ಕನಿಮೋಳಿ ನಿವಾಸಕ್ಕೆ ಐಟಿ ದಾಳಿ: ಚಿದಂಬರಂ ಖಂಡನೆ


  ಚೆನ್ನೈ, ಏ 17  ಡಿಎಂಕೆ ನಾಯಕಿ, ರಾಜ್ಯಸಭಾ ಸದಸ್ಯೆ ಸಚಿವೆ ಕನಿಮೋಳಿ ನಿವಾಸದ ಮೇಲೆ ನಡೆದಿರುವ ಐಟಿ ದಾಳಿಯನ್ನು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಖಂಡಿಸಿದ್ದಾರೆ.   ಆದಾಯ ತೆರಿಗೆ ಇಲಾಖೆಯು ನಿರಂಕುಶವಾದಿಯಂತೆ ವರ್ತಿಸುತ್ತಿದ್ದು , ಕೆಲವೇ ಪಕ್ಷದ ಮುಖಂಡರ ನಿವಾಸದ ಮೇಲೆ ಮಾತ್ರ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ಚಿದಂಬರಂ, ಕನಿಮೋಳಿ ನಿವಾಸದಲ್ಲಿ ಯಾವುದೇ ಅಕ್ರಮ ದಾಖಲೆಗಳು ಪತ್ತೆಯಾಗಿಲ್ಲ ಎಂಬ ಸುದ್ದಿ ಲಭ್ಯವಾಗಿದೆ.  ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯ ಕಣ್ಣಿಗೆ ಕೇವಲ ವಿಪಕ್ಷ ಮುಖಂಡರು ಮಾತ್ರ ಕಾಣುತ್ತಿದ್ದಾರೆ ಎಂದು ಟೀಕಿಸಿದ್ದಾರೆ.