ಮರುಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ
ರಾಣಿಬೆನ್ನೂರ:10 ಸ್ವಚ್ಚತೆ, ಸೌಂಧರ್ಯಿಕರಣ ಸೇರಿದಂತೆ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ಮು, ಈ ಹಿನ್ನಲೆಯಲ್ಲಿ ಈಗಾಗಲೇ ನಗರಸಭೆ ಅಧಿಕಾರಿಗಳೊಂದಿಗೆ ಕಾರ್ಯೋನ್ಮುಖರಾಗಿ ಸೇವೆ ಮಾಡುತ್ತಿರುವೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಶನಿವಾರ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ವಿಭಾಗದಿಂದ ಇಲ್ಲಿನ ಮೆಡ್ಲೇರಿ ರಸ್ತೆಗಾಗಿ ಅಂದಾಜು 2.40 ಕೋಟಿ ರೂಪಾಯಿ ಅನುದಾನದಲ್ಲಿ ಮತ್ತು ಹಳೆ ಪಿಬಿ ರಸ್ತೆಯ ರೋಟರಿ ಶಾಲಾ ಹತ್ತಿರ 3.60 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಮರುಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ನಗರದ ಹೊರವಲಯದ ದೊಡ್ಡಕೇರಿ ಸವಾಂರ್ಗಣ ಅಭಿವೃದ್ದಿಗೆ ಈಗಾಗಲೇ ಸರ್ಕಾರದಿಂದ 9 ಕೋಟಿ ರೂ ಮಂಜೂರಾತಿ ದೊರೆತಿದ್ದು, ಕಾಮಗಾರಿ ಕೈಗೊಳ್ಳಲಾಗುವುದು. ಜೊತೆಗೆ ನಗರದ ಎಲ್ಲಾ ವಾರ್ಡುಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗುವುದಾಗಿ ಹೇಳಿದರು
ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು . ತಮಗೆ ನಿಗದಿಪಡಿಸಿದ ಆರು ತಿಂಗಳ ಸಮಯದವರೆಗೆ ಈ ಕಾಮಗಾರಿ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ಕಳಪೆಯಾದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಜೊತೆಗೆ ಕಪ್ಪು ಪಟ್ಟಿಗೂ ಸೇರಿಸಲು ಹಿಂಜರಿಯುವುದಿಲ್ಲ ಎಂದರು.
ನಗರಸಭಾಧ್ಯಕ್ಷೆ ಚಂಪಕ ರಮೇಶ್ ಬಿಸ್ಲಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಶಶಿಧರ ಬಸೇನಾಯ್ಕರ ಮತ್ತು ಕಾಂಗ್ರೇಸ್ ಮುಖಂಡರಾದ ರಾಜಣ್ಣ ಮೋಟಗಿ. ರಮೇಶ ಬಿಸ್ಲಳ್ಳಿ, ಗುತ್ತಿಗೆದಾರರಾದ ಜಿ.ವಿ ಪ್ರಕಾಶ, ಕೆ.ಯು. ಮಂಜೇಶ್ವರ ಸೇರಿದಂತೆ ಮತ್ತಿತರರು ಇದ್ದರು.ಫೋಟೊ:10ಆರ್‌ಎನ್‌ಆರ್01ರಾಣಿಬೆನ್ನೂರ: ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ವಿಭಾಗದಿಂದ ಇಲ್ಲಿನ ಹಳೆ ಪಿಬಿ ರಸ್ತೆಯ ರೋಟರಿ ಶಾಲಾ ಹತ್ತಿರ 3.60 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಮರುಡಾಂಬರೀಕರಣ ಕಾಮಗಾರಿಗೆ ಶಾಸಕ ಪ್ರಕಾಶ ಕೋಳಿವಾಡ ಗುದ್ದಲಿ ಪೂಜೆ ನೆರವೇರಿಸಿದರು.-1-