ಸಿಂದಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೀಡುತ್ತೆನೆ: ಸಿದ್ದರಾಮಯ್ಯ

I will provide sufficient funds for the development of Sindagi constituency: Siddaramaiah

 ಸಿಂದಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೀಡುತ್ತೆನೆ: ಸಿದ್ದರಾಮಯ್ಯ 

 ತಾಂಬಾ  26: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಂದಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೀಡುತ್ತೆನೆ ಇನ್ನು ಮುಂದೆ ನಿಮಗೆ ಕ್ರೀಯಾ ಯೋಜನೆ ಮಾಡಲು ಸಮಯ ಸಿಗುವದಿಲ್ಲ ಅಷ್ಟು ಅನುದಾನವನ್ನು ಪ್ರತಿಯೊಂದು ಕ್ಷೇತ್ರಕ್ಕೆ ಕೊಡುತ್ತೇನೆ ಎಂದು ನಮಗೆ ಅಭಯ ಹಸ್ತ ನೀಡಿದ್ದಾರೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.                  ತಾಂಬಾ ಗ್ರಾಮದಲ್ಲಿ 2023 -24 ನೇ ಸಾಲಿನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅಂದಾಜು ಒಂದು ಕೋಟಿ ರೂಪಾಯಿ ಮೌಲ್ಯದ ಸಿಸಿ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಮುಖ್ಯಮಂತ್ರೀಗಳಾದ ಸಿದ್ದರಾಮಯ್ಯನವರು ಬಡವರ ಹಿಂದುಳಿದವರ ಅಲ್ಪಸಂಖ್ಯಾತರ ಹಿತ ಚಿಂತಕರಾಗಿದ್ದರೆ, ದೇಶದಲ್ಲಿ ಕರ್ನಾಟಕ ರಾಜ್ಯ ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿದ ಧೀಮಂತ ನಾಯಕ, ರಾಜಕಾರಣ ಶಾಶ್ವತ ಅಲ್ಲ ಎಂಬುದು ಮನುಷ್ಯತ್ವದ ಲಕ್ಷಣ, ನಾನು ಚುನಾವಣಾ ಪೂರ್ವದಲ್ಲಿ ನಾನು ಕೊಟ್ಟ ಬರವಸೆಗಳಲ್ಲಿ ಕುಡಿಯುವ ನೀರಿನ ಯೋಜನೆಯ ಪ್ರಾರಂಭವಾಯಿತು, ತ್ವರಿತವಾಗಿ ಮುಗಿಯುವ ಹಂತದಲ್ಲಿದೆ.  

 ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಈ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ವಿದ್ಯಾರ್ಥಿಗಳ ವಸತಿ ನಿಲಯ, ಬಸ್ ನಿಲ್ದಾಣ, ಸಮುದಾಯ ಆರೋಗ್ಯ ಕೇಂದ್ರ, 110ಕೇವಿ ವಿದ್ಯುತ್ ಘಟಕವನ್ನು ಮಂಜೂರು ಗೋಳಿಸಿದ್ದೆನೆ. ಇನ್ನೂ ಹಲವಾರು ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಸೂಚಿಸುತ್ತೇನೆ, ನಾನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಒಂದು ಬಾರಿ ಸಿಂದಗಿ ಮತಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತು ತಿಳಿಸಿದಾಗ ನನ್ನ ಮತ ಕ್ಷೇತ್ರದ ಅಭಿವೃದ್ಧಿಗೆ ಹಣ ಮಂಜೂರು ಮಾಡುವ ಬರವಸೆ ನೀಡಿದ್ದಾರೆ. ಇಂತವರು ನಮ್ಮ ರಾಜ್ಯದ ಮುಖ್ಯಮಂತ್ರೀ ಆಗಿರುವದು ನಮ್ಮ ಭಾಗ್ಯ ಎಂದರು. 

ನಿವೃತ್ತ ಪ್ರಾಚಾರ್ಯ ಎಸ್‌.ಎಸ್‌.ಕನಾಳ, ಮಲ್ಲಯ್ಯ ಸಾರಂಗಮಠ ಮಾತನಾಡಿದರು. ಮಂಜುನಾಥ್ ಕಾಮಗೊಂಡ, ಗ್ರಾಪಂ ಅಧ್ಯಕ್ಷ  ಆಸ್ಮಾ ರಜಾಕ್ ಚಿಕ್ಕಗಸಿ, ಉಪಾಧ್ಯಕ್ಷ ರವೀಂದ್ರ ನಡಗಡ್ಡಿ, ಗ್ರಾಪಂ ಸದಸ್ಯರಾದ ರಾಚಪ್ಪ ಗುಳೇದ, ಅಪ್ಪಣ್ಣ ಕಲ್ಲೂರ, ಗ್ರಾಮದ ಹಿರಿಯರಾದ ಅಣ್ಣಾರಾಯ ಗೌಡ ಪಾಟೀಲ, ಜೆ.ಎಸ್‌.ಹತ್ತಳ್ಳಿ, ದಯಾನಂದ ನಿಂಬಾಳ, ಪರಶು ಬಿಸನಾಳ, ಸರ್ಕಾರಿ ಪ್ರೌಢಶಾಲೆ ಎಸ್‌.ಡಿ.ಎಮ್‌.ಸಿ ಅಧ್ಯಕ್ಷ ಸಿದ್ದು ಹತ್ತಳ್ಳಿ, ಪುಂಡಲಿಕ್ ಹೂಗಾರ, ಬಸವರಾಜ ಅವಟಿ, ಶಾಂತಪ್ಪ ಹಂಚಿನಾಳ, ಪುಟ್ಟಗೌಡ ಪಾಟೀಲ್, ಮಹಮ್ಮದ್ ವಾಲಿಕಾರ್, ಫಾರೂಕ್ ಮುಲ್ಲಾ, ಸಿದ್ದಗೊಂಡಪ್ಪ ಹಿರೇಕುರುಬರ, ವಿಜಯಕುಮಾರ್ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.