ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗದ ಸದಸ್ಯ ಎಸ್.ಕೆ.ವಂಟಿಗೋಡಿ ಜಿಲ್ಲಾಸ್ಪತ್ರೆಗೆ ಭೇಟಿ- ಪರೀಶೀಲನೆ
ವಿಜಯಪುರ: ನ್ಯಾಯಾಂಗ ಸದಸ್ಯರು ಕರ್ನಾಟಕ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರು ಭಾನುವಾರ ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಕೂಲಕುಂಷವಾಗಿ ಪರೀಶೀಲನೆ ನಡೆಸಿದರು.
ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಸ್ವಚ್ಚತೆ ಹಾಗೂ ಓಷಧಿಗಳ ಸಂಗ್ರಹಣೆಗೆ ಅವರು ್ಗ ಪ್ರಶಂಸೆ ವ್ಯಕ್ತಪಡಿಸಿದರು.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾಗಿ ಓಷಧೋಪಚಾರ ಹಾಗೂ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದ ಅವರು, ಎಮ್.ಆರ್.ಐ. ಸಿ.ಟಿ. ಸ್ಕ್ಯಾನ್ ಸಮರ್ಕವಾಗಿ ನಿರ್ವಹಿಸಬೇಕು. ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಕೃಷ್ಣಾ ಡೈಗೋಸ್ಟೀಕ್ ಪುಣೆ ಸಂಸ್ಥೆಯ ಆಪರೇಟಿಂಗ್ ಮ್ಯಾನೇಜರ್ ಯೋಗೇಶ ಸರವೋರ್, ಲಿಗಲ್ ಅಡವೈಸರ್ ಹಾಗೂ ಎಚ್.ಆರ್. ಪಿಲಿಪ್ ಸಾಮಂತೆ, ಎಮ್.ಆರ್.ಐ. ಮ್ಯಾನೇಜರ್ ವಿಶಾಲ ಜಂಗಮ ಇವರಿಗೆ ಸೂಚನೆ ನೀಡಿದರು.
ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ,ಶಿವಾನಂದ ಮಾಸ್ತಿಹೊಳಿ ಅವರು ಜಿಲ್ಲಾಸ್ಪತ್ರೆಯ ವಿವಿಧ ವಿಭಾಗದ ಕುರಿತು ಮಾಹಿತಿ ನೀಡಿದರು.
ಈ ಸಂಧರ್ಬದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಿಧಿಕಾರಿ ಡಾ. ಸಂಪತ್ ಗುಣಾರಿ ಹಾಗೂ ಆಸ್ಪತ್ರೆಯ ಆರ್.ಎಮ.ಓ. ಡಾ: ಚಂದು ರಾಠೋಡ, ಎಬಿ-ಎಆರ್.ಕೆ. ನೋಡಲ್ ಅಧಿಕಾರಿಗಳಾದ ಡಾ:ಎ.ಜಿ.ಬಿರಾದಾರ, ಡಾ.ಶಶಿಕಲಾ ಹಿರೇಮನಿ, ವಿಜಯಪುರ ತಹಶೀಲ್ದಾರರಾದ ಪ್ರಶಾಂತ ಚನಗೊಂಡ ಉಪಸ್ಥಿತರಿದ್ದರು.