ಅಮಾನತು ಹಿಂಪಡೆಯಲು ಒತ್ತಾಯಿಸಿ ಕಾಂಗ್ರೆಸ್ ಒಕ್ಕೂಟದಿಂದ ಮಾನವಿ

ಕಂಪ್ಲಿ 23:ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಅವರ ವಿರುದ್ಧದ ಮೊಕದಮ್ಮೆ ಹಾಗೂ ಕೆಪಿಸಿಸಿಯಿಂದ ಮಾಡಿರುವ ಅಮಾನತನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿ, ಜೆ.ಎನ್.ಗಣೇಶ್ ಅಭಿಮಾನಿಗಳ ಬಳಗ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರ ಒಕ್ಕೂಟದಿಂದ ತಾಲ್ಲೂಕಿನ ಅತಿಥಿ ಗೃಹದ ಆವರಣದಲ್ಲಿ ಬುಧವಾರ ಮನವಿ ಮಾಡಲಾಯಿತು. 

ಯುವ ಮುಖಂಡ ಹೊಸಕೋಟೆ ಜಗದೀಶ್ ಮಾತನಾಡಿ, ಜೆ.ಎನ್.ಗಣೇಶ್ ಮತ್ತು ಆನಂದಸಿಂಗ್ ಶಾಸಕರಿಬ್ಬರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ, ಇತ್ತೀಚೆಗೆ ಯಾವುದೇ ವಿಷಯವಾಗಿ ಗಲಾಟೆ ನಡೆದಿದೆ. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದಶರ್ಿ ವಿ.ವೈ.ಘೋರ್ಪಡೆ, ಶಾಸಕ ಜೆ.ಎನ್.ಗಣೇಶ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಕಾರ್ಯಕರ್ತರಲ್ಲಿ ಬೇಸರ ಉಂಟಾಗಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗೆ ಅಡಚಣೆ ಮಾಡಿದಂತಾಗಿದೆ. ಕಾಂಗ್ರೆಸ್ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ ಶಾಸಕ ಆನಂದಸಿಂಗ್ ಮತ್ತು ಶಾಸಕ ಜೆ.ಎನ್.ಗಣೇಶ್ ಅವರನ್ನು ಒಂದುಗೂಡಿಸಬೇಕಾಗಿದೆ. ಇಬ್ಬರು ಶಾಸಕರನ್ನು ಒಗ್ಗೂಡಿಸಿ, ಮೊದಲಿನಂತೆ ಪಕ್ಷದವನ್ನು ಕಟ್ಟೋಣ. ಶಾಸಕ ಗಣೇಶ್ ಅವರು ಮಾಡಿದ ತಪ್ಪನ್ನು ಮನ್ನಿಸಿ, ಪರಿಶೀಲಿಸಿ, ಗಣೇಶ್ ವಿರುದ್ಧ ಕ್ರಮಗೊಂಡ ಅಮಾನತನ್ನು ಕೂಡಲೇ ಕಾಂಗ್ರೆಸ್ ಪಕ್ಷವು ಹಿಂಪಡೆಯಬೇಕು. ಅವರ ವಿರುದ್ಧದ ಮೊಕದಮ್ಮೆಯನ್ನು ವಾಪಸ್ಸು ಪಡೆಯಬೇಕು. ನಾಳೆ ಬೆಂಗಳೂರಲ್ಲಿ ಮೈತ್ರಿ ಸಕರ್ಾರದ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕೆಪಿಸಿಸಿಗೆ ಮನವಿ ಮಾಡಲಾಗುವುದು ಎಂದರು.  

ಈ ಸಂದರ್ಭದಲ್ಲಿ ಜೆ.ಎನ್.ಗಣೇಶ್ ಅಭಿಮಾನಿಗಳ ಬಳಗದ ಬಿ.ಹರ್ಷವರ್ಧನ, ಬೂದಗುಂಪಿ ಹುಸೇನ್ಸಾಬ್, ಎನ್.ವಾಸು, ರಾಮಲಿಸ್ವಾಮಿ, ವೀರಾಂಜಿನೀಯಲು, ಆನಂದ, ಮಾವಿನಹಳ್ಳಿ ರಮೇಶ್, ಹರೀಶಗೌಡ, ಪುರುಷೋತ್ತಮಗೌಡ, ಕನಕಗಿರಿ ರೇಣುಕಗೌಡ, ಎಂ.ಮಾರುತಿ, ಮೆಟ್ರಿ ಗಿರೀಶ್, ಯರ್ರಿಸ್ವಾಮಿ, ಜಗದೀಶ್ ಸೇರಿದಂತೆ ಅನೇಕರಿದ್ದರು.