ಬಣಿಜಗ ಸಂಘದ ಅಧ್ಯಕ್ಷರಾದ ಅರುಣಕುಮಾರಗೆ ಕಲಾ ಸ್ಪಂದನ ವತಿಯಿಂದ ಸನ್ಮಾನ

Honored by Kala Spandana to Arun Kumar, President of Banijaga Sangh

ಬಣಿಜಗ ಸಂಘದ ಅಧ್ಯಕ್ಷರಾದ ಅರುಣಕುಮಾರಗೆ ಕಲಾ ಸ್ಪಂದನ  ವತಿಯಿಂದ ಸನ್ಮಾನ

ಧಾರವಾಡದ 09: ಅಸೋಸಿಯೇಷನ್ ಆಫ್ ಸಿವಿಲ್   ಇಂಜಿನಿಯರ್ಸ, ಲೋಕಲ್ ಸೆಂಟರ್ ಧಾರವಾಡದ ಉಪಾಧ್ಯಕ್ಷ, ಕೃಷಿಸಾಧಕ, ಬಣಿಜಗ ಸಂಘದ ಧಾರವಾಡ ತಾಲೂಕ ಅಧ್ಯಕ್ಷರಾದ ಇಂ.ಅರುಣಕುಮಾರ ಶೀಲವಂತ ಮತ್ತು ಕೋಮಲ ಅರುಣಕುಮಾರ ಶೀಲವಂತ ಅವರಿಗೆ ಕಲಾ ಸ್ಪಂದನ,ಹಾವೇರಿ ವತಿಯಿಂದ ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ಅವರು ಸಾಧಕ ದಂಪತಿ ಎಂದು ಸನ್ಮಾನ ಮಾಡಿ ಗೌರವಿಸಲಾಯಿತು. 

  ಈ ಸಂದರ್ಭದಲ್ಲಿ ಕಲಾ ಸ್ಪಂದನದ ಅಧ್ಯಕ್ಷರಾದ ಡಾ ವ್ಹಿ ಎಸ್ ವ್ಹಿ ಪ್ರಸಾದ, ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ, ಸವಿತಾ ಅಮರಶೆಟ್ಟಿ, ಡಾ ಕವಿತಾ ಏವೂರ, ಡಾ ದೇವರಾಜ ರಾಯಚೂರ, ಡಾ ಕವನ ದೇಶಪಾಂಡೆ, ಜಗದೀಶ ಎಮ್ ಕೆ, ಮಂಜುನಾಥ ಕತ್ತಿ ಮತ್ತಿತರು ಇದ್ದರು.