ಲೋಕದರ್ಶನ ವರದಿ
ಹೊಸಪೇಟೆ 14: ಪ್ರಸ್ತುತ ಮಾಧ್ಯಮ ಸಂಭ್ರಮದಲ್ಲಿ ಒಂದೇ ಪ್ರಶಸ್ತಿ ಪಡೆದರೂ ಖುಷಿಯಾಗಿದೆ ಆದರೆ ಮುಂದಿನ ಮಾಧ್ಯಮ ಸಂಭ್ರಮದಲ್ಲಿ ಯೋಜನಾಬದ್ಧವಾಗಿ ಪೂರ್ವತಯಾರಿ ನಡೆಸಿ, ಕಪ್ ಗೆಲ್ಲುವ ಗುರಿ ನಿಮ್ಮದಾಗಿರಲಿ ಎಂದು ವಿದ್ಯಾರ್ಥಿಗಳಿಗೆ ಶಂಕರ್ ಆನಂದಸಿಂಗ್ಸರ್ಕಾರಿ ಪ್ರಥಮದಜರ್ೆ ಕಾಲೇಜಿ ಪ್ರಾಂಶುಪಾಲ ಡಾ. ಬಿ.ಜಿ ಕನಕೇಶಮೂರ್ತಿ ತಿಳಿಸಿದರು.
ನಗರದ ಶ್ರೀ ಶಂಕರ್ ಆನಂದ್ಸಿಂಗ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ, ಸಂಭ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಮೊದಲ ಬಾರಿಗೆ ಮಾಧ್ಯಮ ಸಂಭ್ರಮದಲ್ಲಿ ಪಾಲ್ಗೊಂಡಿದ್ದು, ಅದರಲ್ಲೂ ನ್ಯೂಸ್ ರೀಡಿಂಗ್ನಲ್ಲಿ ದ್ವೀತಿಯಸ್ಥಾನ ಪಡೆದಿರುವುದು ಸಂತಸದ ವಿಷಯವಾಗಿದೆ ಹಾಗೂ ವಿದ್ಯಾಥರ್ಿಗಳಿಗೆ ಇದರಿಂದ ಅನುಭವ ಎಚ್ಚಾಗಲಿದೆ, ಇನ್ನು ಮುಂಬರುವ ಸಂಭ್ರಮದಲ್ಲಿ ಕಪ್ ಗೆಲ್ಲುವ ಗುರಿ ನಿಮ್ಮದಾಗಲಿ ಎಂದು ತಿಳಿಸಿದರು.
ವರದಿಗಾರಿಕೆ ಮತ್ತು ಫೋಟೊಗ್ರಫಿಯಲ್ಲಿ ಸಂತೋಷ್ ಕುಮಾರ್ ಎಚ್.ಕೆ, ಪೋಸ್ಟರ್ ಡಿಸೈನ್ ಓ.ಎಂ ಸ್ಮಿತಾ, ನುಡಿಚಿತ್ರ ಪ್ರೀತಿ ಎಚ್.ಎಂ, ಪಿ.ಟೂ.ಸಿ ಶ್ವೇತಾ, ಮಂಗನ ಕೈಯಲ್ಲಿ ಮಾಣಿಕ್ಯ ಸ್ಪಧರ್ೆಯಲ್ಲಿ ಭಾಗವಹಿಸಿದ ಕೆ.ಮಂಜುನಾಥ್, ಬಿ.ಮಂಜುನಾಥ್, ಪ್ರದೀಪ್ ಕುಮಾರ್, ಅಂಜಿನಪ್ಪ, ಜ್ಯೋತಿ ಮತ್ತು ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಉಮೇಶ್, ನ್ಯೂಸ್ ರೇಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಅಜರುದ್ದೀನ್ ಎಲ್ಲರಿಗೂ ಸಂಭ್ರಮದಲ್ಲಿ ಪಾಲ್ಗೊಂಡ ಪ್ರಶಸ್ತಿ ಪತ್ರವನ್ನು ನೀಡುವ ಮೂಲಕ ಎಲ್ಲ ವಿದ್ಯರ್ಥಿಗಳಿಗೆ ಅಭಿನಂದಿಸಿದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸಿ.ಮಂಜುನಾಥ್ ಮಾತನಾಡಿ, ಸಂಭ್ರಮದಲ್ಲಿ ಹೊಸಪೇಟೆಯ ಪತ್ರಿಕೋದ್ಯಮ ವಿಭಾಗ ವಿದ್ಯಾಥರ್ಿಗಳು ಮೊದಲ ಭಾರಿಗೆ ಸಮಾರಂಭದಲ್ಲಿ ಭಾಗವಹಿಸಿದ್ದು, ಅದರಲ್ಲಿ ನ್ಯೂಸ್ ರೀಡಿಂಗ್ ಸ್ಪಧರ್ೆಯಲ್ಲಿ ಭಾಗವಹಿಸಿದ ಅಜರುದ್ದೀನ್ ವಿದ್ಯಾರ್ಥಿ ಎರಡನೇ ಸ್ಥಾನವನ್ನು ಪಡೆದಿದ್ದು ನನಗೆ ಖುಷಿ ತಂದಿದೆ ಎಂದರು. ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಬಿ.ಕೆ ಮುರಳೀಧರ, ಪ್ರಕಾಶ್ ಮತ್ತು ಪತ್ರಿಕೋದ್ಯಮ ವಿದ್ಯರ್ಥಿಗಳು ಇದ್ದರು.