ಮಾನವೀಯ ಮೌಲ್ಯ ಮಾರಾಟದ ವಸ್ತು ಅಲ್ಲ: ಚಲವಾದಿ

ಲೋಕದರ್ಶನ ವರದಿ

ತಾಳಿಕೋಟೆ 07: ಗುರು ಎಂಬವನ ಶಕ್ತಿ, ಶಾಪ ಬಹಳೇ ದೊಡ್ಡದಿರುತ್ತದೆ ಅದನ್ನರೀತು ಅಧಿಕಾರಿ ವರ್ಗದವರು ನಡೆಯಬೇಕೆಂದು ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ ನುಡಿದರು.

ಸ್ಥಳೀಯ ಎಸ್.ಕೆ.ಪ್ರೌಢ ಶಾಲೆಯ ಸಭಾ ಭವನದಲ್ಲಿ ತಾಲೂಕಾ ದೈಹಿಕ ಶಿಕ್ಷಕರ ಸಂಘ ಏರ್ಪಡಿಸಿದ ಸನ್ಮಾನ ಸಮಾರಂಭವನ್ನು ಸ್ವಿಕರಿಸಿ ಮಾತನಾಡಿ ಮಾನವ ಜನ್ಮ ಬರುವಾಗ ಬೆತ್ತಲೇ ಹೋಗುವಾಗ ಬೆತ್ತಲೇ ಆದರೂ ಈ ಎರಡರ ನಡುವಿನ ಜೀವನದಲ್ಲಿ ನೆನಸುವಂತಹ ಮನಸ್ಸು ಹೊಂದುವದು ಅಗತ್ಯವಾಗಿದೆ ಎಂದರು. ಕಾಯಕ ನಿಷ್ಠೆಯೊಂದಿಗೆ ಧರ್ಮದ ಕಾಯಕ ಮಾಡಿದರೆ ಅದನ್ನು ಸ್ಮರಿಸುವಂತಿರಬೇಕು ಅದು ನೆಲೆಯಾಗಿ ನಿಂತ ಮೇಲೆ ಬದುಕಿನಲ್ಲಿ ಸಿಗುವಂತಹ ಸುಖ ಎಂದೂ ಸಿಗಲಾರದೆಂದರು. ಕಳೆದ ಎರಡು ವರ್ಷಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರೀತಿ ಪ್ರೇಮದೊಂದಿಗೆ ಸೇವಾ ಕಾರ್ಯ ಮಾಡಿದ್ದಾರೆ. ಎರಡು ವರ್ಷಗಳಿಂದ ಸೇವೆಯಲ್ಲಿ ನೀಡಿದ ಸಹಕಾರ ನೆನೆಸುವಂತಹದ್ದಾಗಿದೆ ಎಂದರು. ಯಾವುದೇ ಫಲಾಪೇಕ್ಷವಿಲ್ಲದೇ ಕ್ಷೇತ್ರ ಶಿಕ್ಷಣಾಧಿಕಾರಿ ನೀಡಿದ ಸೇವೆ ಗೌರವಿತವಾಗಿದೆ ಪ್ರೀತಿ ಮಮತೆ ಸುಂದರವಾದ ಮಾತುಗಳೇ ಚಿನ್ನ ರತ್ನಕ್ಕಿಂತ ಮಿಗಿಲಾಗಿವೆ ಎಂದರು. ತಾಲೂಕಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಆರ್.ಎಲ್.ಕೊಪ್ಪದ ಸಹ ತಮ್ಮೊಂದಿಗೆ ಇದ್ದ ಪ್ರೀತಿ ಪ್ರೇಮದ ಒಡನಾಟ ಕುರಿತು ವಿವರಿಸಿದ ಅಧಿಕಾರಿ ಚಲವಾದಿ ಪ್ರೀತಿ ದಾರಿ ಎರೆದವರಿಗೆ ಪ್ರೀತಿ ಕೊಡಿ, ವಿಷವೆಂಬ ಪ್ರೀತಿ ಕೊಡುವದು ಬೇಡಾ ಪ್ರೀತಿ ವಿಸ್ವಾಸವಿದ್ದರೆ ಬಧುಕು ಬಹಳೇ ಸುಂಧರವಾಗಿ ಕಾಣುತ್ತದೆ ಎಂದರು.

ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಸನ್ಮಾನ ಸ್ವಿಕರಿಸಿ ಮಾತನಾಡಿ ಹಸಿದವರಿಗೆ ಅನ್ನ ನೀಡುವವರು ಹಣ ಇಲ್ಲದವರಿಗೆ ಹಣ ನೀಡುವವರು ಮಾನವೀಯತೆಗೆ ಪಾತ್ರರಾಗುತ್ತಾರೆ ಅದರಂತೆ ಬಧುಕಿನಲ್ಲಿಯ ನೋವುಗಳನ್ನು ದೂರಿಕರಿಸಿ ದೈರ್ಯ ತುಂಬಿದವರು ನಿವೃತ್ತ ಅಧಿಕಾರಿ ಚಲವಾದಿ ಆಗಿದ್ದಾರೆಂದರು. ಅಧ್ಯಕ್ಷರಾದ ಆರ್.ಎಲ್.ಕೊಪ್ಪದ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಫಳಗಿದ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಚಲವಾದಿ ರಾವುತ್ ಪೂಜಾರಿ, ಅಧ್ಯಕ್ಷತೆ ವಹಿಸಿ ಎಸ್.ಕೆ.ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಎಸ್.ಡಿ.ಕರ್ಜಗಿ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ ಸೇವಾ ಕಾರ್ಯಗಳ ಕುರಿತು ಗುಣಗಾನ ಮಾಡಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ ಧರ್ಮ ಪತ್ನಿ ಗೀತಾಬಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಕೆ.ಬಾಲಕೀಯರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಸ್.ಬಿರಾದಾರ, ಸಂಘದ ಗೌರವಾಧ್ಯಕ್ಷ ಬಿ.ಬಿ.ಬಿರಾದಾರ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ.ಹೊಳಿ, ಬಿ.ಟಿ.ವಜ್ಜಲ, ಎಸ್.ಎಸ್.ಪಾಟೀಲ, ಸಿ.ಜೆ.ಗೌಡರ, ಎಂ.ಬಿ.ಕುಲಕಣರ್ಿ, ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ, ಎಸ್.ಎಸ್.ಕೊಂಡಗೂಳಿ, ಆಯ್.ಎಸ್.ಸಜ್ಜನ, ಹಾಗೂ ನಿವೃತ್ತ ಪಿ.ಎಸ್.ಆಯ್.ಸುದಾಕರ, ವಿವಿಧಡೆಯಿಂದ ಆಗಮಿಸಿದ ದೈಹಿಕ ಶಿಕ್ಷಕರು, ಶಿಕ್ಷಕಿಯರು ಉಪಸ್ಥಿತರಿದ್ದರು. ಶಿಕ್ಷಕ ನಾಟೀಕಾರ ಸ್ವಾಗತಿಸಿದರು. ಶಿಕ್ಷಕ ಆನಂದ ತಳವಾರ ನಿರೂಪಿಸಿ ವಂದಿಸಿದರು.