ರೈಲು ಮಾರ್ಗ ಹೋರಾಟ ಸಮಿತಿಯಿಂದ ಶಾಸಕ ನಾಡಗೌಡರಿಗೆ ಮನವಿ ಹೋರಾಟದಲ್ಲಿ ನಾನೂ ನಿಮ್ಮ ಜೊತೆಯಾಗಿದ್ದೇನೆ
ತಾಳಿಕೋಟಿ 24 : ಆಲಮಟ್ಟಿ- ಯಾದಗಿರಿ ರೈಲು ಮಾರ್ಗ ನಿರ್ಮಾಣ ಅನುಷ್ಠಾನಕ್ಕಾಗಿ ನೀವು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡ ಹೇಳಿದರು. ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಲಮಟ್ಟಿ ಯಾದಗಿರಿ ರೈಲು ಮಾರ್ಗ ನಿರ್ಮಾಣ ಹೋರಾಟ ಸಮಿತಿಯ ಪದಾಧಿಕಾರಿಗಳು ನೀಡಿದ ಮನವಿಯನ್ನು ಸ್ವೀಕರಿಸಿ ಅವರು ಮಾತನಾಡಿ ಈ ಸಮಸ್ಯೆ ಕುರಿತು ನಾನು ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆಯನ್ನು ಕೇಳಿ ಸದನದ ಗಮನ ಸೆಳೆಯಲು ಪ್ರಯತ್ನಿಸಿದೆ ಆದರೆ ಕರ್ಣಂತ್ರೆಗಳಿಂದ ಈ ಪ್ರಶ್ನೆಯ ಮೇಲೆ ಚರ್ಚೆ ನಡೆಯಲಿಲ್ಲ ಆದರೆ ನನಗೆ ಲಿಖಿತ ಉತ್ತರವನ್ನು ನೀಡಲಾಗಿದೆ ಇದರಲ್ಲಿ ಕೆಲವು ತಾಂತ್ರಿಕ ತೊಂದರೆಗಳು ಇವೆ ಇದರ ಕುರಿತೂ ನಾನು ತಜ್ಞ,ಅನುಭವಿಗಳೊಂದಿಗೆ ಮಾತನಾಡಿದ್ದೇನೆ,ಈ ನಿಮ್ಮ ಬೇಡಿಕೆ ಭಾರತ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಕೇಂದ್ರದ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರೊಂದಿಗೆ ಮಾತನಾಡಬೇಕಾಗುತ್ತದೆ ನೀವೊಂದು ನಿಯೋಗ ತೆಗೆದುಕೊಂಡು ಬನ್ನಿ ನಾನು ನಿಮ್ಮ ಜೊತೆಗಿದ್ದು ನಿಮಗೆ ಸಹಕರಿಸುತ್ತೇನೆ ಎಂದರು. ಹೋರಾಟ ಸಮಿತಿಯ ಸದಸ್ಯ ಶ್ರೀಕಾಂತ್ ಪತ್ತಾರ ಅವರು ಪ್ರಸ್ತಾವಿಕವಾಗಿ ಮಾತನಾಡಿ ಈ ನಮ್ಮ ಬೇಡಿಕೆ ಸುಮಾರು 9 ದಶಕಗಳ ಬೇಡಿಕೆಯಾಗಿದೆ ಎಂದು ತಿಳಿಸಿ ರೈಲು ಮಾರ್ಗದ ಹೋರಾಟದ ಕುರಿತು ಇಲ್ಲಿವರೆಗಿನ ಬೆಳವಣಿಗೆ ಕುರಿತು ವಿವರಿಸಿದರು.ಈ ಸಮಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ (ಯಾಳಗಿ), ಸಿದ್ದನಗೌಡ ಪಾಟೀಲ ನಾವದಗಿ, ಪುರಸಭೆ ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ,ಪರಶುರಾಮ ತಂಗಡಗಿ,ಗಣ್ಯರಾದ ಪ್ರಭುಗೌಡ ಮದರಕಲ್ಲ, ವಿಜಯಸಿಂಗ್ ಹಜೇರಿ,ಎಂ.ಎಸ್.ಸರಸಟ್ಟಿ,ಎಂ.ಕೆ.ಚೋರಗಸ್ತಿ,ಸಂಗನಗೌಡ ಅಸ್ಕಿ,ಜಾಲವಾದಿ ಸರ್,ಘನಶ್ಯಾಮ ಚೌವಾಣ್,ಕಾಸೀಮಪಟೇಲ ಪಾಟೀಲ,ಸಂಗಮೇಶ ದೇಸಾಯಿ,ನೀಲಮ್ಮ ಪಾಟೀಲ,ಸಿಕಂದರ ಡೋಣಿ, ಫಯಾಜ್ ಉತ್ನಾಳ,ಇಲಿಯಾಸ್ ಬೋರಾಮಣಿ, ಸದ್ದಾಂ ಕುಂಟೋಜಿ, ಗೋಪಾಲ ಕಟ್ಟಿಮನಿ,ಆಸೀಫ್ ಕೆಂಭಾವಿ ಮತ್ತಿತರರು ಇದ್ದರು.