ಚುನಾವಣೆಯಲ್ಲಿ ನೀಡಿರುವ ಆಶ್ವಾಸನೆ ಈಡೇರಿಸಿದ್ದೇನೆ: ಶಾಸಕ ಕಾಗೆ

I have fulfilled my election promise: MLA Kage

ಚುನಾವಣೆಯಲ್ಲಿ ನೀಡಿರುವ ಆಶ್ವಾಸನೆ ಈಡೇರಿಸಿದ್ದೇನೆ: ಶಾಸಕ ಕಾಗೆ 

ಸಂಬರಗಿ 07: ಗಡಿ ಭಾಗದ ಬರಗಾಲ ಪಿಡಿತ ಗ್ರಾಮಗಳ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿಯು ಮೊದಲನೆ ಹಂತ ಪೂರ್ಣಗೋಂಡಿದ್ದು ನೀರು ಹರಿಸುವ ಪ್ರಾಯೋಗಿಕ ಪರೀಕ್ಷೆಯನ್ನು ಮಾಡಲಾಗಿದ್ದು. ನೀರು ಕಾಲುವೆಯ ಮುಖಾಂತರ ಅರಳಿಹಟ್ಟಿ ಗ್ರಾಮದವರೆಗೆ ತಲುಪಿದ್ದು ಶೀಘ್ರದಲ್ಲಿ ಎರಡನೇ ಮೋಟರ ಅಳವಡಿಸಲಾಗುವುದು ಸರಕಾರಕ್ಕೆ 300 ಕೋಟಿ ರೂಗಳ ಅನುದಾನದ ಬೇಡಿಕೆ ಇದ್ದು ಇದಕ್ಕೆ ಸರಕಾರ ಸ್ಪಂದಿಸಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೆಳಿದರು. 

            ಖಿಳೇಗಾಂವ ಗ್ರಾಮದಲ್ಲಿ ಶೀನಂದಿ ಪ್ಯಾರಾಡಾಯಿಸ್ ಹೋಟೆಲ ಉದ್ಘಾಟನೆ ಮಾಡಿದ ನಂತರ ಸುದ್ದಿಗಾರರೋಂದಿಗೆ ಮಾತನಾಡಿದ ಅವರು ಚುನಾವಣೆಯಲ್ಲಿ ನೀಡಿರುವ ಆಶ್ವಾಸನೆ ಪ್ರಕಾರ ನಾನು ನೀರು ಹರಿಸಿದ್ದೇನೆ ಇನ್ನುಳಿದ ಕಾಮಗಾರಿಯನ್ನು ಪೂರ್ಣಗೋಳಿಸಿ ಗಡಿ ಭಾಗದಲ್ಲಿರುವ ಬರಗಾಲ ಪೀಡಿತ ಗ್ರಾಮಗಳನ್ನು ಹಸಿರು ಕ್ರಾಂತಿಯನ್ನಾಗಿ ಮಾಡಿ ತಿರುತ್ತೇನೆ ಜನರ ಸಮಸ್ಯ ಬಗೆಹರಿಸಲು ಸದಾ ನಾನು ಸಿದ್ದವಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. 

ವಿದ್ಯುತ್ ಸಮಸ್ಯಯ ಕುರಿತು ಮಾತನಾಡಿದ ಅವರು ವಿದ್ಯಾರ್ಥಿಗಳ ಶಾಲಾ ಪರೀಕ್ಷೇ ಬಂದಿದ್ದು ಹಾಗೂ ಕಳ್ಳತನ ಪ್ರಕರಣಗಳು ಆಗುತ್ತಿದ್ದು ಆ ಕಾರಣದಿಂದ ರಾತ್ರಿ ಅವಧಿಯಲ್ಲಿ ವಿದ್ಯುತ್ ಕಡಿತಗೋಳಿಸಬಾರದು ಎಂದು ಹೇಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನಿಡುತ್ತೇನೆ ಎಂದು ಹೇಳಿದರು 

 ವಿವೇಕ ನಿಂಬಾಳ, ಅಭಿಯಂತರು ವಿಶಾಲ ನಿಂಬಾಳ, ಅಬಕಾರಿ ಸಚಿವರ ಆಪ್ತ ಕಾರ್ಯದರ್ಶಿ ಮಲ್ಲು ಕುದರಿ, ರ್ಘಋಅಂ ಪಂ ಮಚಾಯತ ಅದ್ಯಕ್ಷ ಮಹಾದೆವ ಕೋರೇ, ವಿನಾಯಕ ಬಾಗಡಿ, ಪುರಸಭೆ ಮಾಜಿ ಅದ್ಯಕ್ಷ ರಾವಸಾಹೆಬ ಐಹೊಳೆ, ಉದ್ಯಮಿ ರವಿ ಪುಜಾರಿ, ಪಿಕೆಪಿಎಸ ಅಧ್ಯಕ್ಷ ನಿಜು ಮಗದುಂ, ಪಿಕೆಪಿಎಸ್ ಅಧ್ಯಕ್ಷ ವಿಲಾಸ ಟೋಣೆ, ಪಿಕೆಪಿಎಸ ಉಪಾಧ್ಯಕ್ಷ ಅನ್ನಾಸಾಹೆಬ ಮಿಸಾಳ, ಗುಳಪ್ಪ ಜತ್ತಿ, ಪಿಕೆಪಿಎಸ್ ಅಧ್ಯಕ್ಷ ಶಿವಾನಂದ ಗೊಲಬಾಂವಿ, ಮಲ್ಲಿಕಾರ್ಜುನ ದಳವಾಯಿ, ಓಂ ಪ್ರಕಾಶ ಡೋಳ್ಳಿ, ಮಹಾದೇವ ಜನವಾಡ, ತುಕಾರಾಮ ಶೇಳಕೆ, ಅಬ್ದುಲ್ ಮುಲ್ಲಾ, ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.