು ತಮ್ಮ ಪ್ರತಿಭೆ ಅನಾವರಣಕ್ಕೆ ಇಂತಹ ಸ್ಪಧರ್ೆಗಳನ್ನು ಸದುಪುಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.  

ಮುಖ್ಯ  ಅಥಿತಿಯಾಗಿ  ಆಗಮಿಸಿದ್ದ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಬಿಆರ್ಸಿ ಪ್ರಕಾಶ ಮಾತನಾಡಿ ಮಕ್ಕಳಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಂತೆ  ಬಾಲ ಭವನ ಸಮಿತಿಯು ವಿವಿಧ ಸೃಜನಾತ್ಮಕ ಚಟುವಟಿಕೆ ಕಾರ್ಯಕ್ರಮಗಳನ್ನು ನಡೆಸುವುದು ಉಪಯುಕ್ತವಾಗಿದೆ ಎಂದು ಹೇಳಿದರು.  ಸ್ಪಧರ್ೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ಸಹಿತ ಬಹುಮಾನಗಳನ್ನು ಮತ್ತು ಭಾಗವಹಿಸಿದ ಮಕ್ಕಳೆಲ್ಲರಿಗೂ ಪ್ರಶಂಸಾ ಪತ್ರಗಳನ್ನು ನೀಡಲಾಯಿತು. ಬಾಲ ಭವನದ ಕಛೇರಿ ಸಹಾಯಕರು  ಉಮೇಶ ಬರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು ಸ್ವಾಗತ ಹಾಗೂ ವಂದನಾರ್ಪಣೆಯನ್ನು ಮೆಹಬೂಬಸಾಬ ಇಲಾಹಿ ಬಾಲ ಭವನದ ಕಾರ್ಯಕ್ರಮದ ಸಂಯೋಜಕರು ನೆರವೇರಿಸಿದರು.  

ಕಾರ್ಯಕ್ರಮದಲ್ಲಿ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಜಯಶ್ರೀ ಆರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಅಂಗಡಿ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೆಶಕ ರಾಜೇಶ ನಾಡಗೇರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜೇಂದ್ರ ಬಾಬು ಸೇರಿದಂತೆ  ತೀಪರ್ುಗಾರರು, ಶಿಕ್ಷಕರು, ವಿವಿಧ ಶಾಲಾ ಮಕ್ಕಳು, ಪಾಲಕರು, ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.