ವಿದ್ಯಾಕಾಶಿಯ ಸೃಷ್ಟಿಗೆ ಅಡಿಪಾಯ ಹಾಕಿದವರು ಹುಕ್ಕೇರಿಕರ ರಾಮರಾಯರು: ಡಾ. ಅಜಿತ ಪ್ರಸಾದ
Hukkerikara Rama Raya laid the foundation for the creation of Vidyakashi: Dr. Ajita Prasad
ಧಾರವಾಡ 23: ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ಮುತ್ಸದ್ದಿ, ಪತ್ರಿಕಾರಂಗದ ಮೊನಚು ಬರಹಗಾರ, ಶಿಕ್ಷಣ ಕ್ಷೇತ್ರದ ಭೀಷ್ಮನಾಗಿ ಎಲ್ಲ ರಂಗಗಳಲ್ಲೂ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸಿ ಇಂದಿಗೆ ಧಾರವಾಡ ಶೈಕ್ಷಣಿಕ ಕಾಶಿಯಾಗಲು ಅಂದೇ ಅಡಿಗಲ್ಲನ್ನು ಇಟ್ಟವರು ದಿ. ಹುಕ್ಕೇರಿಕರ್ ರಾಮರಾಯರು. ಮನಸ್ಸು ಮಾಡಿದ್ದರೆ ಕುಬೇರರಾಗಬಹುದಾಗಿದ್ದರೂ ಬಡತನವನ್ನೇ ಆಯ್ದುಕೊಂಡ ಹುಕ್ಕೇರಿಕರ ಮಾಸ್ತರ್ 'ವಿದ್ಯಾಗಿರಿ'ಯನ್ನೆ ಕಟ್ಟಿ ಇಂದು ಸಹಸ್ರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುವಂತೆ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಜೆ.ಎಸ್.ಎಸ್ ನ ಕಾರ್ಯದರ್ಶಿ ಡಾ. ಅಜಿತ ಪ್ರಸಾದರವರು ಹೇಳಿದರು. ಧಾರವಾಡದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯಲ್ಲಿ ದಿ. ಆರ್.ಎಸ್. ಹುಕ್ಕೇರಿಕರ್‌ರವರ ಪುಣ್ಯತಿಥಿ ನಿಮಿತ್ತ ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಸ್ವತಂತ್ರ ಭಾರತವನ್ನು ಕಟ್ಟಬೇಕೆಂದು ಇದ್ದು ಬಿದ್ದುದನ್ನೆಲ್ಲ ತ್ಯಾಗ ಮಾಡಿದ ಈ ತಪಸ್ವಿ ಶಿ ಹುಕ್ಕೇರಿಕರ್ ರಾಮರಾಯರು, ದೇಶಕ್ಕಾಗಿ ಸ್ವಂತ ಮನೆ, ಸ್ವ-ಕುಟುಂಬ ಹಿತ, ಸ್ವ-ಸುಖಗಳ ತೊರೆದವರು. ಖಾದಿ ಕ್ಷೇತ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀಯುತರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲು ವಾಸ ಅನುಭವಿಸಿದವರು. ಕಾಲಕಾಲಕ್ಕೆ ಹಲವಾರು ಪ್ರಾತಸ್ಮರಣಿಯರು ಜನ್ಮತಾಳುತ್ತಾರೆ ಅವರ ಆಗಮನದಿಂದ ದೇಶ ರಾಜ್ಯ ಸುಭಿಕ್ಷೇ ಕಾಣುತ್ತವೆ. ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ ರಾಮರಾವ್ ಹುಕ್ಕೇರಿಕರವರು ಅಂತಹ ಮಹನೀಯರಲ್ಲಿ ಒಬ್ಬರಾಗಿದ್ದು, ಅಂದು ಸ್ಥಾಪಿಸಿದ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ಇಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದಿಂದ ಪ್ರತಿವರ್ಷ ಸಾವಿರಾರು ಮಕ್ಕಳ ವಿದ್ಯಾರ್ಜನೆಗೆ ದಾರಿಯಾಗಿದೆ.
1944ರಲ್ಲಿ ಕೆ.ಇ ಬೋರ್ಡ ಮಹಾವಿದ್ಯಾಲಯವನ್ನು ತಮ್ಮ ಆಡಳಿತ ಕಕ್ಷೆಯೊಳಗೆ ತೆಗೆದುಕೊಂಡು, ಮುಂದೆ ಮೈಲಾರಲಿಂಗನ ಗುಡ್ಡವನ್ನೆ ಈಗಿನ ವಿದ್ಯಾಗಿರಿಯಾಗಿ ಪರಿವರ್ತಿಸಿ, ಒಂದು ವಿದ್ಯಾಸಂಸ್ಥೆಗಳ ಸಂಕೀರ್ಣವನ್ನಾಗಿ ಬೆಳೆಯಿಸಿದರು. ಇಂದು ಅದೇ ವಿದ್ಯಾಗಿರಿ ಜ್ಞಾನವಿಜ್ಞಾನಗಳ ದೀಪಸ್ತಂಭವಾಗಿ ಜನತಾ ಶಿಕ್ಷಣ ಸಮಿತಿಯಾಗಿ ಧಾರವಾಡಕ್ಕಷ್ಟೆ ಅಲ್ಲದೇ ಕರ್ನಾಟಕಕ್ಕೆ ಹೆಮ್ಮೆಯ ಅಶ್ವತ್ಥಮರವಾಗಿ ಬೆಳೆದಿದೆ. ಈಗಾಗಲೇ ಆಜಾದಿ-ಕಾ-ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆ ದಿ. ಆರ್ ಎಸ್ ಹುಕ್ಕೇರಿಕರವರ ಗೌರವಾರ್ಥವಾಗಿ ವಿಶೇಷ ಅಂಚೆ ಲಕೋಟೆಯನ್ನು ಸಹ ಹೊರತಂದಿದ್ದಾರೆ. ಇದು ನಮ್ಮೆಲ್ಲರಿಗೂ ಸಂತಸದ ವಿಚಾರ. ಇಂಥವರು ಸ್ಥಾಪಿಸಿದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನಾವೆಲ್ಲ ಧನ್ಯರು ಎಂದು ಹೇಳಿದರು. ಜೆ.ಎಸ್.ಎಸ್ ನ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಮತ್ತು ಜೆ.ಎಸ್.ಎಸ್‌ನ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 