ಬೋಗಸ್ ಮತದಾರರನ್ನು ಸೃಷ್ಠಿಸಿ ಅನ್ಯಾಯ ಮಾಡುತ್ತಿದ್ದಾರೆ ಇದನ್ನು ಬಲವಾಗಿ ಖಂಡಿಸುತ್ತೇನೆ : ವೆಂಕನಗೌಡ ಪಾಟೀಲ

I strongly condemn creating bogus voters and doing injustice: Venkanagowda Patil

ಬೋಗಸ್ ಮತದಾರರನ್ನು ಸೃಷ್ಠಿಸಿ ಅನ್ಯಾಯ ಮಾಡುತ್ತಿದ್ದಾರೆ ಇದನ್ನು ಬಲವಾಗಿ ಖಂಡಿಸುತ್ತೇನೆ : ವೆಂಕನಗೌಡ ಪಾಟೀಲ 

ಮುದ್ದೇಬಿಹಾಳ 26: ಪಟ್ಟಣದ ಪ್ರತಿಷ್ಠಿತ ಬ್ಯಾಂಕುಗಳಲ್ಲೊಂದಾದ ದಿ ಕರ್ನಾಟಕ ಕೋ ಆಪ್ ಬ್ಯಾಂಕಿನ ಚುನಾವಣೆಯಲ್ಲಿ ಹಾಲಿ ಪೆನೆಲ್ ದವರು ಅಧಿಕಾರದ ಲಾಲಸೆಗೆ ತಾವೇ ಗೆಲ್ಲಬೇಕೆಂದು ತಿರ್ಮಾನಿಸಿ ಬೋಗಸ್ ಮತದಾರರನ್ನು ಸೃಷ್ಠಿಸಿ ಅನ್ಯಾಯ ಮಾಡುತ್ತಿದ್ದಾರೆ ಇದನ್ನು ಬಲವಾಗಿ ಖಂಡಿಸುತ್ತೇನೆ ಎಂದು ಕರ್ನಾಟಕ ಬ್ಯಾಂಕ ಹಾಲಿ ಸದಸ್ಯ ಹಾಗೂ ತಾಲೂಕಾ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ವೆಂಕನಗೌಡ ಪಾಟೀಲ ಕಿಡಿಕಾರಿದರು. 

ಹುಡ್ಕೋ ಬಡಾವಣೆಯ ಶ್ರೀ ಹನುಮಾನ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಿ ಕರ್ನಾಟಕ ಬ್ಯಾಂಕ ಲಿಮಿಟೆಡ ಇಷ್ಟೋಂದು ಎತ್ತರಕ್ಕೆ ಬೆಳೆಯಲು ಬ್ಯಾಂಕಿನ ಸದಸ್ಯರು, ಶೇರುದಾರರು ಜೊತೆಗೆ ಠೇವಣಿದಾರರು ಕಾರಣರಾಗಿದ್ದಾರೆ. ಸಧ್ಯ ನಾನೂನುಕೂಡ ಹಾಲಿ ಸದಸ್ಯನಾಗಿ ಬ್ಯಾಂಕಿನ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ಆದರೇ ಯಾಕೋ ಏನೋ ಈ ಬಾರಿ ಕೆಲ ಹಿರಿಯರ ಸಮ್ಮುಖದಲ್ಲಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದರೂ ಹಳೆ ಪೇನೆಲ್,  ಹೊಸ ಪೆನೆಲ್ ಎನ್ನದೇ ಎಲ್ಲರೂ ಒಂದೇ ಎನ್ನುವ ಮೂಲಕ ಹಿರಿಯರ ಮಾರ್ಗದರ್ಶನದ ಮೇಲೆ ಚುನಾವಣೆ ನಡೇಸದೇ ಅವಿರೋಧ ಆಯ್ಕೆ ಮಾಡುವ ಮೂಲಕ ಸಮಾನತೆ ಕಾಣುತ್ತಾರೆ ಎಂದು ಅಂದುಕೊಂಡು ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯತ್ವ ಸ್ಥಾನ ಕ್ಕಾಗಿ ಸಲ್ಲಿಸಿದ ನಾಮಪತ್ರವನ್ನು ಹಿಂಪಡೆದು ಹಿರಿಯರ ಕೈಯಲ್ಲಿ ಒಪ್ಪಿಸಿದ್ದೇವು. ಕೆಲ ಹಳೆ ಪೆನೆಲ್ ದವರ ಅಣತೆಯಂತಗೆ ಕೆಲ ಹಿರಿಯರ ತಲೆ ಬಾಗಿ ನಮಗೆ ಅನ್ಯಾಯ ಮಾಡಿದರು. ಕಾರಣ ಚುನಾವಣೆ ಖಣದಲ್ಲಿ ಉಳಿದು ಚುನಾವಣೆ ಎದುರಿಸುವುದು ಅನಿವಾರ್ಯವಾಗಿ. ಮುದ್ದೇಬಿಹಾಳ ತಾಲೂಕಿನ ಜನ ಅರ್ಥೈಸಿಕೊಳ್ಳಬೇಕಿದೆ ಅಧಿಕಾರದ ದಾಹ ತೀರವದರನ್ನು ಗೆಲ್ಲಿಸದೇ ನಿಜವಾಗಿ ಬ್ಯಾಂಕಿನ ಹಿತಬಯಸುವರನ್ನು ಗೆಲ್ಲಿಸಿ ಆಶಿರ್ವಧಿಸಬೇಕು ಎಂದರು. 

ಈ ವೇಳೆ ಅಭ್ಯರ್ಥಿ ವಿಜಯ ಬಡಿಗೇರ ಅವರು ಮಾತನಾಡಿ ಬ್ಯಾಂಕಿನ ಹಿಂದುಳಿದ ವರ್ಗ 2ಎ ಮೀಸಲಾತಿ ಕ್ಷೇತ್ರಕ್ಕೆ ಸ್ಪಧಿಸಿದ್ದೇ ಆದರೇ ಹಿರಿಯರ ಮಾತಿಗೆ ಗೌರವಿಸಿ ಮೌನವಹಿಸಿದ್ದೇವು ಆದರೇ ಹಳೆ ಹಾಲಿ ಪೆನೆಲ್ ದವರು ನಮಗೆ ಮೋಸ ಮಾಡಿದರು ಎಲ್ಲ ತಮ್ಮ ಬಣದವರಿಗೆ ಅನ್ಯಾಯವಾಗುತ್ತೆ ಎಂದು ಚುನಾವಣಾ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಮ್ಮ ನಾಮಪತ್ರ ತೀಸ್ಕೃತಗೊಳಿಸಲು ಪ್ರಯತ್ನಿಸಿದರು ಆಗ ಶಿವಕುಮಾರ ಭೋಜರಾಜ ಬಿರಾದಾರ ಮತ್ತು ನಾನು ನಮ್ಮ ಸ್ನೇಹಿತರು ಬಲವಾಗಿ  ಚುನಾವಣೆಯ ಅಕ್ರಮದ ಬಗ್ಗೆ ಗಂಭೀರವಾಗಿ ವಿರೋಧಿಸಿದೇವು ಇದರಿಂದ ತಪ್ಪು ಒಪ್ಪಿಕೊಂಡ ಚುನಾವಣಾ ಅಧಿಕಾರಿಗಳು ನಮ್ಮ ಬಣದ  ನಮ್ಮೇಲ್ಲರ ನಾಮಪತ್ರ ಹಾಗೆ ಉಳಿಸಿ ಚುನಾವಣೆ ಖಣದಲ್ಲಿ ಉಳಿಯುವಂತೆ ಮಾಡಿದ್ದಾರೆ.  

ಕಾರಣ ನಾನು ಚುನಾವಣಾ ಕಣದಿಂದ ಹಿಂದೆ ಸರಿದು ಹಿಂದುಳಿದ ವರ್ಗದ 2ಎ ಮೀಸಲಾತಿಯಲ್ಲಿ ಸ್ಪರ್ಧಿಸಿದ ನಮ್ಮ ಸ್ನೇಹಿತರಾದ ರವೀಂದ್ರ ಬಿರಾದಾರ ಅವರಿಗೆ ಬೆಂಬಲಿಸಿದ್ದೇನೆ ಮತದಾರರು ನಮ್ಮ ಬಣದ  ಸಾಮಾನ್ಯ ಮೀಸಲಾತಿಯಲ್ಲಿ ಸ್ಪರ್ಧಿಸಿದ ವೆಂಕನಗೌಡ ಪಾಟೀಲ, ಸಂಗಪ್ಪ ಬಸಪ್ಪ ನಾಶಿ, ಮಹಾಂತಗೌಡ ದ್ಯಾವನಗೌಡ ಪಾಟೀಲ, ಸೇರಿದಂತೆ ಎಲ್ಲರಿಗೂ ಮತ ನೀಡುವ ಮೂಲಕ ಆಶಿರ್ವಧಿಸಬೇಕು ಎಂದರು.  

ಈ ವೇಳೆ ರಾಜು ಬಳ್ಳೋಳ್ಳಿ, ಹಣಮಂತ ನಲವಡೆ, ಮಹಾಂತಗೌಡ ಕಾಶಿನಕುಂಟಿ, ಸಂಜು ಬಾಗೇವಾಡಿ,ಅಶೋಕ ರಾಠೋಡ, ಶಿವರಾಜ ರಾಠೋಡ, ಅನೀಲ ರಾಠೋಡ, ಪುನಿತ ಹಿಪ್ಪರಗಿ, ಸಂತೋಷ ಬಾದರಬಂಡಿ, ಸಂಗನಗೌಡ ಹೊಸಗೌಡರ, ಬಸನಗೌಡ ಪಾಟೀಲ ಸೇರಿದಂತೆ ಹಲವರು ಇದ್ದರು.