ಲೋಕದರ್ಶನ ವರದಿ
ಹೊಸಪೇಟೆ 26: ಖಡ್ಡಾಯವಾಗಿ ರಸ್ತೆ ಸುರಕ್ಷಿತ ನಿಯಮಗಳನ್ನು ಪಾಲಿಸಿದರೇ ಅಪಘಾತ ಸಂಭವಿಸುವುದಿಲ್ಲ ನೀವು ಮತ್ತು ನಿಮ್ಮ ಕುಟುಂಬದವರು ಚೆನ್ನಾಗಿರುತ್ತಾರೆ ಎಂದು ಸಂಡೂರು ವೃತ್ತದ ನಿರೀಕ್ಷಕ ಕುಮಾರ ಹೇಳಿದರು.
ಭಾನುವಾರು ಮರಿಯಮ್ಮನಹಳ್ಳಿಯ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಚಾರ ನಿಯಮಗಳ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದ್ವಿಚಕ್ರ ವಾಹನ ಮತ್ತು ಕಾರುಗಳನ್ನ ಅತಿ ವೇಗದ ಮಿತಿಯನ್ನು ಮೀರಿದರೇ ಅಪಘಾತ ಸಂಭವಿಸುತ್ತವೆ ಇದರಿಂದ ಪ್ರಾಣ ಹಾನಿ ಸಂಭವಿಸಿದಾಗ ನಿಮ್ಮನ್ನೆ ನೆಚ್ಚಿಕೊಂಡಿರುವ ಹೆಂಡ್ತಿ, ಮಕ್ಕಳು, ತಂದೆ ತಾಯಿ ಅನಾಥರಾಗಿ ಬೀದಿ ಪಲಾಗುತ್ತಾರೆ. ರಸ್ತೆ ಸುತರಕ್ಷಿತ ನಿಯಮಗಳನ್ನು ಪಾಲಿಸಬೇಕು.
ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸಾಬಯ್ಯ ಪ್ರಾಸ್ತವಿಕ ಮಾತನಾಡಿ, ಸರಕು ಸಾಗಣಿ ವಾಹನಗಳಲ್ಲಿ ಜನರನ್ನು ಕೊಂಡೊಯ್ಯುವುದು ಕಾನೂನು ಬಾಹಿರವಾಗಿದೆ ಇಂತಹವು ಕಂಡುಬಂದಲ್ಲಿ ಅಂತವರ ವಿರುದ್ಧ ಯಾವುದೇ ಮುಲಾಜ್ ನೋಡದೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಅಂಕಿ ಅಂಶಗಳ ಪ್ರಕಾರ ಒಂದು ವರ್ಷಕ್ಕೆ ಒಂದು ಲಕ್ಷದ ಇಪ್ಪತ್ತು ಸಾವಿರ ಜನರು ಅತಿ ವೇಗದಿಂದ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಮೊದಲನೆಯದಾಗಿ ವಾಹನ ಚಾಲಕರು ತಾಳ್ಮೆ ಮತ್ತು ನಿಧಾನ ಬಹಳ ಮುಖ್ಯವಾಗುತ್ತದೆ. 2016 ರಲ್ಲಿ ನಡೆದ ಅಪಘಾತದಲ್ಲಿ 67 ಜನ ಅಂಗವಿಕಲಾಗಿದ್ದಾರೆ, 2017 ರಲ್ಲಿ 54 ಜನ ಗಾಯಾಳುಗಳಾಗಿದ್ದಾರೆ 2018 ರಲ್ಲಿ 58 ಜನ ಗಾಯಗಳಿಂದ ಬಳಲುತಿದ್ದಾರೆ.
ಈ ಸಂದರ್ಭದಲ್ಲಿ ಪ.ಪಂ ಸಿಬ್ಬಂದಿ ಶಾಸ್ತ್ರೀ, ಕೆಎಸ್ಆರ್ಟಿಸಿ ಸಿಬ್ಬಂದಿ ಮಂಜುನಾಥ, ಉಪ ವಲಯ ಅರಣ್ಯಾಧಿಕಾರಿ ಕನಕಪ್ಪ, ಹೈವಾ ಟಿಪ್ಪರ್ ಸಂಘದ ಅಧ್ಯಕ್ಷರ ಆಟೋ ಚಾಲಕರ ಸಂಘದ ಅಧ್ಯಕ್ಷರು ಟಾಟ ಎಸಿ ಮಾಲೀಕರು ಲಾರಿ ಚಾಲಕರು ಮತ್ತು ಸಾರ್ವಜನಿಕರು ಭಾಗವಿಸಿದ್ದರು.