ಐಜಿಪಿ ನಂಜುಂಡಸ್ವಾಮಿಗೆ ಸನ್ಮಾನ

ಲೋಕದರ್ಶನ ವರದಿ

ಕೊಪ್ಪಳ 16: ಪಕ್ಕದ ರಾಯಚೂರು ಜಿಲ್ಲೆಯ, ರಾಯಚೂರು ನಗರದಲ್ಲಿರುವ ಎಸ್ಪಿ ಕ್ರೀಡಾಂಗಣದಲ್ಲಿ ಮಂಗಳವಾರ ರಂದು ಜರುಗಿದ ಪೋಲಿಸ್ ಇಲಾಖೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೋಲಿಸ್ ಇಲಾಖೆಯ ಬಳ್ಳಾರಿ ವಲಯ ಐಜಿಪಿಯವರಾದ ಎಂ. ನಂಜುಂಡಸ್ವಾಮಿಯವರಿಗೆ ನ್ಯೂಸ್ ಮೀಡಿಯಾ ಅಸೊಸಿಯೆಷನ್ ನಿರ್ದೇಶಕ ಎ.ಮೊಹಮ್ಮದ್ ರಫಿ ನೇತೃತ್ವದ ತಂಡ ಭೇಟಿ ಮಾಡಿ ಅವರನ್ನು ಸನ್ಮಾನಿಸಿ ಇದೇ ದಿ. 27ರಂದು ಬೆಂಗಳೂರಿನ ಸಿಟಿ ಸೆಂಟ್ರೆಲ್ ಹಾಲ್ನಲ್ಲಿ ನಡೆಯುವ ಅಸೋಸಿಯೆಷನ್ನ 3ನೇ ವಾಷರ್ಿಕೊತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡರು.

ಪೋಲಿಸ್ ಇಲಾಖೆಯ ಬಳ್ಳಾರಿ ವಲಯ ಐಜಿಪಿಯವರಾದ ಎಂ.ನಂಜುಂಡಸ್ವಾಮಿಯವರು ಅಸೊಸಿಯೆಷನ್ ವತಿಯಿಂದ ಸನ್ಮಾನ ಮತ್ತು ಆಮಂತ್ರಣ ಸ್ವೀಕರಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಜಾಪುರ ಸಾಹೆಬ್, ಅಬ್ದುಲ್ ರೆಹ್ಮಾನ, ವಸೀಮ್ ರಝ್ವಿ, ಅಜೀಮುದ್ದಿನ್, ಸಾದಿಕ್ ಹುಸೇನ್, ಸುಹೇಲ್ ಹುಸೇನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.