ಹೊಸಪೇಟೆ: ಪ್ರಾರ್ಥನೆ ಸಲ್ಲಿಸಿ ರಮ್ಜಾನ್ ಆಚರಿಸಿದ ಮುಸ್ಲಿಂ ಬಾಂಧವರು

ಹೊಸಪೇಟೆ 05: ನಗರದಲ್ಲಿ ಪವಿತ್ರವಾದ ರಂಜಾನ್ ಹಬ್ಬವು ಬಹಳ ಸಡಗರ ಸಂಬ್ರಮದಿಂದ ಆಚರಣೆ ಮಾಡಿದ್ದು, ವಿವಿಧ ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಮುಸ್ಲಿಂ ಬಾಂದವರು ಅಂಬೇಡ್ಕರ್ ಸರ್ಕಲ್ ಹತ್ತಿರದ ಈದ್ಗಾ ಮೈದಾನದಲ್ಲಿ ಸೇರಿ ಪ್ರಾರ್ಥನೆಯನ್ನು ಸಲ್ಲಿಸಿದರು, ನಂತರ ಪರಸ್ಪರ ಅಲಂಗಿಸುವ ಮೂಲಕ ಹಬ್ಬದ ಶುಭಾಶಗಳನ್ನು ತಿಳಿಸುತ್ತಿದ್ದರು. 

ಈದ್ಗಾ ಮೈದಾನದಲ್ಲಿ ಪ್ರಾರ್ಥನೆಯ ಸಂದರ್ಭದಲ್ಲಿ  ಹಬ್ಬವನ್ನು ಉದ್ದೇಶಿ ಮಾತಾನಾಡಿದ ಮುಸ್ಲಿಂ ಸಮಾಜದ ಮುಖಂಡರಾದ ಎಚ್.ಎನ್.ಎಫ್. ಮಹಮ್ಮದ ಇಮಾಂ ನಿಯಾಜಿ ರವರು ರಂಜಾನ್ ಹಬ್ಬವು ನಮ್ಮ ಕ್ಷೇತ್ರದ ಸಮಸ್ತ ಜನತೆ ಹಾಗೂ ದೇಶದ ಜನತೆಗೆ ಸುಃಖ ಶಾಂತಿ, ಸೌಹಾರ್ದತೆ, ದೇಶದಲ್ಲಿ ಉತ್ತಮ ಮಳೆ ಬೆಳೆಯಾಗಿ ಸಮೃದ್ದಿಯಿಂದ ಎಲ್ಲಾರೂ ಉತ್ತಮ ಆರೋಗ್ಯದಿಂದ ಬಾಳುವಂತಾಗಲೀ ಎಂದು ಶುಭ ಕೋರುವ ಮೂಲಕ ಎಲ್ಲಾರಿಗೂ ಹಬ್ಬದ ಶುಬಾಶಯಗಳು ತಿಳಿಸಿದರು.

ಆರ್ ಟಿ ಒ ಆಫೀಸ್ ಬಳಿಯ ಈದ್ಗಾ ಮೈದಾನದಲ್ಲಿ ಬೆಳಗ್ಗೆ 07.30 ಕ್ಕೆ, ಬಸ್ ಡಿಪೋ ಹಿಂಬಾಗದ ಈದ್ಗಾ ಮೈದಾನದಲ್ಲಿ ಬೆಳಗ್ಗೆ 09.30 ಕ್ಕೆ ಹಾಗು ಚಿತ್ತವಾಡ್ಗಿ, ಟಿ.ಬಿ ಡ್ಯಾಂ, ಕಾರಿಗನೂರು, ಅಂಬೇಡ್ಕರ್ ಸರ್ಕಲ್ ಬಳಿ ಇರುವ ಈದ್ಗಾ ಮೈದಾನದಲ್ಲಿ ಬೆಳಗ್ಗೆ 10-00 ಗಂಟೆಗೆ ಪ್ರಾರ್ಥನೆ ಸಲ್ಲಿಸಿದರು.

ಈದ್ಗಾ ಮೈದಾನಕ್ಕೆ ರತನ್ ಸಿಂಗ್, ಪಾಂಡಣ್ಣ , ಯಂಕಪ್ಪ, ಹಾಗೂ ಸತ್ಯ ನಾರಾಯಣ, ಆಗಮಿಸಿ ಸಮಸ್ತ ಮುಸ್ಲಿಂ ಬಾಂದವರಿಗೆ ಹಬ್ಬದ ಶುಭಾಶಗಳನ್ನು ಕೋರಿದರು. 

ಈದ್ಗಾ ಮೈದಾನದಲ್ಲಿ ಮಾಜಿ, ಅನ್ಸರ್ ಬಾಷಾ, ಸೈಯ್ಯದ್ ಅಬ್ದುಲ್ ವಾಹೀದ್ ಜಾಕೀರ್, ಬಡಾವಲಿ, ಫಹೀಮ್ ಬಾಷ, ನಾಸಿರ್, ಶಂಶುಲ್ಲಾ ಖಾನ್, ದಾದಾಪೀರ್ ಭಾವ್, ಜಫರುಲ್ಲಾ ಖಾನ್, ಗೌಸ್, ಕಲಂದರ್, ಸಾದಿಕ್ ಅಲಿ, ಹಾಗು ಸಾವಿರಾರು ಮುಸ್ಲಿಂ ಭಾಂದವರು  ಭಾಗವಹಿಸಿದರು.