ಕನರ್ಾಟಕ ಮಹಿಳಾ ರಕ್ಷಣಾ ವೇದಿಕೆಯಿಂದ ಜ್ಯೋತಿಲರ್ಿಂಗ ಹೊನಕಟ್ಟಿಗೆ ಸನ್ಮಾನ

ಬೆಳಗಾವಿ 20: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ ಜನಪದ ಕಲೆಯಲ್ಲಿ ಸಾಧನೆ ಮಾಡುತ್ತಿರುವ ಇನ್ಸ್ಪೆಕ್ಟರ ಜ್ಯೋತಿಲರ್ಿಂಗ ಹೊನಕಟ್ಟಿ ಅವರನ್ನು ಬೆಂಗಳೂರಿನಲ್ಲಿ ಕನರ್ಾಟಕ ಮಹಿಳಾ ರಕ್ಷಣಾ ವೇದಿಕೆ ವತಿಯಿಂದ ಟೌನಹಾಲ್ನಲ್ಲಿ ಸತ್ಕರಿಸಲಾಯಿತು.  

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ಪುತ್ರಿ ಅನುಸೂಯಾ ಮಂಜುನಾಥ, ಪತ್ನಿ ಚೆನ್ನಮ್ಮ ದೇವೇಗೌಡ, ಸೌಮ್ಯರೆಡ್ಡಿ. ಎನ್. ಭಾರ್ಗವಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಹೊನಕಟ್ಟಿ ಅವರು ಜನಪದ ಕಲೆಯಲ್ಲಿ ತಮ್ಮನ್ನು  ತೊಡಗಿಸಿಕೊಂಡು ಈಗಾಗಲೇ ಧ್ವನಿಸುರುಳಿ ಹಾಗೂ ಪುಸ್ತಕ ಹೊರ ತಂದಿದ್ದಾರೆ.