ಹಾಸ್ಯ ಬದುಕಿನ ಅವಿಭಾಜ್ಯ ಅಂಗ

Humor is an integral part of life

 ಹಾಸ್ಯ ಬದುಕಿನ ಅವಿಭಾಜ್ಯ ಅಂಗ 

ವಿಜಯಪುರ 9: ರೋಟರಿ ಪ್ರೊಬಸ್ ಕ್ಲಬ್ (ಉತ್ತರ) ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ‘ಹಾಸ್ಯ ಸಂಜೆ’ ಕಾರ‌್ಯಕ್ರಮದಲ್ಲಿ ಭಾಗವಹಿಸಿ ಹಾಸ್ಯವು ಹಿರಿಯ ನಾಗರಿಕರಿಗೆ, ರೋಗಿಗಳಿಗೆ, ಅಶಕ್ತರಿಗೆ, ದುರ್ಬಲರಿಗೆ ಹಾಸ್ಯದ ಹೊನಲು ಹರಿಸಿರುವದರಿಂದ ಅವರು ಎಲ್ಲ ಸಮಸ್ಯೆಗಳಿಂದ ಮುಕ್ತರಾಗಿ ಸಶಕ್ತ ವಾತಾವರಣ ನಿರ್ಮಾಣ ಮಾಡಲು ಸಾಧ್ಯ ಎಂದು ಹಾಸ್ಯ ಕಲಾವಿದ ಪ್ರಶಾಂತ ಚೌಧರಿಯವರು ಹಾಸ್ಯ ಚಟಾಕಿಯ ಮೂಲಕ ಹಿರಿಯ ನಾಗರಿಕರನ್ನು ನಗೆಗಡಲಲ್ಲಿ ತೇಲಿಸಿದರು.  

ಅಖಿಲಭಾರತ ವೀರಶೈವ ಲಿಂಗಾಯತ ಸಭಾಭವನದಲ್ಲಿ ಹಮ್ಮಿಕೊಂಡ ಕಾರ‌್ಯಕ್ರಮದಲ್ಲಿ ಮಿಮಿಕ್ರಿ, ಭಾಷೆ ತೊಂದರೆ, ಪಕ್ಷಿ ಪ್ರಾಣಿಗಳ ಧ್ವನಿಗಳ ಮೂಲಕ ಹಾಸ್ಯ ಸಂಜೆ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಶ್ರೀಮತಿ ಶಾರದಾ ಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಮಹಾದೇವ ಹಾಲಳ್ಳಿ ಕಾರ‌್ಯಕ್ರಮ ನಿರೂಪಿಸಿದರು. ಸುಭಾಸ ಬೇಟಗೇರಿ ಪರಿಚಯಿಸಿದರು. ಸುವರ್ಣಾ ತೇಲಿ ವಂದಿಸಿದರು.  ಸಹದೇವ ನಾಡಗೌಡ, ವಿ.ಡಿ.ಐಹೊಳ್ಳಿ, ಎಂ.ಆಯ್‌.ಬಿರಾದಾರ, ವಿಠ್ಠಲ ತೇಲಿ, ಹೊಸುರು ಮೇಡಂ, ಶೈಲಜಾ ಮೋದಿ ನೂತನ ಬ್ಯಾಕೋಡ ಮುಂತಾದವರು ಉಪಸ್ಥಿತರಿದ್ದರು.