ಹಾಕಿ ಟೆಸ್ಟ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ


ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಭಾರತ ಹಾಕಿ ತಂಡ ಭರ್ಜರಿ ಜಯಗಳಿಸು ಮೂಲಕ ಸರಣಿಯನ್ನು ವೈಟ್ ವಾಶ್ ಮಾಡಿದೆ. 

ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಕ್ರೀಡಾಂಗಣದಲ್ಲಿ ನಡೆದ 3ನೇ ಪಂದ್ಯದಲ್ಲಿ ಭಾರತದ ಪರ ರೂಪಿಂದರ್ ಸಿಂಗ್ (8ನೇ ನಿಮಿಷ), ಸುರೇಂದ್ರ ಕುಮಾರ್ (15ನೇ ನಿಮಿಷ), ಮನದೀಪ್ ಸಿಂಗ್ (44ನೇ ನಿಮಿಷ) ಹಾಗೂ ಆಕಾಶ್ ದೀಪ್ ಸಿಂಗ್ (60ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 4-0 ಅಂತರದಲ್ಲಿ ಮಣಿಸಿದೆ. ಅಷ್ಟು ಮಾತ್ರವಲ್ಲದೆ 3 ಪಂದ್ಯಗಳ ಹಾಕಿ ಟೆಸ್ಟ್ ಸರಣಿಯನ್ನು ಭಾರತ ವೈಟ್ ವಾಶ್ ಮಾಡಿದೆ. ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದ ಪಿ. ಆರ್. ಶ್ರೀಜೇಶ್ ಬಳಗ ಆರಂಭಿಕ ಮುನ್ನಡೆ ಪಡೆಯಿತು. ಮೊದಲ ನಿಮಿಷದಲ್ಲೇ ತನಗೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಭಾರತ ಎಡವಿತು. 8ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಡ್ರ್ಯಾಗ್ ಫ್ಲಿಕ್ ಪರಿಣತ ರೂಪಿಂದರ್ ಗೋಲಾಗಿ ಪರಿವತರ್ಿಸಿದರು. ಅವರು ಬಾರಿಸಿದ ಚೆಂಡು ನ್ಯೂಜಿಲೆಂಡ್ ಗೋಲ್ಕೀಪರ್ ರಿಚಡರ್್ ಜಾಯ್ಸ್ ಅವರ ಕಣ್ತಪ್ಪಿಸಿ ಗೋಲುಪೆಟ್ಟಿಗೆ ಸೇರಿತು. ಈ ಮೂಲಕ ರೂಪಿಂದರ್, ಸರಣಿಯಲ್ಲಿ ನಾಲ್ಕು ಗೋಲುಗಳನ್ನು ದಾಖಲಿಸಿದರು. ಭಾರತ ಮುನ್ನಡೆ ಸಾಧಿಸಿತು.  

ಆತಿಥೇಯ ತಂಡ ಮತ್ತೆ ತನ್ನ ಪ್ರಾಬಲ್ಯ ಮುಂದುವರಿಸಿತು. 15ನೇ ನಿಮಿಷದಲ್ಲಿ ರೂಪಿಂದರ್ ತಮ್ಮತ್ತ ತಳ್ಳಿದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಸುರೇಂದರ್ ಕುಮಾರ್ ಅದನ್ನು ಗುರಿ ಸೇರಿಸಿ ತಂಡದ ಆಟಗಾರರಲ್ಲಿ ಸಂತಸ ಮೂಡಿಸಿದರು.  ಮೂರನೇ ಕ್ವಾರ್ಟರ್ನಲ್ಲಿ ಭಾರತದ ಆಟ ರಂಗೇರಿತು. 44ನೇ ನಿಮಿಷದಲ್ಲಿ ಸದರ್ಾರ್ ಸಿಂಗ್ ಹಾಗೂ ಸಿಮ್ರನ್ಜೀತ್ ಸಿಂಗ್ ಅವರು ಶಾಟರ್್ ಪಾಸ್ಗಳ ಮೂಲಕ ಚೆಂಡನ್ನು ಮನದೀಪ್ ಅವರತ್ತ ತಳ್ಳಿದರು. ಅವರು ಇದನ್ನು ಸೊಗಸಾಗಿ ಗುರಿ ಮುಟ್ಟಿಸಿದರು. ಮುಂದಿನ ನಿಮಿಷದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಶ್ರೀಜೇಶ್ ಪಡೆಯ ರಕ್ಷಣಾ ವಿಭಾಗದ ಆಟಗಾರರು ವಿಫಲಗೊಳಿಸಿದರು.  

ಆತಿಥೇಯ ತಂಡವು ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.  60ನೇ ನಿಮಿಷದಲ್ಲಿ ಆಕಾಶ್ ದೀಪ್ ಸಿಂಗ್, ತಂಡಕ್ಕೆ ನಾಲ್ಕನೇ ಗೋಲಿನ ಕಾಣಿಕೆ ನೀಡಿ ತಮ್ಮ ಪಾಳಯದಲ್ಲಿ ಸಂಭ್ರಮ ಮೂಡಿಸಿದರು. ಆ ಮೂಲಕ ಮೂರನೇ ಪಂದ್ಯವನ್ನೂ ಭಾರತ ಜಯಿಸುವ ಮೂಲಕ ಹಾಕಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. (ಫೋಟೊ 2)