ಲೋಕದರ್ಶನ ವರದಿ
ಹೊಸಪೇಟೆ 17: ದೇವಲಾಪುರ ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದರಿಂದ ಅರಣ್ಯ ಇಲಾಖೆಯವರು ಕರಿ ಕೋತಿಗಳನ್ನ ಸೆರೆ ಹಿಡಿಯಲು ಬೋನ್ ಅಳವಡಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯಾಗುವುದನ್ನರಿತ ಇಲಾಖೆ ಸಿಬ್ಬಂದಿ ಗ್ರಾಮದ ಮುಕ್ದುರಗಮ್ಮ ದೇವಸ್ಥಾನದ ಬಳಿಯಲ್ಲಿ ಕೋತಿಗಳನ್ನು ಹಿಡಿಯಲು ಬೋನ್ನ್ನು ಇಡಲಾಗಿದೆ.
ಕಳೆದ ತಿಂಗಳಿಂದ 60 ರಿಂದ 70 ಕರಿ ಕೋತಿಗಳ ಹಿಂಡು ಬಿಡಾರ ಹೂಡಿದ್ದು, ಇವುಗಳಿಂದ ಸಾರ್ವಜನಿಕರ ನೆಮ್ಮದಿ ಹಾಳಗಿದ್ದು ಕಂಡವರನ್ನು ಕಚ್ಚಿ ಗಾಯಗೊಳಿಸುತ್ತಿವೆ.
ದನಕರುಗಳಿಗೂ ಕಚ್ಚಿದ್ದು, ಕೋತಿಗಳ ಉಪಟಳಕ್ಕೆ ಜನ ರೋಸಿ ಹೋಗಿದ್ದರು. ಈ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಕೋತಿಗಳನ್ನು ಒಡಿಸುವಂತೆ ಮನವಿಸಿದ್ದರೂ ಕ್ಯಾರೆ ಎಂದಿದ್ದಿಲ್ಲ. ಆದರೆ ಮಂಗಳವಾರ ಮದುವೆ ಮನೆಗೆ ಕೋತಿಗಳು ನುಗ್ಗಿ ವೃದ್ಧ ಹಾಗೂ ಯುವಕನನ್ನು ಕಚ್ಚಿ ಗಾಯಗೊಳಿಸಿದ್ದವು. ಈ ಹಿನ್ನಲೆಯಲ್ಲಿ ಎಚ್ಚೆತ್ತ ಇಲಾಖೆ ಸಿಬ್ಬಂದಿ ಕೂಡಲೇ ಬೋನ್ನ್ನು ಇರಿಸಿದ್ದಾರೆ.
ಅರಣ್ಯ ರಕ್ಷಕ ಮಣೇಗಾರ್ ನಾಗರಾಜ್ ಹಾಗೂ ಸಿಬ್ಬಂಧಿಗಳು ಗ್ರಾಮದಲ್ಲಿ ಬುಧವಾರ ಕೋತಿಗಳನ್ನು ಸೆರೆ ಹಿಡಿಯಲು ಬೋನ್ ಅಳವಡಿಸಿ, ಕೋತಿಗಳಿಗೆ ಇಷ್ಟವಾಗುವ ಬಾಳೆ ಹಣ್ಣು, ಸೆಂಗಾ, ಸಂಡಗಿ ದಿನಿಸುಗಳನ್ನು ಹಾಕಿದ್ದಾರೆ. ಕೋತಿಗಳನ್ನು ಹಿಡಿಯಲು ಸಿಬ್ಬಂಧಿಗಳಾದ ನಾಗಪ್ಪ, ಮೌಲಸಾಬ್, ಬಸವರಾಜ್, ಹೇಮಣ್ಣ, ನಿಂಗರಾಜ್ ಹರಸಾಹಸ ಪಡುತ್ತಿರುವುದು ಕಂಡು ಬಂತು.
'ಬೋನ್ಗೆ ಕೋತಿಗಳು ಬೀಳದಿದ್ದರೆ ಮತ್ತು ಬರುವ ಅರವಳಿಕೆಯಿಂದ ಹೊಡೆದು ಸೆರೆ ಹಿಡಿಯಲಾಗಿತ್ತದೆ, ಮುಂದಿನ ದಿಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತವೆ ದೇವಲಾಪುರ ಗ್ರಾಮದಲ್ಲಿ ಕೋತಿಗಳನ್ನು ಸೆರೆ ಹಿಡಿಯುವದಕ್ಕೆ 4 ಸಿಬ್ಬಂದಿಗಳು ನಿಯೋಜಿಸಲಾಗಿದೆ ಎಂದು ಅರಣ್ಯ ಇಲಾಖೆ ಉಪ ಅರಣ್ಯ ಅಧಿಕಾರಿ ಕನಕಪ್ಪ ಹೇಳಿದರು.