ಬೀಳಗಿಯಲ್ಲಿ ರಂಗೇರಿದ ಹೋಳಿ ಉತ್ಸವ
ಬೀಳಗಿ 14 : ಪಟ್ಟಣದಲ್ಲಿ ಪ್ರಥಮ ಬಾರಿಗೆ ಹೋಳಿ ಉತ್ಸವವನ್ನು ಬಾಗಲಕೋಟೆ ಮಾದರಿಯಲ್ಲಿ ಯಶಸ್ವಿಯಾಗಿ ಆಚರಿಸಲಾಯಿತು. ಈ ಉತ್ಸವಕ್ಕೆ ಖ್ಯಾತ ಟಿ.ವಿ ಹಾಗೂ ಯೂಟುಬ್ ತಾರೆ ಪ್ರಿಯಾ ಸೌದಿ ಮತ್ತು ತನುಶ್ರೀ ಆಗಮಿಸಿ ಸಾಂಪ್ರದಾಯಿಕ ಬಣ್ಣದ ಹಬ್ಬದಲ್ಲಿ ಭಾಗವಹಿಸಿ ಸಾಂಪ್ರದಾಯಕ ಉತ್ಸವದ ಹಾಡುಗಳನ್ನು ಹಾಡಿ, ನೃತ್ಯ ಮಾಡಿ ರಂಜಿಸಿ ಹೋಳಿ ಹಬ್ಬಕ್ಕೆ ಮೆರಗು ತಂದರು. ಪಟ್ಟಣದ ಜನತೆ ಕುಣಿದು ಕುಪ್ಪಳಿಸಿ ಹೋಳಿ ಉತ್ಸವ ರಂಗೇರಿಸಿದರು. ಪಟ್ಟಣದ ಸಮಸ್ತ ವ್ಯಾಪಾರಸ್ಥರು, ನಾಗರಿಕರು, ಹಿರಿಯರು ಹಾಗೂ ಯುವಕ, ಯುವತಿಯರ ಸಹಯೋಗದಲ್ಲಿ ಪ್ರವೀಣ ಪಾಟೀಲ್ ನೇತ್ರತ್ವದಲ್ಲಿ ಹೋಳಿ ಹಬ್ಬ ಕಲರ್ ಪೂಲ್ ಅದ್ಧೂರಿಯಾಗಿ ಜರುಗಿತು. ಪಟ್ಟಣದ ಬಸ್ಸ್ ನಿಲ್ದಾಣ ಎದುರಿಗೆ ಆಯೋಜಿಸಿದ ಬೃಹತ್ ವೇದಿಕೆಯಲ್ಲಿ ಖ್ಯಾತ ಟಿ.ವಿ ಹಾಗೂ ಯೂಟುಬ್ ತಾರೆ ಪ್ರಿಯಾ ಸೌದಿ ಮತ್ತು ತನುಶ್ರೀ ಸಾಂಪ್ರದಾಯಕ ಹಾಡುಗಳಿಗೆ ನೃತ್ಯ ಮಾಡಿ ಪಡೆ ಹುಡುಗರ ಮನ ಸೆಳೆದು ಮಜಾ ನೀಡಿದರು. ಪೊಲೀಸ್ ಬಂದುಬಸ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದೇ ಸರಳವಾಗಿ ಆಚರಿಸಲಾಯಿತು. ಎರಡು ಬಾರಿ ಪೊಲೀಸ್ ಲಾಟಿಯ ರುಚಿಯು ಕೆಲವರ ಮೇಲೆ ಪ್ರಯೋಗವಾಯಿತು. ಯುವಕರು, ಯುವತಿಯರು, ಮುದ್ದು ಮಕ್ಕಳು ಸೇರಿದಂತೆ ಕೆಲವರು ಹಲಿಗೆ ಬಾರಿಸುವುದರಲ್ಲಿ ತಲ್ಲಿನರಾದರೆ ಇನ್ನೂ ಕೆಲವರು ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಸಂಭ್ರಮಿಸಿದರು. ಅಂಗಡಿ ಮುಂಗಟ್ಟುಗಳು ಸ್ವಯಂ ಸಂಪೂರ್ಣ ಬಂದ್ ಆಗಿದ್ದವು. ಈ ಹಬ್ಬದ ಆಚರಣೆಯಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ಬೀಳಗಿಯ ಹೋಳಿ ಉತ್ಸವಕ್ಕೆ ಮೆರಗು ತಂದರು. ಬೆಳಗ್ಗೆ 09 ಗಂಟೆಗೆ ಪ್ರಾರಂಭಗೊಂಡ ಉತ್ಸವ ಮಧ್ಯಾಹ್ನ 3 ಗಂಟೆಗೆ ಮುಕ್ತಾಯ ಗೊಳಿಸಲಾಯಿತು. ಶ್ರೀಶೈಲ ದಳವಾಯಿ, ಹನಮಂತ ಜಲ್ಲಿ, ಪಡಿಯಪ್ಪ ಕಳ್ಳಿಮನಿ, ರವಿಕುಮಾರ್ ನಾಗನಗೌಡರ, ಬಿ.ಎಸ್. ಬಿರಾದಾರ, ಸಿದ್ದು ಮಾದರ, ರಫೀಕ ಮುಜಾವರ, ಮನೋಜ ಹಾದಿಮನಿ ಆನಂದ ಮುಳವಾಡ, ಆನಂದ ಮಂಟೂರ, ರಮೇಶ ಕೆಸರಕೊಪ್ಪ, ಮಲ್ಲು ಲಮಾಣಿ, ನಾಗೇಶ ಶಿಡ್ಲನ್ನವರ ಜೈಭೀಮ್ ರಾಜವರ್ಧನ, ಕಿರಣ ಗಂಜ್ಯಾಳ, ಮಹೆಬೂಬ ನಿಂಬಾಳ್ಕರ, ಕರುಣ ಮಂಟೂರ ಸೇರಿದಂತೆ ಅನೇಕರು ಇದ್ದರು.