ಮನೆಮದ್ದು ಸ್ವಸ್ಥವೃತ್ತ ಅರಿವು ಕಾರ್ಯಕ್ರಮ

ಧಾರವಾಡ01:  ತಾಲೂಕಿನ ಅಮ್ಮಿನಭಾವಿಯಲ್ಲಿ ನಡೆದ ಆಯುಷ್ ಇಲಾಖೆಯ ಮನೆಮದ್ದು ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಸದಸ್ಯರಾದ ಬಸವರಾಜ ತೀದಿ ಕಾರ್ಯಕ್ರಮ ಉದ್ಘಾಟಿಸಿ, ಔಷಧಿ ಸಸ್ಯಗಳ ಬಳಕೆಯನ್ನು ಹೆಚ್ಚು ಹೆಚ್ಚು  ನಾವು ಇಂದಿನ ದಿನಗಳಲ್ಲಿ ಉಪಯೋಗಿಸಬೇಕು ಇದರಿಂದ ಔಷಧಿ ಸಸ್ಯಗಳು ಉಳಿಯುತ್ತವೆ ಮತ್ತು ಅದರಿಂದ ನಮ್ಮ ಆರೋಗ್ಯವು ಸುಧಾರಿಸುತ್ತದೆ ಎಂದು ಹೇಳಿದರು.

   ಡಾ. ಸವಿತಾ ಹುಣಸಿಮರದ ಅವರು ವಿವಿಧ ರೀತಿಯ ಔಷಧಿ ಸಸ್ಯಗಳ ಉಪಯೋಗ ಮತ್ತು ಅವುಗಳಿಂದ ಯಾವ ರೀತಿಯ ರೋಗಗಳಿಗೆ ಔಷಧಿ ತಯಾರಿಕೆಯ ಕುರಿತು ವಿವರಣೆ ನೀಡಿದರು. ಔಷಧಿಯ ಸಸ್ಯಗಳಾದ ಇನ್ಸುಲಿನ್, ಮಧುನಾಸಿನಿ, ಮದರಂಗಿ, ಲೋಳೆಸರ, ತುಳಸಿ, ಜಪಾನಿಮಿಂಟು, ಸ್ಟೀಮಿಯಾ ಮುಂತಾದವುಗಳನ್ನು ಗ್ರಾಮಸ್ಥರಿಗೆ ನೀಡಿ ಅವುಗಳನ್ನು ಸರಿಯಾಗಿ ಬೆಳಸಿ ಅವುಗಳ ಉಪಯೋಗ ಪಡೆಯಿರಿ ಎಂದು ತಿಳಿಸಿದರು.  ಹಿರಿಯರಾದ ಬಸಪ್ಪ ಅರಳಿಕಟ್ಟಿ ಉಪಸ್ಥಿತರಿದ್ದರು. ಶಿವನಗೌಡ ಹಿರೇಗೌಡರ ವಂದಿಸಿದರು.