ರಾಣೇಬೆನ್ನೂರು: 10- ಶಿವಶರಣೆ ಹೇಮರಡ್ಡಿ ಮಲ್ಲಮ್ಮಳು ಸಂಸಾರದಲ್ಲಿ ಇದ್ದುಕೊಂಡು ಪಾರಮಾರ್ಥ ಜೀವನ ಸಾಗಿಸಿದವಳು, ಬದುಕಿನಲ್ಲಿ ಎಷ್ಟೇ ಕಷ್ಟ ಕಾರ್ಪಣ್ಯಗಳು ಬಂದರೂ ಸತ್ಯವನ್ನು ಮತ್ತು ಸತಿ ಧರ್ಮವನ್ನು ಚಾಚೂ ತಪ್ಪದೆ ಪಾಲಿಸಿ ಸಮಾಜಕ್ಕೆ ಹಾಗೂ ಸಮಸ್ಥ ಸ್ತ್ರೀ ಕುಲಕ್ಕೆ ದಾರಿದೀಪವಾಗಿದ್ದರು ಎಂದು ಜಿಪಂ ಸದಸ್ಯ ಏಕನಾಥ ಭಾನುವಳ್ಳಿ ಹೇಳಿದರು.
ನಗರದ ಪಿ.ಬಿ.ರಸ್ತೆಯ ಶ್ರೀವೇಮನ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಶ್ರೀವೇಮನ ವಿದ್ಯಾವರ್ಧಕ ಸಂಘ ಮತ್ತು ರಡ್ಡಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ 598ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರೀಶೈಲ ಮಲ್ಲಿಕಾಜರ್ುನನ್ನು ತನ್ನ ಆರಾಧ್ಯ ದೈವವಾಗಿ ಸ್ವೀಕರಿಸಿ ತನ್ನ ಎಲ್ಲ ಭಾರವನ್ನು ಹಾಕಿ ತನ್ನ ಮಾವ ಸೋಮರಡ್ಡಿ ನೀಡಿದ ಮನೆಗೆಲಸವನ್ನು ನಿಭಾಯಿಸುವ ಮೂಲಕ ಮಾರ್ಗದರ್ಶಕ ಜೀವನ ನಡೆಸಿ ಸ್ತ್ರೀ ಕುಲಕ್ಕೆ ಅನಘ್ರ್ಯ ರತ್ನ ಅವರಾಗಿದ್ದರು, ಅವರಂತೆ ಇಂದಿನ ತಾಯಂದಿರು ಮುನ್ನಡೆದರೆ ಅವರ ಬದುಕು ಹಸನವಾಗುವುದು ಎಂದರು.
ರಡ್ಡಿ ಸಮಾಜದ ತಾಲೂಕ ಅಧ್ಯಕ್ಷ ರಾಮಚಂದ್ರಪ್ಪ ರಾಯರಡ್ಡಿ ಮಾತನಾಡಿ, ಇಡಿ ವಿಶ್ವಕ್ಕೆ ಗುರುವಾದ ಭಾರತ ದೇಶದಲ್ಲಿ ಅನೇಕ ಮಹಾಪುರುಷರು, ಶರಣರು, ಋಷಿಮುನಿಗಳು, ಸಂತರು, ವಚನಕಾರರು ಜನ್ಮವೆತ್ತಿ ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅಂತವರಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳು ಒಬ್ಬರು, ಇಂತಹ ಮಣ್ಣಿನಲ್ಲಿ ಜನಿಸಿದ ನಾವೇ ಧನ್ಯರು ಎಂದರು.
ಮಣಕೂರಿನ ಬಸಮ್ಮತಾಯಿ ಗೌಡ್ರ ಹೇಮರಡ್ಡಿ ಮಲ್ಲಮ್ಮ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿದ್ದ ಡಾ|| ಆರ್.ಎಂ.ಕುಬೇರಪ್ಪ ಅವರು ಮಾತನಾಡಿ,ಸಮಾಜಕ್ಕೆ ಮತ್ತು ಅವರ ಬದುಕಿಗೆ ದಾರಿದೀಪವಾಗಿದ್ದ ಹೇಮರಡ್ಡಿ ಮಲ್ಲಮ್ಮಳ ಸಮುದಾಯದಲ್ಲಿ ಜನ್ಮತಾಳಿದ ನಾವೇ ಧನ್ಯರು.
ಸೇವಾ ಕಾರ್ಯದಲ್ಲಿ ಪ್ರತಿಯೊಬ್ಬರು ಪಾಳ್ಗೊಳ್ಳುವುದರ ಮೂಲಕ ಸಮಾಜದ ಸಂಘಟನೆ ಮತ್ತು ಅಭಿವೃದ್ಧಿ ಕಡೆಗೆ ಗಮನ ಹರಿಸುವುದು ಈ ಹಿಂದಿಗಿಂತಲೂ ಇಂದಿನ ಸಂಕ್ರಮಣ ಕಾಲದಲ್ಲಿ ಅತ್ಯಂತ ಅಗತ್ಯವಾಗಿದೆ ಎಂದು ಕರೆ ನೀಡಿದರು.
ಸಮಾಜದ ಮುಖಂಡರಾದ ಆರ್.ಡಿ.ಹೊಂಬರಡಿ, ಶ್ರೀನಿವಾಸ ಹಳ್ಳಳ್ಳಿ, ಕೆ.ಡಿ.ಬಜರಡ್ಡಿ, ಟಿ.ಎಫ್.ರಡ್ಡಿ, ಎಸ್.ಕೆ.ಗಿರಡ್ಡಿ, ಎಸ್.ಕೆ.ಹೂಲಿಹಳ್ಳಿ, ಡಿ.ವಿ.ಜೀವನಗೌಡ್ರ, ಮಲ್ಲಿಕಾಜರ್ುನ ಕೆಂಚರಡ್ಡಿ ಸೇರಿದಂತೆ ಮತ್ತಿತರರು ಗಣ್ಯರು ಮಾತನಾಡಿದರು.
ವೇದಿಕೆಯಲ್ಲಿ ಆರ್.ಎಂ.ಬೋಗೇಶರಡ್ಡಿ, ಅಶೋಕ ಯೋಗಿ, ಲಕ್ಷ್ಮಣ ಸಾವುಕಾರ ಮೊದಲಾದವರು ಉಪಸ್ಥಿತರಿದ್ದರು.
ಪೂಜಾ ಹುಲ್ಲತ್ತಿ ಪ್ರಾಥರ್ಿಸಿದರು. ಎಸ್.ಎಚ್.ಮೇಟಿ ಸ್ವಾಗತಿಸಿದರು. ಡಿ.ವಿ.ಜೀವನಗೌಡ್ರ ನಿರೂಪಿಸಿ, ಎಂ.ಎಲ್.ಎರೇಸೀಮಿ ವಂದಿಸಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ತಹಶೀಲ್ದಾರ ಕಛೇರಿಯಲ್ಲಿ ಹೆಮರಡ್ಡಿ ಮಲ್ಲಮ್ಮಳ ಜಯಂತ್ಯುತ್ಸವವನ್ನು ಚುನಾವಣೆ ನೀತಿ ಸಂಹಿತೆ ಜಾರಿ ಇರುವ ಕಾರಣ ಸಾಂಕೇತಿಕವಾಗಿ ಆಚರಿಸಲಾಯಿತು. ಸರಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.