ಧಾರವಾಡ, 20: ವಿದ್ಯಾಥರ್ಿಗಳೊಂದಿಗೆ ಹಾಡಿ, ಕುಣಿದು, ಕುಣಿಸಿ ಸಂಭ್ರಮಿಸಿ ಕಲಿಕಾಂಶಗಳನ್ನು ಬಿತ್ತುವ ವಿಪುಲ ಅವಕಾಶ ನಲಿಕಲಿ ಬೋಧನೆಯಲ್ಲಿದೆ. ವಿದ್ಯಾಥರ್ಿಗಳು ತರಗತಿ ಕಲಿಕೆಯಲ್ಲಿ ಸಕ್ರೀಯಗೊಂಡು ಅವರ ಕಲಿವಿನ ಫಲ ಸಂವರ್ಧನೆಗೆ ಪೂರಕವಾದ ನಲಿಕಲಿ ಒಂದು ವೈಜ್ಞಾನಿಕ ಕಲಿಕಾ ವಿಧಾನವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಪ್ರತಿಪಾದಿಸಿದರು.
ಅವರು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಕನರ್ಾಟಕ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ನಗರದ ಡಯಟ್ದಲ್ಲಿ ಹಮ್ಮಿಕೊಂಡಿರುವ 6 ದಿನಗಳ ಬೆಳಗಾವಿ ವಿಭಾಗ ಮಟ್ಟದ ನಲಿಕಲಿ ಮೈಕ್ರೋ ಅಧ್ಯಯನ ತರಬೇತಿ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡುತ್ತಿದ್ದರು. ಸ್ಪಷ್ಟ ಓದು, ಶುದ್ಧ ಬರಹ, ಗಣಿತದ ಮೂಲಕ್ರಿಯೆಗಳ ಅರಿವಿನೊಂದಿಗೆ ಆರಂಭದ ಕಲಿಕೆಗೆ ನಲಿಕಲಿ ಭದ್ರ ಬುನಾದಿ ಒದಗಿಸುತ್ತದೆ. ಎಲ್.ಕೆ.ಜಿ. ಓದುತ್ತಿರುವ ತಮ್ಮ ಮಗನಿಗೆ ಮನೆಯಲ್ಲಿ ನಲಿಕಲಿ ವಿಧಾನದ ಮೂಲಕವೇ ಕನ್ನಡವನ್ನು ಅತ್ಯಂತ ಯಶಸ್ವಿಯಾಗಿ ಕಲಿಸಿದ ಪ್ರಯೋಗದ ಸಫಲತೆಯನ್ನು ಅವರು ಹಂಚಿಕೊಂಡರು.
ನಲಿಕಲಿ ಕಲಿಕಾ ಯೋಜನೆ ಕುರಿತು ನಮ್ಮ ಶಿಕ್ಷಕ-ಶಿಕ್ಷಕಿಯರಲ್ಲಿ ದ್ವಂದ್ವಗಳಿವೆ. ಕೇಂದ್ರ್ರ ಮತ್ತು ರಾಜ್ಯ ಸರಕಾರಗಳು ರೂಪಿಸುವ ವಿದ್ಯಾಥರ್ಿಗಳ ಕಲಿಕಾ ಗುಣಮಟ್ಟ ವಿಕಾಸದ ಯೋಜನೆಗಳನ್ನು ಸ್ವೀಕರಿಸಿ ಅವುಗಳ ಆಶಯವನ್ನು ಮುಕ್ತವಾಗಿ ಸ್ವೀಕರಿಸುವ ಮನಸ್ಥಿತಿ ಇಲ್ಲದ್ದರಿಂದ ಯೋಜನೆಗಳು ವಿಫಲಗೊಳ್ಳುತ್ತವೆ. ನಲಿಕಲಿ ಯೋಜನೆ ಸಮಸ್ತ ಶಿಕ್ಷಕ ಸಂಕುಲದ ಮನಸ್ಥಿತಿಯ ಒಳಅಂತಸ್ತಿನಲ್ಲಿ ಸ್ವೀಕಾರಗೊಂಡರೆ ಮಾತ್ರ ಅದು ಯಶಸ್ವಿಯಾಗುತ್ತದೆ ಎಂದರು.
ಮುಕ್ತವಾಗಿ ಮಾತನಾಡಲಿ : ತರಗತಿಯಲ್ಲಿ ವಿದ್ಯಾಥರ್ಿಗಳು ಮುಕ್ತವಾಗಿ ಮಾತನಾಡಲು ಶಿಕ್ಷಕರು ಅವಕಾಶ ಕಲ್ಪಿಸಬೇಕು. ತಮ್ಮ ಕುಟುಂಬ, ಗ್ರಾಮದ ಬಗೆಗೆ ವಿವರವಾಗಿ ಹೇಳುವ ಸಾಮಥ್ರ್ಯವನ್ನು ವಿದ್ಯಾಥರ್ಿಗಳು ಹೊಂದಬೇಕು. ಪ್ರಾಥಮಿಕ ಶಾಲಾ ಹಂತದಿಂದಲೇ ಜ್ಞಾನಾರ್ಜನೆಗೆ ಪೂರಕವಾದ ಪಠ್ಯದ ಆಚೆಗಿನ ಹೆಚ್ಚ್ಚಿನ ಓದು ವಿದ್ಯಾಥರ್ಿಗಳಲ್ಲಿ ಬೆಳೆದು ಬರಬೇಕು. ತಮ್ಮ ತರಗತಿಯ ಪಠ್ಯಕ್ರಮದ ವ್ಯಾಸಂಗದೊಂದಿಗೆ ವಿದ್ಯಾಥರ್ಿಗಳು ಸಾಹಿತ್ಯದ ಓದಿನತ್ತ ತೆರೆದುಕೊಳ್ಳಬೇಕು. ಸಣ್ಣಕತೆ, ಹನಿಗವನ, ಪ್ರಬಂಧ, ಕಾದಂಬರಿ, ಸಾಮಾನ್ಯ ಜ್ಞಾನ ಸೇರಿದಂತೆ ಪಠ್ಯ ಪೂರಕವಾದ ಹಾಗೂ ಇತರೇ ಸಾಹಿತ್ಯದ ಅಧ್ಯಯನ ಮಕ್ಕಳ ವ್ಯಕ್ತಿತ್ವ ವಿಕಾಸದ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತದೆ ಎಂದೂ ಮೇಜರ್ ಸಿದ್ದಲಿಂಗಯ್ಯ ಹೇಳಿದರು.
ರಾಜ್ಯ ಮಟ್ಟದ ತರಬೇತಿ ಸಂಸ್ಥೆ ಸಿಸ್ಲೆಪ್-ಕನರ್ಾಟಕದ ನಿದರ್ೆಶಕ ಬಿ.ಎಸ್. ರಘುವೀರ ಮಾತನಾಡಿ, ಈಗಾಗಲೇ ಮೊದಲ ಹಂತದಲ್ಲಿ ರಾಜ್ಯದಲ್ಲಿ 53 ಸಾವಿರ ಶಾಲೆಗಳಲ್ಲಿ ಮೈಕ್ರೋ ಅಧ್ಯಯನ ಜರುಗಿದ್ದು, ಪ್ರಸ್ತುತ 2ನೆಯ ಹಂತದಲ್ಲಿ 9 ಸಾವಿರ ಶಾಲೆಗಳಲ್ಲಿ ನಡೆಯುತ್ತಿದ್ದು, ಎಲ್ಲರೂ ಈ ಅಧ್ಯಯನದ ಮೂಲಕ ವಸ್ತುನಿಷ್ಠ ವರದಿ ನೀಡಬೇಕು ಎಂದರು.
ಶಿಕ್ಷಣ ಇಲಾಖೆಯ ಬೆಳಗಾವಿ ಸಿಟಿಇ ಪ್ರಿನ್ಸಿಪಾಲ್ ಮತ್ತು ಜಂಟಿ ನಿದರ್ೆಶಕಿ ಮಮತಾ ನಾಯಕ ಮಾತನಾಡಿ, ನಲಿಕಲಿ ಆರಂಭಗೊಂಡಾಗಿನಿಂದಲೂ ರಾಜ್ಯದಲ್ಲಿ ಮಕ್ಕಳ ಶಾಲೆ ಬಿಡುವ ಪ್ರಮಾಣ ಕುಗ್ಗಿದೆ. ಶಿಸು ಕೇಂದ್ರೀತ ಶಿಕ್ಷಣದಲ್ಲಿ ಸಾಮಾನ್ಯ ಕುಟುಂಬದಿಂದ ಬಂದ ವಿದ್ಯಾಥರ್ಿಗಳಲ್ಲಿಯೂ ಕಲಿವಿನ ಫಲ ಅಧಿಕಗೊಂಡಿದೆ ಎಂದರು.
ಡಯಟ್ ಪ್ರಾಚಾರ್ಯ ಅಬ್ದುಲ್ ವಾಜೀದ್ ಖಾಜಿ ಅಧ್ಯಕ್ಷತೆ ವಹಿಸಿದ್ದರು. ಡಯಟ್ ಉಪಪ್ರಾಚಾರ್ಯ ಜಿ.ಎಂ. ವೃಷಭೇಂದ್ರಯ್ಯ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಆರ್.ಡಿ. ರವೀಂದ್ರ ಮಾತನಾಡಿದರು. ಮಂಗಳಾ ಪಾಟೀಲ. ಜೆ.ಜಿ. ಸೈಯ್ಯದ್, ಎಚ್.ಎಚ್. ಮೇಟಿ, ವಿಜಯಲಕ್ಷ್ಮಿ ಹಂಚಿನಾಳ, ಸಾವಿತ್ರಿ ಕೋಳಿ, ಗಾಯತ್ರಿ ಕಾಮಕರ, ಎಂ.ಎ.ಕುಲಕಣರ್ಿ, ಡಾ.ರೇಣುಕಾ ಅಮಲಝರಿ, ಸುಗಂಧಾ ದೊಡಮನಿ, ಉಮಾದೇವಿ ಕಲಕೋಟಿ, ಎ.ವ್ಹಿ. ನಾಗನೂರ, ಬಿ.ಸಿ. ಭಜಂತ್ರಿ, ಅಪ್ಪಯ್ಯ ತಿಗಡಿ, ಲಲಿತಾ ಹಲರ್ಾಪೂರ, ಛಾಯಾ ಸೂರ್ಯವಂಶಿ ಇದ್ದರು.
ಹಿರಿಯ ಉಪನ್ಯಾಸಕ ವೈ.ಬಿ.ಬಾದವಾಡಗಿ ಸ್ವಾಗತಿಸಿದರು. ಜೀವನ ಶಿಕ್ಷಣ ಮಾಸಪತ್ರಿಕೆಯ ಜಂಟಿ ಸಂಪಾದಕ ಗುರುಮೂತರ್ಿ ಯರಗಂಬಳಿಮಠ ನಿರೂಪಿಸಿದರು. ತರಬೇತಿ ಶಿಬಿರದ ನೋಡಲ್ ಅಧಿಕಾರಿ ಅಶೋಕಕುಮಾರ ಸಿಂದಗಿ ವಂದಿಸಿದರು.