'ಕೇಂದ್ರ ಮಾನ್ಯತೆ ನೀಡುವ ವಿಶ್ವಾಸವಿದೆ'

    ಬೆಳಗಾವಿ 25: ಲಿಂಗಾಯತ ಧರ್ಮಕ್ಕೆ ಕೇಂದ್ರ ಸಕರ್ಾರವು ಸಂವಿಧಾನಿಕ ಮಾನ್ಯತೆ ನೀಡುವ ವಿಶ್ವಾಸ ನಮಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ಇಂದಿಲ್ಲಿ ಹೇಳಿದರು. 

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶತಮಾನದ ಇತಿಹಾಸ ಹೊಂದಿರುವ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರೆಯಬೇಕು. ನಮ್ಮ ಭಾವನೆಗಳಿಗೆ ಸ್ಪಂದಿಸಿ ರಾಜ್ಯದ ಹಿಂದಿನ ಸಕರ್ಾರ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ರಾಜ್ಯದ ಶಿಫಾರಸನ್ನು ಕೇಂದ್ರ ಸಕರ್ಾರ ಈವರೆಗೆ ಅಂಗೀಕರಿಸಿಲ್ಲ. ತಿರಸ್ಕಾರ ಕೂಡ ಮಾಡಿಲ್ಲ. ಶೀಘ್ರವೇ ಈ ಬಗ್ಗೆ ಕೇಂದ್ರ ಸಕರ್ಾರ ಸಕಾರಾತ್ಮಕ ನಿಲುವು ತೆಗೆದುಕೊಳ್ಳುವ ವಿಶ್ವಾಸ ಇದೆ 

ಎಂದರು. 

ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡ ಬಸವಣ್ಣನವರ ಅನುಯಾಯಿ. ಕನರ್ಾಟಕ, ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರ ಪ್ರದೇಶದ ಎಲ್ಲೆಡೆ ಲಿಂಗಾಯತ ಧಮರ್ಿಯರಿದ್ದಾರೆ. ದೇಶದ ಲಿಂಗಾಯತರಿಗೆ ರಾಷ್ಟ್ರೀಯ ಅಲ್ಪಸಂಖ್ಯಾತ ಮಾನ್ಯತೆ ದೊರೆಯಬೇಕಿದೆ. 

ಹೀಗಾಗಿ ರಾಜ್ಯದ ಶಿಫಾರಸು ಅಂಗೀಕರಿಸುವ ಭರವಸೆ ಇದೆ. ಶ್ರಾವಣದ ಬಳಿಕ ಹೋರಾಟದಲ್ಲಿದ್ದ ಎಲ್ಲಾ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರಧಾನಿ ಮೋದಿ ಬಳಿ ನಿಯೋಗ ಒಯ್ಯಲಾಗುವುದು. ರಾಜ್ಯದ ಶಿಫಾರಸು ಅಂಗೀಕರಿಸುವಂತೆ ಒತ್ತಡ ಹೇರಳಾಗುವುದು ಎಂದು ತಿಳಿಸಿದರು. 

ಲಿಂಗಾಯತ ಹೋರಾಟಕ್ಕೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಗಳ ಹಿಂದೇಟಿಗೆ ಹೋರಾಟ ಕಾರಣವಲ್ಲ. ಹೋರಾಟ ಹತ್ತಿಕ್ಕುವ ಪ್ರಯತ್ನ ಕೆಲವರಿಂದ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಹಾದಾಯಿ ನ್ಯಾಯಾಧಿಕರಣ ತೀಪರ್ು. ಅಲ್ಪ ತೃಪ್ತಿ ತಂದಿದ್ದು, ಬೇಡಿಕೆಯಷ್ಟು ನೀರು ಸಿಗದೆ ಇದ್ದರೂ ಮಹಾದಾಯಿ ನೀರಿನ ಮೇಲಿನ ಹಕ್ಕು ನಮ್ಮದಾಗಿರುವುದು ಸಮಾಧಾನ ತಂದಿದೆ. ಮಹದಾಯಿಯಲ್ಲಿ ನಮ್ಮ ಪಾಲಿನ ನೀರು ಸಿಗುವವರೆಗೆ ಹೋರಾಟ ನಡೆಸಲಾಗುವುದು ಎಂದರು.