ಪವರ್ ಮ್ಯಾನ್ಗಳಿಗೆ ಗೌರವ ಸನ್ಮಾನ

ಮೂಡಲಗಿ 15:  ದಿ.14 ರಂದು ದೇಶ ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡ ಶಕ್ತಿಮಾನ್ ಕಾರ್ಯಕ್ರಮದಲ್ಲಿ ವಿದ್ಯುತ್ ಸರಬರಾಜು ಕೇಂದ್ರದ ಶಾಖಾ ಕಛೇರಿಯ ಪವರ್ ಮ್ಯಾನ್ಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಮೂಡಲಗಿ ಮತ್ತು ಕಲ್ಲೋಳಿಯ ವಿದ್ಯುತ್ ಸರಬರಾಜು  ಕೇಂದ್ರದ ಶಾಖಾ ಕಛೇರಿಯ ಲೈನ್ಮ್ಯಾನ್ಗಳಿಗೆ ಯುವ ಬ್ರೀಗೇಡ್ನಿಂದ ಅಭಿನಂದನಾ ಪತ್ರ ನೀಡುವುದರ ಜೊತೆಗೆ ಸಿಹಿ ನೀಡಿ ಗೌರವಿಸಲಾಯಿತು.

     ಈ ಸಂದರ್ಭದಲ್ಲಿ ಯುವ ಬ್ರಿಗೇಡ್ನ ಧಾರವಾಡ ವಿಭಾಗ ಸಂಚಾಲಕ ವರ್ಧಮಾನ್ ತ್ಯಾಗಿ  ಮಾತನಾಡಿ, ಹಗಲು ಇರುಳೆನ್ನದೆ ಶ್ರಮವಹಿಸಿ ತಮ್ಮ ಜೀವವನ್ನು ಪಣಕ್ಕಿಟ್ಟು ಮಳೆ, ಬಿಸಿಲು, ಚಳಿ ಗಾಳಿಗೆ ಮೈಯೊಡ್ಡಿ ಮನೆ ಮನೆಗಳಿಗೆ ಬೆಳಕನ್ನು ನೀಡುವ ಲೈನ್ಮ್ಯಾನ್ಗಳಿಗೆ ಗೌರವ ನೀಡುವ ಉದ್ದೇಶದಿಂದ ಯುವ ಬ್ರಿಗೇಡ್ನ ಸಂಸ್ಥಾಪಕರಾದ ಚಕ್ರವತರ್ಿ ಸೂಲಿಬೆಲೆ ಅವರ ಮಾರ್ಗದರ್ಶನದಲ್ಲಿ ಶಕ್ತಿಮಾನ್ ಕಾರ್ಯಕ್ರಮವನ್ನು ರಾಜ್ಯದ್ಯಾಂತ ಹಮ್ಮಿಕೊಳ್ಳಲಾಗಿದೆ ಎಂದರು.

   ಯುವ ಬ್ರಿಗೇಡ್ ಧರ್ಮ ಜಾಗೃತಿ ಉತ್ತರದ ರಾಜ್ಯ ಸಂಚಾಲಕ ಸಿದ್ದು ಕಲ್ಲೋಳಿ, ಶಾಖಾಧಿಕಾರಿ ಆರ್.ಡಿ. ಫಿಡಾಯಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ಸುಧೀರ ನಾಯರ್,  ಶಾಖಾ ಕಛೇರಿಯ ಆರ್.ಬಿ ಬಾಗೇವಾಡಿ, ಪಿ.ವಾಯ್ ಯಡಹಳ್ಳಿ, ಸಿ.ಬಿ. ಒಂಟಗೂಡಿ, ಎಂ.ಎ. ಶೇಖಬಡೆ, ಲೈನ್ಮ್ಯಾನ್ ಟಿ.ಸಿ ಬೀರಜಾನವರ್, ಎಂ.ಎನ್ ಬಣವಿ, ಯುವ ಜೀವನ ಸೇವ ಸಂಸ್ಥೆಯ ಅಧ್ಯಕ್ಷ ಈರಪ್ಪ ಢವಳೇಶ್ವರ, ಗುರುನಾಥ ಗಂಗನ್ನವರ ಮತ್ತಿತರರು ಉಪಸ್ಥಿತರಿದ್ದರು.