ಹೊಂಕಣ ಗ್ರಾ. ಪಂ. ನೂತನ ಅಧ್ಯಕ್ಷರಾಗಿ ಪರಶುರಾಮ ಅಂಬಿಗೇರ ಆಯ್ಕೆ
ಹಾನಗಲ್ 30: ತಾಲೂಕಿನ ಹೊಂಕಣ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರಶುರಾಮ ಅಂಬಿಗೇರ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪರಶುರಾಮ ಅಂಬಿಗೇರ 6 ಮತ ಗಳಿಸಿ ವಿಜಯಶಾಲಿಯಾದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ ಕೊಂಡೋಜಿ 5 ಮತ ಪಡೆದು ಪರಾಭವಗೊಂಡರು. ತಾಪಂ ಇಒ ಪರಶುರಾಮ ಪೂಜಾರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷರ ಆಯ್ಕೆ ಘೋಷಿಸುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಂಭ್ರಮಾಚರಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಗ್ರಾಪಂ ಸದಸ್ಯರಾದ ಕೋಟೇಶ ಕುಮ್ಮೂರ, ಗೌರಮ್ಮ ಜಾಲಗಾರ, ಪ್ರೇಮಾ ಪೂಜಾರ, ಜಯಮ್ಮ ಅಂಬಿಗೇರ, ತಾಪಂ ಮಾಜಿ ಸದಸ್ಯ ಫಯಾಜ್ ಲೋಹಾರ, ಮುಖಂಡರಾದ ಜಯಣ್ಣ ದ್ಯಾವಣ್ಣನವರ, ರಾಮಚಂದ್ರ ಕಲ್ಲೇರ, ಕುಮಾರ ಕುಮ್ಮೂರ, ರಾಮಚಂದ್ರ್ಪ ಹೊಸಳ್ಳಿ, ಸಿದ್ದಣ್ಣ ಜಾಲಗಾರ, ಸುರೇಶ ಕಟ್ಟಿಮನಿ, ಅಶೋಕ ಕಿರವಾಡಿ, ಗೀರೀಶ ದೊಡ್ಡಮನಿ, ನಾಗರಾಜ ಬಾರ್ಕಿ, ದೇವರಾಜ ಬಾರ್ಕಿ, ಬಂಗಾರಿ ಬಾರ್ಕಿ,ನಾಗಪ್ಪ ಅಂಬಿಗೇರ, ಧರ್ಮಪ್ಪ ರೊಟ್ಟಿ, ಶಿವನಾಗಪ್ಪ ಕಬ್ಬೂರ ಸೇರಿದಂತೆ ಅನೇಕರಿದ್ದರು.