ಕೃಷಿಕ ಸಮಾಜದ ಅಧ್ಯಕ್ಷರ ಸನ್ಮಾನ
ಹುಬ್ಬಳ್ಳಿ 29: ನವಲಗುಂದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಶಿರಕೋಳ ಗ್ರಾಮದ ರೈತ ಮುಖಂಡ ಸೋಮಲಿಂಗಪ್ಪ ಬಳಿಗೇರ ಅವರನ್ನು ರವಿವಾರ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಸೋಮಲಿಂಗಪ್ಪ ಬಳಿಗೇರ, ಕೃಷಿ ವಿಕಾಸ ಮತ್ತು ರೈತರ ಹಿತ ಕಾಪಾಡುವಲ್ಲಿ ತಾವು ನಿರಂತರ ಶ್ರಮಿಸುವುದಾಗಿ ಹೇಳಿದರು. ಕಿತ್ತೂರ ರಾಣಿ ಚೆನ್ನಮ್ಮ ಸೌಹಾರ್ದ ಸಹಕಾರಿ ಸಂಸ್ಥೆಯ ಕೇಂದ್ರ ಸಮಿತಿ ನಿರ್ದೇಶಕ ರಾಮಣ್ಣ ಜಕ್ಕಣ್ಣವರ, ವೀರನಗೌಡ ಪಾಟೀಲ, ವಿರೂಪಾಕ್ಷಪ್ಪ ಜಕ್ಕಣ್ಣವರ, ಈರ್ಪ ಅಂಗಡಿ, ಶಂಕ್ರೆಪ್ಪ ಅಮಟೂರ, ಮಹಾಂತೇಶ ರಾಯಪ್ಪಗೋಳ, ಮಲ್ಲಮ್ಮ ಬಳಿಗೇರ ಇತರರು ಇದ್ದರು.