ಗೃಹ ಸಚಿವ ಅಮಿತ್ ಶಾ. ಹಾಗೂ ಸಿ.ಟಿ.ರವಿ ಹುದ್ದೆಯಿಂದ ವಜಾಮಾಡಿ :ದಲಿತ ಸಂಘಟನೆಯಿಂದ ರಾಷ್ಟ್ರಪತಿಗಳಿಗೆ ಮನವಿ

Home Minister Amit Shah. And dismiss CT Ravi from his post: Petition to the President by Dalit orga

ಗೃಹ ಸಚಿವ ಅಮಿತ್ ಶಾ. ಹಾಗೂ ಸಿ.ಟಿ.ರವಿ ಹುದ್ದೆಯಿಂದ ವಜಾಮಾಡಿ :ದಲಿತ ಸಂಘಟನೆಯಿಂದ ರಾಷ್ಟ್ರಪತಿಗಳಿಗೆ ಮನವಿ 

ಮುಂಡಗೋಡ 24: ಲೋಕಸಭೆಯಲ್ಲಿ ಅಂಬೇಡ್ಕರವರಿಗೆ ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬೆಳಗಾವಿ ಸುವರ್ಣ ವಿಧಾನ ಪರಿಷತ್ನಲ್ಲಿ ಹೆಣ್ಣು ಮಗಳಿಗೆ ಆಶ್ಲೀಲ ಪದ ಬಳಸಿ ಅಪಮಾನ ಮಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರ ವರ್ತನೆಯನ್ನು ಡಿಎಸ್‌ಎಸ್ ಖಂಡಿಸುತ್ತದೆ ದೊಡ್ಡಹುದ್ದೆಲ್ಲಿರುವ ಇಬ್ಬರನ್ನು ತಕ್ಷಣ ಅವರ ಹುದ್ದೆಯಿಂದ ವಜಾಗೊಳಿಸಿ ಆಗತ್ಯ ಕಾನೂನು ಕ್ರಮ ಜರೂಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಸ್‌.ಫಕ್ಕಿರ​‍್ಪ ನೇತೃತದಲ್ಲಿ ರಾಷ್ಟ್ರಪತಿಯವರಿಗೆ, ಪ್ರಧಾನಮಂತ್ರಿಗಳಿಗೆ ರಾಜ್ಯಮುಖ್ಯಮಂತ್ರಿಗಳಿಗೆ ಹಾಗೂ ವಿಧಾನ ಪರಿಷತ್ ಸಭಾಪತಿಯವರಿಗೆ ತಹಶೀಲ್ದಾರ ಮುಖಾಂತರ ಮನವಿ ನೀಡಲಾಯಿತು. 

   ಕೇಂದ್ರ ಸರ್ಕಾರದ ಗೃಹ ಸಚಿವರಾದ ಅಮಿತ್ ಶಾ ಲೋಕಸಭೆಯ ಕಲಾಪದಲ್ಲಿ ಮಾತನಾಡುತ್ತಿರುವಾಗ ಅಂಬೇಡ್ಕರ, ಅಂಬೇಡ್ಕರ, ಅಂಬೇಡ್ಕರ, ಎಂದು ಹೇಳುವುದು ಇತ್ತೀಚಿಗೆ ಕೆಲವರಿಗೆ ಫ್ಯಾಷನ್ ಆಗಿದೆ. ಅಂಬೇಡ್ಕರ ಬದಲು ದೇವರ ಹೆಸರು ಹೇಳಿದ್ದರೆ, ಏಳೇಳು ಜನ್ಮದಲ್ಲೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಹೇಳಿ ಸಂವಿಧಾನ ಶಿಲ್ಪಿ, ಭಾರತ ರತ್ನ, ಸಮಾಜಿಕ ನ್ಯಾಯದ ಹರಿಕಾರ, ಭಾರತದ ನವ ನಿರ್ಮಾಣದ ನಿರ್ಮಾಪಕ, ಸಮ ಸಮಾಜದ ನಿರ್ಮಾಣ ಮಾಡಿದ ಮಹಾನ ಜಾತ್ಯಾತೀತ ನಾಯಕ, ವಿಶ್ವಜ್ಞಾನಿ, ಡಾಽ ಬಿ.ಆರ್‌.ಅಂಬೇಡ್ಕರವರಿಗೆ ಲೋಕಸಭೆಯಲ್ಲಿ ಅಪಮಾನ ಮಾಡಿರುವುದನ್ನು ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಉತ್ತರ ಕನ್ನಡ ಜಿಲ್ಲಾ ಶಾಖೆಯು ಖಂಡಿಸುತ್ತದೆ.  

ಸಾವಿರಾರು ವರ್ಷಗಳಿಂದ ಯಾವುದೇ ರಾಜರು, ದೈವ ಮತ್ತು ದೇವರು ಭಾರತದ ಜನರಿಗೆ ಅಶುಷ್ಯರತೆ, ಅಸಮಾನತೆ, ಹ್ಯಾತಿಯತೆ, ಲಿಂಗ ತಾರತಮ್ಯ, ದೌರ್ಜನ್ಯ, ದಬ್ಬಾಳಿಕೆ, ಎಂತಹ ಅಮಾನವಿಯ ಅನಿಷ್ಠ ಪದ್ಧತಿಗಳನ್ನು ಮುಕ್ತಿಗೊಳಿಸಿ ಸಮಾಜಿಕ ನ್ಯಾಯಾ ಮತ್ತು ಸಮಾನತೆ ಕೊಡದೆ ಇರುವ ಶಕ್ತಿಗಳನ್ನು ಮೀರಿ ಡಾಽ ಬಾಬಾ ಸಾಹೇಬ ಅಂಬೇಡ್ಕರವರು ಸಂವಿಧಾನ ಬರೆಯುವ ಮೂಲಕ ಭಾರತ ದೇಶದ ಜನತೆಗೆ ಸಮಾನತೆ, ಸಮಾಜಿಕ ನ್ಯಾಯಾ, ಸೇರಿದಂತೆ ರಾಜಕೀಯ, ಸ್ವಾತಂತ್ರ್ಯವ ಕೊಟ್ಟದ್ದಾರೆ. ಡಾ? ಬಾಬಾ ಸಾಹೇಬ ಅಂಬೇಡ್ಕರವರು ಬರೆದಿಂತಹ ಸಂವಿಧಾನದ ಅಡಿಯಲ್ಲಿ ಲೋಕಸಭೆ ಮತ್ತು ವಿಧಾನ ಸಭೆಗಳು ರಚನೆ ಈ ಶ್ರೀ ಅಮಿತ್ ಶಾ ಕೇಂದ್ರ ಗೃಹ ಮಂತ್ರಿಯಾಗಿ ಅಧಿಕಾರ ನಡೆಸುತ್ತಿರುವುದು ಡಾಽಽ ಅಂಬೇಡ್ಕರವರು ಬರೆದ ಸಂವಿಧಾನದ ಅಡಿಯಲ್ಲಿ ಈ ಎಲ್ಲ ಸತ್ಯ ಗೊತ್ತಿದ್ದರು ಅಮಿತ್ ಶಾ ರವರು ರವರಿಗೆ ಅಪಮಾನ ಮಾಡಿರುವುದು ದೇಶದ ಬಹು ಸಂಖ್ಯಾತ ಜನರಿಗೆ ಮತ್ತು ಅಂಬೇಡ್ಕರ ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿದೆ. 

 ಮತ್ತು ಕರ್ನಾಟಕ ವಿಧಾನ ಪರಿಷತ್ ನಲ್ಲಿ ಅಂಬೇಡ್ಕರವರಿಗೆ ಅಪಮಾನ ಮಾಡಿದ ಅಮಿತ್ ಶಾ ರವರೆ ಬಗ್ಗೆ ಚರ್ಚೆಯಾಗುತ್ತಿರುವಾಗ ಪರಿಷತ್ ಸದಸ್ಯರಾದ ಸಿ.ಟಿ.ರವಿ ಇವರು ಅಮಿತ್ ಶಾ ರವರನ್ನು ಸರ್ಮತನೆ ಮಾಡಿಕೊಂಡು ಅಂಬೇಡ್ಕರ ರವರ ಅಪಮಾನದ ವಿಷಯವನ್ನು ವಿಷಯಾಂತರ ಮಾಡಿ ಮಾತನಾಡುತ್ತಾ ಇವರ ಮಾತಿಗೆ ಪ್ರತಿರೋದ ವಡ್ಡಿದ ಲಕ್ಷ್ಮೀ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿಗೆ ಅಶ್ಲೀಲ ಪದ ಬಳಸಿ ಹೆಣ್ಣು ಮಗಳಿಗೆ ಅಪಮಾನ ಮಾಡಿದ ಸಿ.ಟಿ.ರವಿ ಇವರ ಈ ಕೃತ್ಯವನ್ನು ಖಂಡಿಸುತ್ತೇವೆ.ಆದ್ದರಿಂದ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಅಮಿತ್ ಶಾ ಕೇಂದ್ರ ಗೃಹ ಮಂತ್ರಿ ಸ್ಥಾನದಿಂದ ಇವರನ್ನು ವಜಾ ಗೊಳಿಸಲು ಮತ್ತು ಸಿ.ಟಿ.ರವಿ ವಿಧಾನ ಪರಿಷತ್ ಸದಸ್ಯತ್ವದಿಂದ ಇವರನ್ನು ವಜಾ ಗೊಳಿಸಲು ಹಾಗೂ ಇವರಿಬ್ಬರ ಮೇಲೆ ಅಗತ್ಯ ಕಾನೂನು ಕ್ರಮ ಜರಗಿಸಲು ಸರ್ಕಾರವನ್ನು ಒತ್ತಾಯಿಸುತ್ತೇವೆ. ಎಂದು ತಿಳಿಸಿದ್ದಾರೆ.  

  ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಎಸ್‌.ಫಕ್ಕೀರ​‍್ಪ, ಜಿಲ್ಲಾ ಸಂಚಾಲಕರಾದ ಗೋಪಾಲ ನಡಕಿನಮನಿ, ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಸಂತೋಷ ಕಟ್ಟಿಮನಿ, ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಸಂಗೀತಾ ವಾಗೋರೆ, ತಾಲೂಕಾ ಸಂಚಾಲಕ ಜೂಜೆ ಸಿದ್ದಿ, ಪ್ರಭು ಅರಶಿಣಗೇರಿ, ವಿರುಪಾಕ್ಷಯ್ಯ ಹಿರೇಮಠ ಹಾಗೂ  ಉಪಸ್ಥಿತರಿದ್ದರು.