ಐಸಿಸಿ ವಿಶ್ವಕಪ್: 15 ಆಟಗಾರರ ಬಾಂಗ್ಲದೇಶ ಕ್ರಿಕೆಟ್ ತಂಡ ಪ್ರಕಟ


ದುಬೈ, ಏ 16  ಇಂಗ್ಲೆಂಡ್ನಲ್ಲಿ ನಡೆಯುವ ಐಸಿಸಿ ವಿಶ್ವಕಪ್ಗೆ 15 ಆಟಗಾರರ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಕಳೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದ ಶಕಿಬ್ ಅಲ್ ಹಸನ್ ಅವರು ತಂಡಕ್ಕೆ ಮರಳಿದ್ದು, ಅವರಿಗೆ ಉಪ ನಾಯಕನ ಜವಾಬ್ದಾರಿ ನೀಡಲಾಗಿದೆ.  

ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ವೇಳೆ ಅವರು ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಹಾಗಾಗಿ ಅವರು ನ್ಯೂಜಿಲೆಂಡ್ ಪ್ರವಾಸದಿಂದ ದೂರ ಉಳಿದಿದ್ದರು. ಇದೀಗ ಅವರು ಚೇತರಿಸಿಕೊಂಡಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ ರೈಸರ್ಸ   ಪರ ಒಂದು ಪಂದ್ಯ ಆಡಿದ್ದಾರೆ. 

ಕಳೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ 0-3 ಅಂತರದಲ್ಲಿ ವೈಟ್ ವಾಶ್ ಅನುಭವಿಸಿತ್ತು. ಎಡಗೈ ಬ್ಯಾಟ್ಸ್ಮನ್ ಮೊಮಿನ್ಯೂಲ್ ಹಕ್ಯೂ ಅವರ ಸ್ಥಾನಕ್ಕೆ ಶಕಿಬ್ ಹಲ್ ಹಸನ್ಗೆ ಸ್ಥಾನ ಕಲ್ಪಿಸಲಾಗಿದೆ. ಆರಂಭಿಕ ಆಟಗಾರನನ್ನಾಗಿ ತಮೀಮ್ ಇಕ್ಬಾಲ್ ಅವರನ್ನು ಪರಿಗಣಿಸಲಾಗಿದೆ.  

ನ್ಯೂಜಿಲೆಂಡ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಲಿಟಾನ್ ದಾಸ್ ಅವರನ್ನು ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿ ಪರಿಗಣಿಸಲಾಗಿದೆ. ಸೌಮ್ಯ ಸರ್ಕಾರ  ಹಾಗೂ ಸಬ್ಬೀರ್ ರಹಮಾನ್ ಅವರಿಗೆ ಅಂತಿಮ 15ರಲ್ಲಿ ಅವಕಾಶ ನೀಡಲಾಗಿದೆ. ಇತ್ತೀಚೆಗೆ ಉತ್ತಮ ಪ್ರದರ್ಶನ ತೋರಿದ್ದ ಮೊಹಮ್ಮದ್ ಮಿಥುನ್ ಅವರಿಗೂ ಚೊಚ್ಚಲ ವಿಶ್ವಕಪ್ ಆಡಲು ಅವಕಾಶ ಕಲ್ಪಿಸಲಾಗಿದೆ. ಇವರ ಜತೆ ಮೆಹಡು ಹಸನ್ ಹಾಗೂ ಸೈಫುದ್ದೀನ್ ಅವರು ಕೂಡ ಮೊದಲ ಬಾರಿ ವಿಶ್ವಕಪ್ ಆಡಲಿದ್ದಾರೆ.  

23 ವರ್ಷದ ಮೊಸಾಡ್ಡೆಕ್ ಹೊಸೈನ್ ಅವರಿಗೆ ಸ್ಥಾನ ಕಲ್ಪಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಬ್ಯಾಟಿಂಗ್ ಜತೆಗೆ ಆಫ್ ಸ್ಪಿನ್ ಮೋಡಿ ಮಾಡಲಿದ್ದಾರೆ. ಮಶ್ರಾಫೆ ಮೊರ್ತಜಾ  ಅವರು ಪಾಲಿಗೆ ನಾಲ್ಕನೇ ವಿಶ್ವಕಪ್ ಹಾಗೂ ಇದೇ ಕೊನೆಯ ವಿಶ್ಬಕಪ್ ಕೂಡ ಆಗಲಿದೆ. ತಂಡವನ್ನು ಇವರೇ ಮುನ್ನಡೆಸಲಿದ್ದಾರೆ. ಉಪ ನಾಯಕನ ಜವಾಬ್ದಾರಿಯನ್ನು ಶಕೀಬ್ ಹಲ್ ಹಸನ್ ನಿರ್ವಹಿಸಲಿದ್ದಾರೆ. 

ಮೇ ಮೊದಲ ವಾರದಲ್ಲಿ ಐಲರ್ೆಂಡ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ತ್ರಿಕೋನ ಸರಣಿಯಲ್ಲಿ ಬಾಂಗ್ಲಾದೇಶ ಆಡಲಿದ್ದು, ಏ.22 ರಂದು ಯುನೈಟೆಡ್ ಕಿಂಗ್ಡಮ್ಗೆ ಪ್ರಯಾಣ ಬೆಳೆಸಲಿದೆ. ನಂತರ ಐಸಿಸಿ ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ಹಾಗೂ ಪಾಕಿಸ್ತಾನದ ವಿರುದ್ಧ ಅಭ್ಯಾಸ ಪಂದ್ಯವಾಡಲಿದೆ. ಜೂನ್ 2 ರಂದು ಬಾಂಗ್ಲಾದೇಶ ವಿಶ್ವಕಪ್ ಟೂನರ್ಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.  

ವಿಶ್ವಕಪ್ ಬಾಂಗ್ಲಾದೇಶ ತಂಡ: 

ಮಶ್ರಾಫೆ ಮೊರ್ತಜಾ (ನಾಯಕ), ತಮೀಮ್ ಇಕ್ಬಾಲ್, ಮಹಮ್ಮುದುಲ್ಲಾ, ಮುಷ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್ (ಉಪ ನಾಯಕ), ಸೌಮ್ಯ ಸಕರ್ಾರ್, ಲಿಟಾನ್ ದಾಸ್, ಸಬ್ಬೀರ್ ರಹಮಾನ್, ಮೆಹಡಿ ಹಸನ್, ಮೊಹಮ್ಮದ್ ಮಿಥುನ್, ರುಬೆಲ್ ಹುಸೇನ್, ಮುಸ್ತಾಫಿಜರ್ ರಹಮಾನ್, ಮೊಹಮ್ಮದ್ ಸೈಫುದ್ದೀನ್, ಮೊಸಡೆಕ್ ಹುಸೇನ್, ಅಬು ಜಯೇದ್.