ಲೋಕದರ್ಶನ ವರದಿ
ಬೆಳಗಾವಿ, 6: ಅಯೋಧ್ಯಯಲ್ಲಿ ರಾಮ ಮಂದಿರ ಕಟ್ಟಲು ನಮ್ಮ ವಿರೋಧ ಇಲ್ಲ. ಆ ವಿವಾದ ಅಂತ್ಯ ಕಾಣಬೇಕು ಎಂಬುದೆ ನಮ್ಮೆಲ್ಲರ ಬಯಕೆ. ಆದರೆ, ಡಾ. ಬಾಬಾಸಾಹೇಬ ಅಂಬೇಡ್ಕರರ ಮಹಾಪರಿನಿವರ್ಾಣ ದಿನದಂದು ಆ ವಿವಾದಿತ ಕಟ್ಟಡ ನೆಲಸಮ ಮಾಡಿದಕ್ಕಾಗಿ ರಾಮ ಮಂದಿರ ಕಟ್ಟುವ ಪ್ರಯತ್ನಗಳ ಮುನ್ನ ಆ ಕಟ್ಟಡ ಕೆಡವಿದವರು ದೇಶದ ಶೋಷಿತ ಸಮುದಾಯಗಳ ಕ್ಷೆಮೆ ಕೇಳಬೇಕು ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ ಆಗ್ರಹಿಸಿದ್ದಾರೆ.
ಡಾ.ಬಾಬಾಸಾಹೇಬ ಅಂಬೇಡ್ಕರರ ಮಹಾಪರಿನಿವರ್ಾಣ ದಿನದ ಅಂಗವಾಗಿ ಬಸವ ಭೀಮ ಸೇನೆಯ ವತಿಯಿಂದ ಡಿಸೆಂಬರ 9 ರಂದು ಹಮ್ಮಿಕೊಂಡಿರುವ ವಿಶ್ವ ಜ್ಞಾನ ಚೇತನಕ್ಕೆ ಗೌರವ ನಮನ ಮತ್ತು ವಿವಿಧ ಕ್ಷೇತ್ರಗಳ ಪ್ರತಿಭಾವಂತರಿಗೆ ಸನ್ಮಾನ ಕಾರ್ಯಕ್ರಮದ ಸಾಹಿತ್ಯವನ್ನು ನಗರದ ಡಾ. ಬಾಬಾಸಾಹೇಬ ಅಂಬೇಡ್ಕರರ ಉದ್ಯಾನದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಂದಿರ ಮಸೀದಿಯ ಹೆಸರಿನಲ್ಲಿ ಹಿಂದೂ ಮುಸ್ಲೀಂ ದಲಿತರು ಎಂದು ಬಡಿದಾಡಿ ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ಬಾರದಂತೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ಆ ವಿವಾದಿತ ಜಾಗದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರರ ಅಂತಾರಾಷ್ಟ್ರೀಯ ಸ್ಮಾರಕ ಭವನ ನಿಮರ್ಾಣ ಮಾಡಬೇಕು. ಅದು ಜ್ಞಾನದ ಮತ್ತು ಅಧ್ಯಯನ ಕೇಂದ್ರವಾಗಬೇಕು. ಆದರೆ, ಅಂತಹ ಮನಸ್ಸುಗಳು ಇಲ್ಲದರಿಂದ ಜನರು ಆ ವಿವಾದ ಅಂತ್ಯ ಕಾಣಬೇಕು ಎಂದು ಬಯಸುತ್ತಿದ್ದಾರೆ ಎಂದರು.
ಡಿಸೆಂಬರ 6 ರಂದು ಡಾ. ಬಾಬಾಸಾಹೇಬ ಅಂಬೇಡ್ಕರರಿಗೆ ಶ್ರದ್ದಾಂಜಲಿ ಸಲ್ಲಿಸುವ ಅರ್ಥಪೂರ್ಣ ಕಾರ್ಯಕ್ರಮಗಳು ಜರುಗಬೇಕು. ವಿವಾದಿತ ಕಟ್ಟಡವನ್ನು ಡಿಸೆಂಬರ 6 ರಂದೆ ಕೆಡವಿದರಿಂದ ಅಂದು ಇಸ್ಲಾಂ ಜನರು ಕಪ್ಪು ದಿನ ಆಚರಿಸುತ್ತಿದ್ದರೇ, ಹಿಂದೂ ಸಂಘಟನೆಗಳು ವಿಜಯೋತ್ಸವ ಆಚರಿಸುವದರಿಂದ ಆ ಐತಿಹಾಸಿಕ ದಿನವು ಆತಂಕದ ದಿನವಾಗುತ್ತಿದೆ. ಮಾಡಿರುವ ತಪ್ಪು ಸುಧಾರಿಸಿ ಕೊಳ್ಳಬೇಕು. ಇದೆ ಸಮಯದ ಬೇಡಿಕೆಯಾಗಿದೆ ಎಂದರು.
ಸಂಘ ಪರಿವಾರದ ಮುಖಂಡರು ಮತ್ತು ಕೇಂದ್ರ ಸರಕಾರ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳಬೇಕು. ಮಾತು ಕತೆಯ ಮೂಲಕ ಸಮಸ್ಯೆ ಬಗೆಹರಿಯದಿದ್ದರೇ ನ್ಯಾಯಾಲಯದ ತೀಪರ್ಿಗಾಗಿ ಕಾಯಬೇಕು. ಈಗಾಗಲೇ ಉತ್ತರ ಪ್ರದೇಶವು ಕೋಮು ಗಲಭೆಗಳಿಂದ ತತ್ತರಿಸುತ್ತಿರುವದರಿಂದ ಸೌಹಾರ್ದಯುತ ಮಾರ್ಗಗಳ ಬಗ್ಗೆ ಆಲೋಚಿಸಬೇಕು ಎಂದರು.
ಮಹಾದೇವ ತಳವಾರ, ಹಣಮಂತ ಢವಳಿ, ಸುಧಾಕರ ಡೊಂಕಣ್ಣವರ, ಸಿ.ಎಂ.ಕಂಚನಳ್ಳಿ, ಆನಂದ ಕೊಂಕಣಿ, ವೈ.ಎಚ್.ತಳವಾರ ಮುಂತಾದವರು ಉಪಸ್ಥಿತರಿದ್ದರು.