'ಐ ಫೋನ್ ಗಿಫ್ಟ್ ಕೊಟ್ಟಿದ್ದು ನಾನೇ'


    ನವದೆಹಲಿ:ರಾಜ್ಯರಾಜಕಾರಣದಲ್ಲಿ ಸಿಎಂ ಕುಮಾರಸ್ವಾಮಿ ಅವರ ಕಣ್ಣೀರ ವಿಷಯದ ಕುರಿತು ಚಚರ್ೆ ನಡೆಯುತ್ತಿರುವ ನಡುವೆಯೇ ಮಂಗಳವಾರ ಸಂಸದರಿಗೆ ದುಬಾರಿ ಐ ಫೋನ್ ಉಡುಗೊರೆ ಕೊಟ್ಟಿರುವುದು ಚಚರ್ೆಗೀಡಾಗಿತ್ತು. 

ಕಾವೇರಿ ಸಮಸ್ಯೆಯ ಕುರಿತು ಕರೆದಿರುವ ರಾಜ್ಯ ಸಂಸದರ ಸಭೆಯ ಆಮಂತ್ರಣದ ಜೊತೆಗೆ ದುಬಾರಿ ಬೆಲೆಯ ಐ ಫೋನ್ ಹಾಗೂ ಲೆದರ್ ಬ್ಯಾಗ್ ನೀಡಿರುವುದು ಸಂಸದ ರಾಜೀವ್ ಚಂದ್ರಶೇಖರ್ ಅವರ ಪತ್ರದ ಮುಖೇನ ಬಹಿರಂಗಗೊಂಡಿತ್ತು. 

ಐ ಫೋನ್ ಅನ್ನು ರಾಜ್ಯದ ಬಿಜೆಪಿ ಸಂಸದರು ನಿರಾಕರಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಪೌರ ಕಾಮರ್ಿಕರಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಐಶಾರಾಮಿ ಗಿಫ್ಟ್ ನೀಡಲು ರಾಜ್ಯದ ಜನರ ಹಣ ಪೋಲು ಮಾಡುತ್ತಿರುವುದು ಸರಿಯಲ್ಲ. ನಾನು ಗಿಫ್ಟ್ ವಾಪಸ್ ನೀಡುತ್ತೇನೆ ಎಂದು ರಾಜೀವ್ ಚಂದ್ರಶೇಖರ್ ಸಿಎಂ ಕುಮಾರಸ್ವಾಮಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು. 

ಏತನ್ಮಧ್ಯೆ ಐ ಫೋನ್ ಗಿಫ್ಟ್ ಕೊಟ್ಟಿರುವ ಕುರಿತು ಮುಖ್ಯಮಂತ್ರಿ ಅವರನ್ನು ಸುದ್ದಿಗಾರರು ಪ್ರಶ್ನಿಸಿದ್ದಾಗ, ನನಗೆ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ, ನಾನು ಕೊಟ್ಟಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು. 

ನಾನೇ ಕೊಟ್ಟಿದ್ದು ಎಂದ ಸಚಿವ ಡಿಕೆಶಿ: 

ಐ ಫೋನ್ ಗಿಫ್ಟ್ ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಡಿಕೆ ಶಿವಕುಮಾರ್ ಅವರು, ಐ ಫೋನ್ ಕೊಟ್ಟಿದ್ದು ನಾನೇ. ಕಳೆದ ವರ್ಷವೂ ಕೊಟ್ಟಿದ್ದೆ. ಬಿಜೆಪಿಯ ಕೆಲವು ಸಂಸದರು ತೆಗೆದುಕೊಂಡಿದ್ದರು. ಹೃದಯ ಶ್ರೀಮಂತಿಕೆಯಿಂದ ಕೊಟ್ಟಿದ್ದೇನೆ. ಅದರಲ್ಲಿ ತಪ್ಪೇನಿದೆ. ಕಾಮಾಲೆ ಕಣ್ಣಿನವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ ಎಂದು ತಿರುಗೇಟು ನೀಡಿದ್ದಾರೆ.