ಜಾನಪದ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನ

Honored at the Folk Music Festival

ಜಾನಪದ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನ

ಕೊಪ್ಪಳ 04: ಇತ್ತೀಚಿಗೆ ಹುಬ್ಬಳ್ಳಿ ಯಲ್ಲಿ ಯಶಸ್ವಿ ಸಂಗೀತ ಸಾಹಿತ್ಯ ಸಂಸ್ಥೆ,( ರಿ) ಮುಧೋಳ ಹುಲಿಗೆಮ್ಮ ದೇವಿ ಸಮಿತಿಹುಬ್ಬಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯೋಗದಲ್ಲಿ ್ರ ಹುಲಿಗೆಮ್ಮ ದೇವಿ ಸಮಿತಿ ಅರವಿಂದನಗರದ ಸಭಾಭವನದಲ್ಲಿ ನಡೆದ ಜಾನಪದಸಂಗೀತ, ನೃತ್ಯ ಹಾಗೂ ಸಾಹಿತ್ಯ ಸಂಭ್ರಮ ಮತ್ತುಡಾ, ಹುಲಿಗೆಮ್ಮಪೊಸಾ ಅಮ್ಮನವರಿಗೆ ಅಭಿನಂದನಕಾರ್ಯಕ್ರಮ ಜರುಗಿತು ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜ ಯೋಗೇಂದ್ರಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ಸಂಗೀತ ಮತ್ತು ಸಾಹಿತ್ಯ ಕಲೆಗಳ ಉಳಿವಿಗಾಗಿ ಸಂಘ ಸಂಸ್ಥೆಗಳು ಶ್ರಮಿಸಬೇಕಾಗಿದೆ ಇಂದು ನಡಸಿರುವ ಯಶಸ್ವಿ ಸಂಗೀತ ಸಾಹಿತ್ಯ ಸಂಸ್ಥೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು, 

 ಮುಖ್ಯ ಅತಿಥಿಗಳಾಗಿ  ಲಲಿತಾ ವಿಜಯ ಸಂಕೇಶ್ವರ ಅಮ್ಮನವರು ಮಾತನಾಡಿ ಇಂದಿನ ದಿನಮಾನದಲ್ಲಿ ಗ್ರಾಮೀಣ ಭಾಗದ ಸಂಪ್ರದಾಯದ ಹಾಡುಗಳನ್ನು ಕಾರ್ಯಕ್ರಮಗಳ ಮುಖಾಂತರ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಇಂಥ ಸಂಘ-ಸಂಸ್ಥೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿ ಕಾರ್ಯಕ್ರಮಗಳನ್ನು ನಡೆಸಿ ಅಂತ ಕಲೆ ಗಳನ್ನು ಉಳಿಸಬೇಕಾಗಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಮಂಗಳೂರಿನ ಹಿರಿಯ ನಿವಾಸಿ ನಿವೃತ್ತ ಯೋಧ ಎಂ ಬಿ ಅಳವಂಡಿ ಮಾತನಾಡಿ ಸಂಗೀತ ಸಾಹಿತ್ಯ ಸಂಸ್ಥೆಗಳು ಗ್ರಾಮೀಣ ಮಟ್ಟದಲ್ಲಿ ಹೆಚ್ಚುಹೆಚ್ಚುಕಾರ್ಯಕ್ರಮ ನಡೆಸಬೇಕಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ  ರವಿಕುಮಾರ್ ಮಡ್ಡಿ ಶ್ರೀಮತಿ ಪದ್ಮ ದಿವಟೆ ಹುಬ್ಬಳ್ಳಿ ಶ್ರೀಮತಿ ಲತಾ ಹಳ್ಳಿಕೇರಿ ಸಂಪ್ರದಾಯದ ಹಾಡುಗಳನ್ನು ಪ್ರಸ್ತುತಪಡಿಸಿದರು ಹಾಗೂ ಭರತನಾಟ್ಯ ವನ್ನು ಕುಮಾರಿ ಕೃತಿಕಾ ರಾಯಬಾಗಿ ಇವರು ನಡೆಸಿ ಕೊಟ್ಟರು ಕುಮಾರಿ ಪಾವನಿ ಆರ್ ಕುಲಿಗೋಡ ಇವರು ತಮ್ಮಗಾಂದಾರ್ಯ ವಿದ್ಯೆಯನ್ನು ಪ್ರಸ್ತುತಪಡಿಸಿದರು ಉಪನ್ಯಾಸಕರಾಗಿ  ಸಂಗಣ್ಣ ಕೊಪ್ಪಳ ತಮ್ಮ ಆಧ್ಯಾತ್ಮಿಕನುಡಿಗಳನ್ನು ಆಡಿದರುಈ ಕಾರ್ಯಕ್ರಮದಲ್ಲಿ ಹಿರಿಯಸಾಹಿತಿಗಳಾದ ಡಾ, ಅರವಿಂದ್ ಯಾಳಗಿ ಕೆ ಪಿ ಗೋಟೂರ  ಹಿರಿಯ ಸಾಹಿತಿ ಮಹೇಶ ಮನ್ನಾಪುರ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಅಧ್ಯಕ್ಷ ಮಹೇಶ ಬಾಬು ಸರ್ವೇ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ, ಅನಿಲ್ ಕುಮಾರ್ ಬೇಗಾರ, ಸಂಗೀತ ಕಲಾವಿದೆ ಶ್ರೀಮತಿ ಅನ್ನಪೂರ್ಣಮ್ಮ ಮನ್ನಾಪುರ, ಶ್ರೀನಿವಾಸ್  ಕೊಡ್ಲಿ ಶ್ರೀಮತಿ ಪಾರ್ವತಿ ದೇವಿ ಹೊಂಬಳ  ಎಲ್ ಜಿ ಗಡ್ಡಿ ,ಶ್ರೀಮತಿ ಸಂಜನಾ ಕುಲಗೋಡ , ಮಹೇಶ್ ದಾವಡೆ  ತೋಟಪ್ಪ ನಿಡುಗುಂದಿ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದು ಈ ಕಾರ್ಯಕ್ರಮದಲ್ಲಿ ಸಾಕಷ್ಟು ಜನರು ಸಂಗೀತಗಾರರು ಕಲಾವಿದರು ಕವಿಗಳು ನೃತ್ಯಗಾರರು ಭಾಗವಹಿಸಿದ್ದರು. 

 ಈ ಸಭೆಯ ಪ್ರಮುಖ ಕಾರ್ಯಕ್ರಮವಾದ ಅಭಿನಂದನ ಸ್ವೀಕರಿಸಿದ ಡಾ,ಶ್ರೀಮತಿ ಹುಲಿಗೆಮ್ಮ ಪೋಸ ಅಮ್ಮನವರು  ಸಂಗೀತ ಕಲೆಗಳು ಹುಟ್ಟಿದ್ದೆ ಗ್ರಾಮೀಣ ಪ್ರದೇಶದಲ್ಲಿ ಅದರ ಉಳಿವಿಗಾಗಿ ಯಶಸ್ವಿ ಸಂಗೀತ ಸಾಹಿತ್ಯ ಸಂಸ್ಥೆಯು ಸತತ 15 ವರ್ಷದಿಂದ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದಾರೆ ಅಂತ ಕಾರ್ಯಕ್ರಮಗಳನ್ನು  ಸರಕಾರದ ಸಹಾಯ ಅಲ್ಪ ಪ್ರಮಾಣದಲ್ಲಿ ಆದರೆ ತುಂಬಾ ಕಷ್ಟ ಕಲಾವಿದರಿಗೆ ಕಲಾ ಸಂಸ್ಥೆಗಳಿಗೆ ಹೆಚ್ಚಿನ ಮಟ್ಟದ ಅನುದಾನವನ್ನು ನೀಡಿದರೆ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ನುಡಿದರು ,ಈ ಕಾರ್ಯಕ್ರಮದ ನಿರೂಪಣೆಯನ್ನು ಗುರು ಅಣ್ಣನವರು ಮಾಡಿದರೆ ವಂದನಾರೆ​‍್ಣಯನ್ನು  ರವಿಕುಮಾರ್ ನೆರವೇರಿಸಿದರು.