ಆಕಳ ಕೆಚ್ಚಲು ಕತ್ತರಿಸಿದ ಅಮಾನವೀಯ ಘಟನೆಯನ್ನು ನಾನು ಖಂಡಿಸುತ್ತೇನೆ: ನಾಡಗೌಡ

I condemn the inhuman incident of cutting her udder: Nad Gowda

ಆಕಳ ಕೆಚ್ಚಲು ಕತ್ತರಿಸಿದ ಅಮಾನವೀಯ ಘಟನೆಯನ್ನು ನಾನು ಖಂಡಿಸುತ್ತೇನೆ: ನಾಡಗೌಡ 

ಮುದ್ದೇಬಿಹಾಳ: ಎಲ್ಲೋ ಆದ ಘಟನೆಗೆ ಸಂಬಂಧಿಸಿದಂತೆ ಮಾಜಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ಸೋಲಿನಿಂದ ಹತಾಶರಾಗಿ ತಮ್ಮ ಛೇಲಾಗಳನ್ನು ಬಿಟ್ಟು ಯಾವೂದೇ ಮುನ್ಸೂಚನೆ ನೀಡದೇ ನನ್ನ ಮನೆಗೆ ನುಗ್ಗಿ ಸೆಗಣಿ ಎರಚಿ ಕೋಮು ಭಾವನೆ ಸೃಷ್ಠಿಸಿ ಏಕಾಏಕಿ ಪ್ರತಿಭಟನೆ ನಡೆಸುತ್ತಿರುವುದು ಇದೊಂದು ಶಾಂತಿ ಭಂಗ ಪ್ರಯತ್ನವಾಗಿದೆ. ಮಾತ್ರವಲ್ಲದೇ ಜನರ ನೆಮ್ಮದಿಗೆ ಧಕ್ಕೆ ತರುವ ಉದ್ದೇಶವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ವಾಗ್ದಾಳಿ ನಡೆಸಿದರು. 

ಪಟ್ಟಣದ ಹುಡ್ಕೋ ಬಡಾವಣೆಯಲ್ಲಿನ ತಮ್ಮ ಗ್ರಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 35,40 ವರ್ಷಗಳ ನನ್ನ ರಾಜಕೀಯ್ಲ ಇತಿಹಾಸದಲ್ಲಿ ಮಾಜಿ ಶಾಸಕ ಎಂ ಎಂ ಸಜ್ಜನವರಾಗಲಿ, ಮಾಜಿ ಸಚಿವೆ ವಿಮಲಾಬಾಯಿ ದೇಶಮುಖರಾಗಲಿ, ಸಹೋದರಿ ಮಂಗಳಾದೇವಿ ಬಿರಾದಾರ ಸೇರಿದಂತೆ ಅನೇಕ ಅಗ್ರಗಣ್ಯ ನಾಯಕರು ರಾಜಕೀಯ ನಡೆಸಿದ್ದಾರೆ ಆದರೇ ಅವರಾ​‍್ಯರು ಶಾಸಕರ ಮನೆಗೆ ತೆರಳಿ ಈ ತರಹದ ಕ್ಷುಲ್ಲಕ ಹೋರಾಟದ ಮುಖವಾಡ ಬಳಸಿ ಅಹಿತಕರ ಕೋಮು ಪ್ರಚೋದಿತ ಘಟನೆಗಳು ನಡೆಸಿಲ್ಲ. ಅನ್ಯಾಯವಾದಾಗ ಅವರೆಲ್ಲರೂ ತಹಶೀಲ್ದಾರರಿಗೆ, ಜಿಲ್ಲಾಧಿಕಾರಿಗಳಿಗೆ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಹೋರಾಟ ನಡೆಸುತ್ತಿದ್ದರೂ. ಆದರೇ ಇತ್ತಿಚಿಗೆ ಮತಕ್ಷೇತ್ರದಲ್ಲಿ ರೈತರ, ಧರ್ಮದ ಹೆಸರಲ್ಲಿ ಈ ರೀತಿ ಶಾಸಕರ ಮನೆ ಮುತ್ತಿಗೆ ಹಾಕುವ ಮೂಲಕ ಪ್ರಚೋದಿತ ಹೋರಾಟ ನಡೆಸುತ್ತಿರುವುದನ್ನು ಜನರು ಗಮನಿಸುತ್ತಿದ್ದಾರೆ. 

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಆಕಳ ಕೆಚ್ಚಲು ಕತ್ತರಿಸಿ ಅಮಾನವಿಯವಾಗಿ ಘಟನೆ ಇದನ್ನು ನಾನೂಕೂಡ ಬಲವಾಗಿ ಖಂಡಿಸುತ್ತೇನೆ ನಮ್ಮ ಮತಕ್ಷೇತ್ರದಲ್ಲಾಗಿದ್ದರೇ ಸ್ವತಃ ನಾನೇ ಅಂತಹ ಕೃತ್ಯ ಎಸಗಿದವರಿಗೆ ಉಗ್ರ ಶಿಕ್ಷೆ ಕೊಡಿಸುತ್ತಿದ್ದೇ. ಜತೆಗೆ ನಾನೂ ಕೂಡ ಒಬ್ಬ ಒಳ್ಳೆಯ ಸುಸಂಸ್ಕೃತ ಮನೆತನದಲ್ಲಿ ಹುಟ್ಟಿ ಬೆಳೆದು ಬಂದವನು, ನಿತ್ಯ ಬೆಳಿಗ್ಗೆ ಸ್ನಾನ ಮಾಡಿದ ನಂತರ ಹಣೆಗೆ ಗೋವಿನಿಂದ ತಯಾರಿಸಿದ ವಿಭೂತಿ ಧರಿಸಿ ಲಿಂಗ ಪೂಜೆ ಯೊಂದಿಗೆ ದೇವರನ್ನು, ಶರಣರನ್ನು ಪೂಜೆ ನಂತರವೇ ನಾನು ಊಟ ಮಾಡುತ್ತೇನೆ. ಹಾಗಾಗಿಯೇ ದೇವರಿಗೆ ಮಾತ್ರ ಹೆದರುತ್ತೇನೆ ವಿನ ಃ ಇಂತಹ ಕೃತ್ಯ ಮಾಡಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ವ್ಯಕ್ತಿಗಳಿಗೆ ಹೆದರುವ ಪ್ರಶ್ನೇಯೇ ಇಲ್ಲ.  

ಈ ಘಟನೆ ಕುರಿತು ನಮ್ಮ ಮುಖ್ಯಮಂತ್ರಿ ಸಿದ್ರಾಮಯ್ಯನವರು ಉತ್ತರ ಕೊಟ್ಟಿದ್ದಾರೆ. ಹಾಗೊಂದು ವೇಳೆ ಮನವಿ ಕೊಡಬೇಕಿದ್ದರೇ ಪೋಲಿಸ್ ಪರವಾನಿಗೆ ಪಡೆದು ಹೋರಾಟ ಮಾಡಲಿ ದೇಶದಲ್ಲಿ ಪ್ರತಿಯೊಬ್ಬರಿಗೂ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಹಕ್ಕು ಇದೇ ಆದರೇ ಅದುಬಿಟ್ಟು ದಾರಿ ತಪ್ಪಿಸುವ ಹಾಗೂ ಜನರ ನೆಮ್ಮದಿಗೆ ಭಂಗ ತರುವ ಹೋರಾಟಗಳು ಕೈಗೊಳ್ಳುವುದು ಸರಿಯಲ್ಲ. ಸಧ್ಯ ಹೋರಾಟ ನಡೆಸಿದ್ದು ಯಾರೂ ಕೂಡ ಮೂಲ ಬಿಜೆಪಿಯವರಲ್ಲ ಅವರೆಲ್ಲ ನಡಹಳ್ಳಿಯವರ ಛೇಲಾಗಳು ಎಂದು ಹರಿಹಾಯ್ದರು. 

ಈ ಹಿಂದೆ ಮತಕ್ಷೇತ್ರದ ಶಾಸಕರಾಗಿದ್ದ ಸಂದರ್ಭದಲ್ಲಿ ಅಂದಿನ ಸಿಪಿಐ, ಪಿಎಸೈ ಪೋಲಿಸ್ ಅಧಿಕಾರಿಗಳನ್ನು ತಮ್ಮ ಒತ್ತೆಯಾಳುಗಳಂತೆ ಮಾಡಿಕೊಂಡು ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಲು ಹೋದವರ ಮೇಲೆ ವಿನಾಕಾರಣ ಇಲ್ಲಸಲ್ಲದ ಕೇಸುಗಳನ್ನು ಹಾಕಿ ತಿಂಗಳುಗಟ್ಟಲೆ ಜೈಲಲ್ಲಿ ಕೊಳೆಯುವಂತೆ ಮಾಡಿದ್ದಿರಿ ಹೀಗೇ ಅನೇಕ ನಿಮ್ಮ ನಡೆಯ ತಿರಸ್ಕರಿಸಿ ನಿಮ್ಮನು ಮನೆಯಲ್ಲಿಯೇ ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಆದರೂ ನಿಮ್ಮ ಬುದ್ಧಿ ಬದಲಾಗಲಿಲ್ಲ. ಹೀಗೇ ಮುಂದುವರೆದರೇ ಜನರೇ ತಕ್ಕ ಶಿಕ್ಷೆ ಕೊಡುತ್ತಾರೆ ಮುಂದೆ ರಾಜಕೀಯ ಏನಾಗುತ್ತದೆಯೋ ಏನು ಗೊತ್ತಿಲ್ಲ ಎಚ್ಚೆತ್ತುಕೊಂಡು ಮುಂದುವರೆಯಲಿ ಎಂದು ಎಚ್ಚರಿಕೆ ನೀಡಿದರು. 

ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಕಾಂಗ್ರೇಸ್ ಮುಖಂಡ ಸಿ ಬಿ ಅಸ್ಕಿ, ಕಸಾಪ ಅಧ್ಯಕ್ಷ  ಕಾಮರಾಜ ಬಿರಾದಾರ, ಶ್ರೀಶೈಲ ಮರೋಲ, ಶ್ರೀಕಾಂತ ಚಲವಾದಿ, ವಾಯ್ ಎಚ್ ವಿಜಯಕರ, ಸಿ ಜಿ ವ ಇ ಜಯಕರ, ಎಸ್ ಎಸ್ ಮಾಲಗತ್ತಿ, ಸತೀಶ ಓಸ್ವಾಲ್, ಸಂಗನಗೌಡ ಬಿರಾದಾರ(ಜಿಟಿಸಿ), ಬಾಪುರಾಯ ದೇಸಾಯಿ, ಸೇರಿದಂತೆ ಹಲವರು ಇದ್ದರು.