ಯಾವುದೇ ರಂಗದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ

Honor to those who have achieved in any field

ಯಾವುದೇ ರಂಗದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ 

ಹಾವೇರಿ  24 : ಯಾವುದೇ ರಂಗದಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಸಹಕಾರ ನೀಡಿದವರಿಗೆ ಪ್ರೋತ್ಸಾಹ ಪೂರ್ವಕವಾಗಿ ಅವರಿಗೆ ಗೌರವಿಸುವ ಹಾಗೂ ಸನ್ಮಾನಿಸುವ ಕೆಲಸ ಬಹುಮುಖ್ಯವಾಗಿರಲಿದೆ ಎಂದು ಟಿಎಂಎಇಎಸ್‌ಶಿಕ್ಷಣ ಮಹಾವಿದ್ಯಾಲಯದ ಸಂಚಾಲಕರಾದ ಜಿ ಟಿ ಮಹೇಂದ್ರ​‍್ಪ ಹೇಳಿದರು. 

      ಇಲ್ಲಿನ ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಹಾವೇರಿ ಅಥ್ಲೆಟಿಕ್ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದಕ್ಕಾಗಿ ಅಭಿನಂದನಾ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. 

      ದೈಹಿಕ ಶಿಕ್ಷಣದಲ್ಲಿ ನಮ್ಮ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳು ಹೆಚ್ಚು ಸಾಧನೆ ಮಾಡಿದ್ದು,ನಮ್ಮ ಸಂಸ್ಥೆಯ ಉಪನ್ಯಾಸಕರ ಶ್ರಮ ಹಿರಿಯದಾಗಿದೆ.ಅಥ್ಲೆಟಿಕ್ ಕ್ರೀಡಾಕೂಟ ಯಶಸ್ವಿಗೊಳಿಸಲು ಹಲವಾರು ಶಿಕ್ಷಣ ಪ್ರೇಮಿಗಳು ಸಹಾಯ,ಸಹಕಾರ ನೀಡಿದ್ದು,ಬಿಪಿಇಡಿ ಕಾಲೇಜು ವತಿಯಿಂದ ಸಹಕಾರ ಮಾಡಿದವರಿಗೆ ಹಾಗೂ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದವರಿಗೆ ಗೌರವಿಸುವ ಈ ಕಾರ್ಯ ಶ್ಲಾಘನೀಯವಾಗಿದೆ ಎಂದರು.  

       ಇದೇ ಅವಧಿಯಲ್ಲಿ ಮಹಾವಿದ್ಯಾಲಯದ ಸಂಚಾಲಕರಾದ ಜಿ.ಟಿ ಮಹೇಂದ್ರ​‍್ಪ,ವಿನಾಯಕ ಗಡಾದ,ಸಂಪಕ್ಕ ಹಿರೇಮಠ,ಪತ್ರಕರ್ತರಾದ ನಿಂಗಪ್ಪ ಆರೇರ, ಶ್ರೀಕಾಂತ್ ಸ್ಪೋರ್ಟ್ಸ್‌ ಮಾಲಕರು ದಂಪತಿಗಳಾದ ಶ್ರೀಕಾಂತ್ ಮುಳಗುಂದ ಹಾಗೂ ರೇಣುಕಾ ಮುಳಗುಂದ,ಉದಯ ಪ್ರೀಟಿಂಗೆ ಪ್ರೇಸಿನ ನಿತ್ಯ ಹಿರೇನಠ,ಬಿ.ಇಡಿ ಕಾಲೇಜಿನ ಪ್ರಾಚಾರ್ಯರಾದ ಬಸನಗೌಡ ಪಾಟೀಲ,ಫಾರ್ಮಸಿ ಪ್ರಾಚಾರ್ಯರ ಸಾಯಿಸ್ತಾ ಮೇಡಂ,ಗಣೇಶ್ ಬೆಳಕೇರಿ,ದೇವರಾಜ,ಡಾ. ಸಿ ಎನ್ ಗೌಡರ ಸೇರಿದಂತೆ ಅನೇಕರನ್ನು ಗೌರವಿಸಲಾಯಿತು.ಪ್ರಥಮ ಹಾಗೂ ದ್ವಿತೀಯ ವರ್ಷದ ಬಿಪಿಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. 

             ಈ ಸಂದರ್ಭದಲ್ಲಿ ಬಿ ಪಿ ಇಡಿ ಕಾಲೇಜಿನ ಪ್ರಾಚಾರ್ಯರಾದ ಸಿ ಜಿ ಪೂಜಾರ, ಉಪನ್ಯಾಸಕರಾದ  ಪಿ ಎಸ್ ತಟ್ಟಿ,ಎಮ್ ಕೆ  ಪೂಜಾರ್,ಕೆ ಬಿ ಭಜಂತ್ರಿ, ಅನಿಲಕುಮಾರ,ಕಾವೇರಿ ಅಂಬಿಗೇರ,ಪ್ರಕಾಶ ಹಲಗಲಿ  ಮತ್ತು ಬಿಪಿಡಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.