ಉರ್ದು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನಾಧ್ಯಕ್ಷರಾಗಿ ಹುಜೂರ್ ನಾಯಕ್ ಆಯ್ಕೆ

ಲೋಕದರ್ಶನ ವರದಿ

ಕೊಪ್ಪಳ 27: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಹಾಗೂ ಹೈ.ಕ. ನಾಗರಿಕರ ವೇದಿಕೆ ವತಿಯಿಂದ ಜಿಲ್ಲಾ ಉತ್ಸವದ ಸಂದರ್ಭದಲ್ಲಿ 3ನೇ ಬಾರಿಗೆ ಅಗಷ್ಟ 24ರ ಸಂಜೆಗೆ 05:30ಕ್ಕೆ ನಗರದ ಸಾಹಿತ್ಯ ಭವನದಲ್ಲಿ ಜರುಗಲಿರುವ ಉದರ್ು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಇಲ್ಲಿನ ಸಮಾಜ ಸೇವಕ ಹುಜೂರ್ ಅಹ್ಮದ್ ನಾಯಕ್ರವರು ಆಯ್ಕೆಯಾಗಿದ್ದಾರೆ.

ಹುಜೂರ್ ಅಹ್ಮದ್ ನಾಯಕ್ರವರು ಬಿ.ಇ. ತಾಂತ್ರಿಕ ಪಧವಿದರರಾಗಿದ್ದು, ಉರ್ದು  ಮತ್ತು ಕನ್ನಡ ಭಾಷೆ ಚೆನ್ನಾಗಿ ಬಲ್ಲವರಾಗಿದ್ದು, ತಮ್ಮನ್ನು ತಾವು ಸಕ್ರೀಯವಾಗಿ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಸಾಮನ್ಯ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ ಇವರು ಸಮಾಜದ ಯುವ ಸಂಘಟನೆ ಬೇಳೆಸಿ ಅವರನ್ನೊಳಗೊಂಡತೆ ಸಕ್ರೀಯವಾಗಿ ಸೇವಾ ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ.

ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಹಾಗೂ ಹೈ.ಕ. ವೇದಿಕೆ ವತಿಯಿಂದ ಹೈ.ಕ. ಪ್ರದೇಶದ ಈ ಭಾಗದಲ್ಲಿ ಉದರ್ು ಕನ್ನಡಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಕಳೆದ 2 ವರ್ಷಗಳಿಂದ ಯಶಸ್ವಿಯಾಗಿ ಉದರ್ು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ನೆಡೆಸಲಾಗಿದ್ದು, ಈ ಸಲ 3ನೇ ಬಾರಿಗೆ ಸದರಿ ಸಮ್ಮೇಳನದ ಸವರ್ಾಧ್ಯಕ್ಷರಾಗಿ ಆಯ್ಕೆಯಾಗಿರುವ ಹುಜೂರ್ ಅಹ್ಮದ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಸಮ್ಮೇಳನ, ವಿಚಾರ ಗೋಷ್ಠಿ ಹಾಗೂ ಬಹುಭಾಷಾ ಕವಿಗೋಷ್ಠಿ ನಡೆಸಲಾಗುವುದು ಎಂದು ಕಾರ್ಯಕ್ರಮ ಸಂಘಟಕ ವೇದಿಕೆ ಅಧ್ಯಕ್ಷ ಮಹೇಶಬಾಬು ಸುವರ್ೆ ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸಮ್ಮೇಳನಕ್ಕೆ ಸ್ವಾಗತಿಸಿದ್ದಾರೆ.